ಕಾಣಿಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ Pre K G, LKG , UKG ಜೂ.05ರಂದು ಶಾಲಾರಂಭಗೊಂಡಿದ್ದು, ಪ್ರಗತಿಯ ಅಂಗಣವೆಲ್ಲ ಚಿಣ್ಣರ ಕಲರವದಿಂದ ಕೂಡಿತ್ತು. ಮುದ್ದು ಮುದ್ದು ಪುಟಾಣಿ ಮಕ್ಕಳನ್ನು ಬ್ಯಾಂಡ್ ವಾದ್ಯದೊಂದಿಗೆ ತರಗತಿಗೆ ಬರಮಾಡಿಕೊಳ್ಳಲಾಯಿತು. ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ತರಗತಿಗೆ ಪ್ರವೇಶಿಸಿದ ಪುಟಾಣಿಗಳನ್ನು ದೀಪಾರತಿ ಮಾಡಿ ತಿಲಕವನ್ನಿಟ್ಟು ಹಾರೈಸಲಾಯಿತು . ಪುಟಾಣಿಗಳ ಕೇಕೆ ಅಂತೂ ಎಲ್ಲರ ಮನಸೂರಗೊಂಡಿತು. ತರಗತಿಯ ಕೊಠಡಿಯೆಲ್ಲ ಅಲಂಕಾರಗೊಂಡು ವಿಶೇಷ ಮೆರುಗನ್ನು ನೀಡಿತು . ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಶಾಲ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ, ಮುಖ್ಯಗುರುಗಳಾದ ನಾರಾಯಣ ಭಟ್, ವಿನಯ. ವಿ ಶೆಟ್ಟಿ, ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ ರೈ , ಪೋಷಕ ಬಂಧುಗಳು ಮತ್ತು ಸಿಬ್ಬಂದಿ ವರ್ಗದವರು ಪುಟಾಣಿಗಳೊಂದಿಗೆ ಹೆಜ್ಜೆ ಹಾಕಿದರು. ಶಿಕ್ಷಕಿಯರಾದ ಸವಿತಾ , ಶೃತಿ, ಸುಚೇತ , ರಚನಾ, ರತ್ನ, ರೇವತಿ , ಶಿಲ್ಪ , ಮೇಘನಾ ಮುದ್ದು ಮಕ್ಕಳನ್ನು ಸಮಾಧಾನಿಸುತ್ತಾ ವಿವಿಧ ಆಟಗಳೊಂದಿಗೆ ಮಕ್ಕಳನ್ನು ಮನರಂಜಿಸಿದರು.
ವಿಶೇಷ ಆಕರ್ಷಣೆ: ತರಗತಿಯ ಹೊರಗೆ ಬಲೂನಿನಿಂದ ಮಾಡಿದ ಕಮಾನು , ‘ಮೈ ಫಸ್ಟ್ ಡೇ ” ಫೋಟೋ ಫ್ರೇಮ್ ಆಕರ್ಷಣೀಯವಾಗಿದ್ದು , ಮಕ್ಕಳ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಶಿಕ್ಷಕವೃಂದದವರು ಪುಟಾಣಿಗಳಿಗೆ ಸಿಹಿ ತಿಂಡಿ ತಿನ್ನಿಸಿದರು.