ಪಾಣಾಜೆ: ಪಾಣಾಜೆ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಹಾಗೂ ಮಹಿಳಾ ವೇದಿಕೆಯ ವಾರ್ಷಿಕ ಮಹಾಸಭೆ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಜೂ.2ರಂದು ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ನಡೆಯಿತು.
ಭಾಸ್ಕರ ಪೂಜಾರಿ ನಡುಕಟ್ಟ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾಸಭೆಯು ಪಾಣಾಜೆ ಗ್ರಾಮಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಉಡ್ಡಂಗಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್, ಗುರು ಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ಯುವವಾಹಿನಿ ಘಟಕದ ಅಧ್ಯಕ್ಷ ಜಯರಾಮ ಬಿ.ಎನ್., ವಲಯಸಂಚಾಲಕ ಮಾಧವ ಪೂಜಾರಿ ರೆಂಜ ಹಾಗೂ ಪಾಣಾಜೆ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ರಾಧಾ ಬೊಳ್ಳಿಂಬಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಬೋಧ ಪ್ರೌಢಶಾಲೆಯ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಸಾಧಕಿ ಗ್ರೀಷ್ಮ ಉದಯಗಿರಿ ಅವರನ್ನು ಅಭಿನಂದಿಸಲಾಯಿತು.
ಧೃತಿ, ಜ್ಯೋತ್ಸ್ನಾ ಮತ್ತು ಆದ್ಯ ಪ್ರಾರ್ಥಿಸಿದರು. ಬಾಲಕೃಷ್ಣ ಪೂಜಾರಿ ಉಡ್ಡಂಗಳ ಸ್ವಾಗತಿಸಿದರು. ಗ್ರಾಮ ಸಮಿತಿಯ ಉಪಾಧ್ಯಕ್ಷ ರಾಜೇಶ್ ಪೂಜಾರಿ ಆರ್ಲಪದವು ನಿರೂಪಿಸಿದರು.
ಗ್ರಾಮ ಸಮಿತಿಯ ಜತೆ ಕಾರ್ಯದರ್ಶಿ ಯಜ್ಞೇಶ್ ಪಾರ್ಪಳ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಜಿ.ಎಸ್ ಹರೀಶ್ ಆರ್ಲಪದವು ವಂದಿಸಿದರು.