ಪುತ್ತೂರು: ನೆಹರು ನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಶಾಲಾ ತರಗತಿಗಳನ್ನು ಜೂ.3ರಂದು ವೇ.ಮೂ. ಅಣ್ಣಪ್ಪ ಪುರೋಹಿತರ ನೇತೃತ್ವದಲ್ಲಿ ನಡೆದ ಗಣಪತಿ ಹವನದ ಮೂಲಕ ಪ್ರಾರಂಭಿಸಲಾಯಿತು.
ನಂತರ ಅವರು ಮಕ್ಕಳ ಹಾಗೂ ಶಾಲಾ ಶ್ರೇಯೋಭಿವೃದ್ಧಿಗಾಗಿ ಶುಭ ಆಶೀರ್ವಚನ ನೀಡಿ ಶುಭ ಹಾರೈಸಿದರು. ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ, ಪನ್ನೀರು ಚಿಮುಕಿಸಿ, ಕುಂಕುಮವನ್ನಿಟ್ಟು, ಸಿಹಿಯನ್ನಿತ್ತು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಭರತ್ ಪೈ, ಖಜಾಂಚಿ ವಿಜಯಾನಂದ ಕೈಂತಜೆ, ಪ್ರಾಂಶುಪಾಲೆ ಸಿಂಧು ವಿ.ಜಿ, ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.