ನೀಟ್ ಹಾಗೂ ಸಿಇಟಿ ಪರೀಕ್ಷೆಗಳಲ್ಲಿ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0

ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಹಾಗೂ ರಾಜ್ಯಮಟ್ಟದ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಯಾದ ಸಿಇಟಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ನೀಟ್ ಪರೀಕ್ಷೆಯಲ್ಲಿ, ಪಿ ಸಿಂಚನ್ ರಾವ್ 576 ಅಂಕಗಳೊಂದಿಗೆ 37488ನ ರ‍್ಯಾಂಕ್‌ ಗಳಿಸಿದ್ದಾರೆ. ಇವರು ಹಳೇನೆರಂಕಿಯ ಮಾಲಿನಿಕೆ ಹಾಗೂ ಪ್ರವೀಣ ಕುಮಾರ ದಂಪತಿಗಳ ಪುತ್ರ. ಯು ಅಮೃತಾದೇವಿ 575 ಅಂಕಗಳೊಂದಿಗೆ 14645 ರ‍್ಯಾಂಕ್‌ ಗಳಿಸಿದ್ದಾರೆ. ಇವರು ಬಿಳಿಯೂರಿನ ಗೀತಾಲಕ್ಷ್ಮಿ ಹಾಗೂ ಯು ಈಶ್ವರಭಟ್ ದಂಪತಿಗಳ ಪುತ್ರಿ. ಮೋಕ್ಷಾ 526 ಅಂಕಗಳೊಂದಿಗೆ 82134 ರ‍್ಯಾಂಕ್‌ ಗಳಿಸಿದ್ದಾರೆ. ಇವರು ಕೋಡಿಂಬಾಡಿಯ ಜಯಂತಿ ಹಾಗೂ ವಿಶ್ವನಾಥ ದಂಪತಿಗಳ ಪುತ್ರಿ. ಧನರಾಜ್ ನಾಯ್ಕ್ ಎಂ 51642 ರ‍್ಯಾಂಕ್‌ ಗಳಿಸಿದ್ದಾರೆ. ಇವರು ಸಜಿಪಮೂಡದ ಉಮಾಶ್ರೀ ಬಿ ಹಾಗೂ ಕೇಶವನಾಯ್ಕ್ ಎಂ ದಂಪತಿಗಳ ಪುತ್ರ.

ಸಿಇಟಿ ಪರೀಕ್ಷೆಯಲ್ಲಿ ಆಕಾಶ್ ಸಾಲಿಯಾನ್ 1976 ರ‍್ಯಾಂಕ್‌ ಗಳಿಸಿದ್ದಾರೆ. ಇವರು ಕಣಿಯೂರಿನ ಅನಿತಾ ಕೆ ಸಾಲಿಯಾನ್ ಹಾಗೂ ಕೇಶವ ದಂಪತಿಗಳ ಪುತ್ರ. ಸುಮಂತ್ ಶೆಟ್ಟಿ ಎಸ್ 4622 ರ‍್ಯಾಂಕ್‌ ಗಳಿಸಿದ್ದಾರೆ. ಇವರು ಪೆರ್ನೆಯ ಹೇಮಲತಾ ಯು ಶೆಟ್ಟಿ ಹಾಗೂ ಉಮಾನಾಥ ಶೆಟ್ಟಿ ಎಸ್ ದಂಪತಿಗಳ ಪುತ್ರ.
ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ಪ್ರತೀ ವರ್ಷದಂತೆ ಈ ವರ್ಷವೂ ಉತ್ತಮ ಶೈಕ್ಷಣಿಕ ಸಾಧನೆ ತೋರಿದ್ದು ಸಂಸ್ಥೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಪ್ರಾಂಶುಪಾಲ ಎಚ್ ಕೆ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here