ಪುತ್ತೂರು: ಪಂಜಳದಿಂದ ಪರ್ಪುಂಜಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟು ಹೊಂಡಗಳಿಂದ ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಕಳೆದ ಕೆಲವು ತಿಂಗಳಿಂದ ಈ ರಸ್ತೆಯು ಸಂಪೂರ್ಣ ಹಾಳಾಗಿತ್ತು. ರಸ್ತೆಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಶಾಸಕ ಅಶೋಕ್ ರೈಯವರಲ್ಲಿ ಮನವಿ ಮಾಡಿದ್ದು. ಮನವಿಗೆ ಸ್ಪಂದಿಸಿದ ಶಾಸಕರು ಅದೇ ದಿನ ಜಿ.ಪಂ ಇಂಜನಿಯರ್ಗೆ ಕರೆ ಮಾಡಿ ಪಂಜಳ ಪರ್ಪುಂಜ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ಈ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲು ಸಾಧ್ಯವಿಲ್ಲ. ರಿಕ್ಷಾ ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ. ಈ ರಸ್ತೆಯನ್ನು ತಕ್ಷಣ ವೆಟ್ ಮಿಕ್ಸ್ ಹಾಕಿ ದುರಸ್ಥಿ ಮಾಡಬೇಕು ಎಂದು ಸೂಚನೆಯನ್ನು ನೀಡಿದ್ದರು.
24 ಗಂಟೆಯೊಳಗೆ ದುರಸ್ಥಿ ಕಾರ್ಯ ಪೂರ್ಣ
ರಸ್ತೆಯನ್ನು ದುರಸ್ಥಿ ಮಾಡುವಂತೆ ಶಾಸಕ ಅಶೋಕ್ ರೈಯವರು ಇಂಜಿನಿಯರ್ಗೆ ಸೂಚನೆ ನೀಡಿದ 24 ಗಂಟೆಯೊಳಗೆ ರಸ್ತೆ ಕಾಮಗಾರಿ ನಡೆಸಲಾಗಿದೆ. ವೆಟ್ ಮಿಕ್ಸ್ ಹಾಕಿ ಹೊಂಡವನ್ನು ಮುಚ್ಚಲಾಗಿದೆ. ಕಳೆದ ಕೆಲವು ತಿಂಗಳಿಂದ ಹೊಂಡಮಯವಾಗಿದ್ದ ರಸ್ತೆಗೆ ಮುಕ್ತಿ ನೀಡಲಾಗಿದೆ.
ತಮ್ಮ ಸಂಕಷ್ಟದ ಬಗ್ಗೆ ಕುರಿಯ ಆಟೋ ಚಾಲಕರು ಮನವಿ ಮಾಡಿ ತಿಳಿಸಿದ್ದರು. ಮಳೆಗಾಲವಾದ್ದರಿಂದ ತಕ್ಷಣಕ್ಕೆ ಡಾಮರು ಹಾಕಲು ಸಾಧ್ಯವಿಲ್ಲ ಈ ಕಾರಣಕ್ಕೆ ವೆಟ್ ಮಿಕ್ಸ್ ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದೇನೆ. ಅದರಂತೆ ದುರಸ್ಥಿ ಕಾರ್ಯ ನಡೆದಿದೆ.
ನಮ್ಮ ಮನವಿಗೆ ಶಾಸಕರು 24 ಗಂಟೆಯೊಳಗೆ ಸ್ಪಂದನೆ ನೀಡಿದ್ದಾರೆ. ಆಟೋ ಸಂಚಾರಕ್ಕೆ ತೀರಾ ಸಂಕಷ್ಟವಾಗುತ್ತಿತ್ತು, ವೆಟ್ ಮಿಕ್ಸ್ ಹಾಕುವ ಮೂಲಕ ಸಮಸ್ಯೆ ಇತ್ಯರ್ಥ ಮಾಡಿದ್ದಾರೆ. ಆಟೋ ಚಾಲಕರ ನೋವಿಗೆ ಸ್ಪಂದಿಸಿದ ಶಾಸಕರಿಗೆ ಅಭಿನಂದನೆಗಳು
ಹಸೈನಾರ್ ಅಜ್ಜಿಕಟ್ಟೆ ಅಧ್ಯಕ್ಷ
ರಮೇಶ್ , ಕಾರ್ಯದರ್ಶಿ
ಕುರಿಯ ಆಟೋ ಚಾಲಕರ ಸಂಘ