ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬ್ರ ಸಮೀಪದ ಶೇಖಮಲೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ವಾಲಿಕೊಂಡಿದ್ದ ಅಪಾಯಕಾರಿ ಮರಗಳನ್ನು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರ ಸೂಚನೆ ಮೇರೆಗೆ ಅರಣ್ಯ ಇಲಾಖಾ ಅಧಿಕಾರಿಗಳು ಜು.2 ರಂದು ತೆರವುಗೊಳಿಸಿದರು. ಇಲ್ಲಿ ಅಪಾಯಕಾರಿಯಾದ 2 ಮರಗಳಿವೆ ಎಂಬುದನ್ನು ಶಾಸಕರ ಗಮನಕ್ಕೆ ತರಲಾಗಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಮರವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಮರಗಳನ್ನು ತೆರವು ಮಾಡುವ ಮೂಲಕ ಸಂಭವಿಸುವ ಅನಾಹುತವನ್ನು ತಪ್ಪಿಸಲಾಗಿದೆ. ಈ ಸಂದರ್ಭದಲ್ಲಿ ಅರಿಯಡ್ಕ ವಲಯ ಅರಣ್ಯ ಅಧಿಕಾರಿ ಮದನ್ ಬಿ.ಕೆ ಹಾಗೂ ಸಿಬ್ಬಂದಿಗಳು, ಮೆಸ್ಕಾಂ ಪವರ್‌ಮೆನ್‌ಗಳು ಹಾಗೂ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೈನ್ ಕೌಡಿಚ್ಚಾರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
‘ ಶೇಖಮಲೆಯಲ್ಲಿ ಅಪಾಯಕಾರಿ ಮರಗಳಿರುವ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿತ್ತು.ಇದಕ್ಕೆ ಅವರು ತಕ್ಷಣ ಸ್ಪಂದಿಸಿ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿ ಮರಗಳನ್ನು ತೆರವು ಮಾಡುವ ಮೂಲಕ ಮುಂದೆ ಬರುವ ಅಪಾಯವನ್ನು ತಪ್ಪಿಸಿದ್ದಾರೆ. ಜನಹಿತ ಕಾಳಜಿ ಹೊಂದಿರುವ ಪುತ್ತೂರು ಶಾಸಕರ ಕಾರ್ಯವನ್ನು ಶ್ಲಾಘಸಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ.’
ಇಕ್ಬಾಲ್ ಹುಸೈನ್ ಕೌಡಿಚ್ಚಾರ್, ಅಧ್ಯಕ್ಷರು ಅರಿಯಡ್ಕ ವಲಯ ಕಾಂಗ್ರೆಸ್