ಪುತ್ತೂರು: ಗಲ್ಫ್ ಯೂತ್ ಕಬಕ ಜಮಾಅತ್ ಸಮಿತಿಗೆ 2024-25ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸುಲೈಮಾನ್ ಕಬಕಕಾರ್ಸ್, ಸಂಚಾಲಕರಾಗಿ ಇಸ್ಮಾಯಿಲ್ ಬಗ್ಗುಮೂಲೆ, ಅಮ್ಜದ್ ಖಾನ್ ಪೋಳ್ಯ (ಕೆಎಸ್‌ಎ), ಅಬ್ದುಲ್ ರವೂಫ್ ದುಬೈ ಅವರನ್ನು ಆಯ್ಕೆ ಮಾಡಲಾಯಿತು.
ಮುಖ್ಯ ಸಲಹೆಗಾರರಾಗಿ ಪೋಳ್ಯ ರಫೀಕ್ ಅಹ್ಮದ್ ಬ್ರೈಟ್, ಇಕ್ಬಾಲ್ ಬಾಕೇಲ್ ಶೇಕ್, ಅಸ್ಲಾಂ ಸಿತಾರ್, ಆಸಿಫ್ ಬಗ್ಗುಮೂಲೆ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಅಶ್ರಫ್ ನೌಷಾದ್ ಪೋಳ್ಯ(ಕೆಎಸ್‌ಎ), ಉಪಾಧ್ಯಕ್ಷರಾಗಿ ಶರೀಫ್ ಕತಾರ್ ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಫೈಸಲ್ ದುಬೈ, ಜೊತೆ ಕಾರ್ಯದರ್ಶಿಯಾಗಿ ನಝೀರ್ ದಿಲ್(ಕೆಎಸ್‌ಎ) ಹಾಗೂ ಕೋಶಾಧಿಕಾರಿಯಾಗಿ ಫೈರೋಝ್ ಕಬಕ ಕುವೈತ್ ಆಯ್ಕೆಯಾಗಿದ್ದಾರೆ.
ಜೊತೆ ಕೋಶಾಧಿಕಾರಿಯಾಗಿ ಅಬೂಬಕ್ಕರ್ ಅಡ್ಯಾಲ್ ಮಸ್ಕತ್, ಲೆಕ್ಕ ಪತ್ರ ಪರಿಶೋಧಕರಾಗಿ ಆಶಿಕ್ ಕತಾರ್ ಆಯ್ಕೆಯಾದರು. ಊರಿನ ಪ್ರತಿನಿಧಿಗಳಾಗಿ ಹಾರಿಸ್ ದಿಲ್, ರಫೀಕ್ ಕಸ್ತೂರಿ ಮತ್ತು ನೌಫಲ್ ಕಬಕಕಾರ್ಸ್ ಅವರನ್ನು ಮುಂದುವರಿಸಲಾಯಿತು.
ಮಹಮ್ಮದ್ ಕುಂಬ್ರ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಪುನರ್ರಚನಾ ಕಾರ್ಯಕ್ರಮದ ಘೋಷಣೆಯನ್ನು ಬಶೀರ್ ಹಾಜಿ, ರವೂಫ್ ದುಬೈ ಹಾಗೂ ಸುಲೈಮಾನ್ ಕಬಕಕಾರ್ಸ್ ನೆರವೇರಿಸಿದರು.