ರೋಟರಿ ಪುತ್ತೂರು ಸಿಟಿ ಪದ ಪ್ರದಾನ

0

ಕಷ್ಟದಲ್ಲಿರುವವರಿಗೆ ನೆರವಾಗುವವರೇ ಫಲಾನುಭವಿಗಳಿಗೆ ದೇವರು-ಲಕ್ಷ್ಮೀನಾರಾಯಣ

ಪುತ್ತೂರು: ಪರಸ್ಪರ ಗೌರವ, ಒಳ್ಳೆಯ ಸಂಬಂಧ, ಸ್ನೇಹಪರತೆ, ಪ್ರೀತಿ, ನಗುಮುಖದ ವ್ಯಕ್ತಿತ್ವಗಳೆಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ನಾವು ಉನ್ನತ ಸ್ಥಾನವನ್ನು ಹೊಂದಲು ಸಹಕಾರಿಯಾಗುತ್ತದೆ. ಅದರಂತೆ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣವಿದ್ದಾಗ ಫಲಾನುಭವಿಗಳ ಪಾಲಿಗೆ ನಾವು ದೇವರು ಆಗಬಲ್ಲರು ಎಂದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3180 ಇದರ ಪಿಡಿಜಿ ಮೇಜರ್ ಡೋನರ್ ಎಂ.ಲಕ್ಷ್ಮೀನಾರಾಯಣರವರು ಹೇಳಿದರು.


ಜು.2 ರಂದು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ನಡೆದ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿಯ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು. ಸಮಾಜದಲ್ಲಿ ಮ್ಯಾಜಿಕ್ ಮಾಡುವವರಾಗಬೇಕು ಎನ್ನುವ ಅಂತರ್ರಾಷ್ಟ್ರೀಯ ರೋಟರಿ ಅಧ್ಯಕ್ಷರ ಧ್ಯೇಯವಾಕ್ಯದಂತೆ ನಾವು ಮಾಡುವ ಸಮಾಜಮುಖಿ ಪ್ರಾಜೆಕ್ಟ್‌ಗಳು ನಿಜಕ್ಕೂ ಮ್ಯಾಜಿಕ್ ಮಾಡುವಂತಾಗಬೇಕು. ಸಮಾಜಮುಖಿ ಕಾರ್ಯಗಳೊಂದಿಗೆ ರೋಟರಿ ಜನಸಾಮಾನ್ಯರ ಧ್ವನಿಯಾಗಬೇಕಿದೆ. ಸಾಮಾಜಿಕ, ಆರೋಗ್ಯ, ವಿದ್ಯಾ ಕ್ಷೇತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಮಾಡುವಂತಹ ಕಾರ್ಯಕ್ರಮಗಳ ರೋಟರಿಯ ಯೋಚನಾಲಹರಿ ಮೆಚ್ಚಬೇಕಾದ್ದು ಎಂದರು.

ಚಿತ್ರ:ಜೀತ್ ಪುತ್ತೂರು


ಸಕಾರಾತ್ಮಕ ಧೋರಣೆಯಿದ್ದಾಗ ಸಾಧನೆ ಸಾಧ್ಯ-ಜಯರಾಮ್ ರೈ:
ಬುಲೆಟಿನ್ ಎಡಿಟರ್ ಡಾ.ಹರಿಕೃಷ್ಣ ಪಾಣಾಜೆ ಸಂಪಾದಕತ್ವದ ಕ್ಲಬ್ ಬುಲೆಟಿನ್ “ರೋಟ ವಿಕಾಸ” ಅನ್ನು ಅನಾವರಣಗೊಳಿಸಿದ ರೋಟರಿ ಅಸಿಸ್ಟೆಂಟ್ ಗವರ್ನರ್ ಜಯರಾಮ ರೈ ಮಾತನಾಡಿ, ಯಾವುದೇ ವ್ಯಕ್ತಿಯಲ್ಲಿ ನಕಾರಾತ್ಮಕ ಧೋರಣೆಯಿದ್ದಾಗ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಲಾರದು. ಅದೇ ರೀತಿ ಸಕಾರಾತ್ಮಕ ಧೋರಣೆಯೊಂದಿಗೆ ನಂಬಿಕೆ ಹೊಂದಿದ್ದಲ್ಲಿ ಯಾವುದೇ ಕಾರ್ಯಕ್ರಮ ಯಶಸ್ವಿ ಆಗಲು ಸಾಧ್ಯ ಮಾತ್ರವಲ್ಲ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜಿಲ್ಲಾ ಗವರ್ನರ್ ರವರ ಒಂಭತ್ತು ಜಿಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಪ್ರಸಕ್ತ ವರ್ಷದಲ್ಲಿ ಮ್ಯಾಜಿಕ್ ಮಾಡುವವರಾಗಿ ಎಂದರು.


ಎಲ್ಲರ ಸಹಕಾರದಿಂದ ಕ್ಲಬ್‌ನ್ನು ಮುನ್ನೆಡೆಸಿದ ಆತ್ಮತೃಪ್ತಿಯಿದೆ-ಗ್ರೇಸಿ ಗೊನ್ಸಾಲ್ವಿಸ್:
ಕ್ಲಬ್ ನಿರ್ಗಮಿತ ಅಧ್ಯಕ್ಷೆ ಹಾಗೂ ಪ್ರಸಕ್ತ ಸಾಲಿನ ವಲಯ ಸೇನಾನಿ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿ, ವಿಶ್ವದಲ್ಲಿ ಭರವಸೆ ಮೂಡಿಸುವ ಘೋಷಣೆಯೊಂದಿಗೆ ಕ್ಲಬ್‌ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಎಲ್ಲರ ಸಹಕಾರದಿಂದ ಕ್ಲಬ್ ಅನ್ನು ಮುನ್ನೆಡೆಸಿದ್ದೇನೆ ಎಂಬ ಆತ್ಮತೃಪ್ತಿಯಿದೆ. ಜಿಲ್ಲಾ ಯೋಜನೆಯಾದ ಅಂಗನವಾಡಿಗಳ ಪುನಶ್ಚೇತನ ಸೇವಾ ಯೋಜನೆಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ, ಕ್ಲಬ್ ನಿರ್ವಹಿಸಿದ ಸಮಾಜಮುಖಿ ಕಾರ್ಯಗಳಿಗೆ ಪ್ರತಿಷ್ಠಿತ ಪ್ಲಾಟಿನಂ ಫ್ಲಸ್ ಅವಾರ್ಡ್, ಸದಸ್ಯತನ ಅಭಿವೃದ್ಧಿಗೆ ಪ್ರಶಸ್ತಿ ಕ್ಲಬ್ ಗಳಿಸಿದೆ. ಜೊತೆಗೆ ರೋಟರಿ ಫೌಂಡೇಷನ್‌ಗೆ ಟಿ.ಆರ್.ಎಫ್ ದೇಣಿಗೆ ಮೂಲಕ ಸಹಕರಿಸಿದ ಸದಸ್ಯರ ಪ್ರೋತ್ಸಾಹ ಶ್ಲಾಘನೀಯ. ಕ್ಲಬ್‌ನ ಹಿರಿ-ಕಿರಿಯ ಸದಸ್ಯರಿಂದ ಸಿಕ್ಕಂತಹ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸುತ್ತಾ ನೂತನ ತಂಡಕ್ಕೆ ಶುಭ ಹಾರೈಸಿದರು.


ಮಹತ್ವಾಕಾಂಕ್ಷಿ ಯೋಜನೆಗಳೊಂದಿಗೆ ಕ್ಲಬ್ ಉತ್ತುಂಗಕ್ಕೇರಿಸಿ-ಡಾ.ರವಿಪ್ರಕಾಶ್:
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಡಾ.ರವಿಪ್ರಕಾಶ್ ಮಾತನಾಡಿ, ನಿರ್ಗಮಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್‌ರವರ ತಂಡ ಅತ್ಯುತ್ತಮ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿದೆ. ಅದರಂತೆ ನೂತನ ಅಧ್ಯಕ್ಷ ಮೊಹಮ್ಮದ್ ಸಾಹೇಬ್‌ರವರ ನೇತೃತ್ವದಲ್ಲಿ ಇನ್ನೂ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಟಾನಗೊಳಿಸಿ ಕ್ಲಬ್ ಅನ್ನು ಉತ್ತುಂಗಕ್ಕೇರಿಸಲು ಎಲ್ಲರೂ ಸಹಕಾರ ನೀಡುವವರಾಗಿ ಎಂದರು.


ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಪುತ್ತೂರು ಬಾರ್ ಅಸೋಸಿಯೇಷನ್‌ನ ಸದಸ್ಯೆ, ನ್ಯಾಯವಾದಿ ಅಕ್ಷತಾ, ಪುತ್ತೂರು ಕೆನರಾ ಬ್ಯಾಂಕ್ ಎಜಿಎಂ ರಂಜನ್ ಕುಮಾರ್, ರೋಟರಿ ಸಿಟಿಯ ಚಾರ್ಟರ್ ಸದಸ್ಯರಾಗಿದ್ದು ಅನಿವಾರ್ಯ ಕಾರಣಗಳಿಂದ ಕ್ಲಬ್‌ನಿಂದ ದೂರವಿದ್ದು ಪ್ರಸ್ತುತ ಸದಸ್ಯರಾಗಿ ಸೇರಿಕೊಂಡ ನಿವೃತ್ತ ವಿಜಯಾ ಬ್ಯಾಂಕ್ ಉದ್ಯೋಗಿ, ಅಪೂರ್ವ ಟ್ರೇಡರ‍್ಸ್ ಮಾಲಕ ಆನಂದ ಉಡುಪರವರುಗಳಿಗೆ ಪದ ಪ್ರದಾನ ಅಧಿಕಾರಿ ಮೇಜರ್ ಡೋನರ್ ಎಂ.ಲಕ್ಷ್ಮೀನಾರಾಯಣರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು.


ಅಭಿನಂದನಾ ಸನ್ಮಾನ:
2023-24ನೇ ಸಾಲಿನಲ್ಲಿ ಕ್ಲಬ್ ಅನ್ನು ಯಶಸ್ವಿಯಾಗಿ ಮುನ್ನೆಡೆಸಿದ ನಿರ್ಗಮಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ಕಾರ್ಯದರ್ಶಿ ಶ್ಯಾಮಲಾ ಪಿ.ಶೆಟ್ಟಿ ಹಾಗೂ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್‌ರವರುಗಳನ್ನು ನೂತನ ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.


ಪಿಎಚ್‌ಎಫ್ ಗೌರವ:
ಇಂಟರ್‌ನ್ಯಾಷನಲ್ ಸರ್ವಿಸ್‌ನಡಿಯಲ್ಲಿ ರೋಟರಿ ಫೌಂಡೇಶನ್‌ನ ಟಿಆರ್‌ಎಫ್ ದೇಣಿಗೆ ನೀಡಿ ಪಿಎಚ್‌ಎಫ್ ಪದವಿ ಪಡೆದ ಸುರೇಂದ್ರ ಕಿಣಿ, ಕಿರಣ್ ಬಿ.ವಿ, ಲಾರೆನ್ಸ್ಗೊ ನ್ಸಾಲ್ವಿಸ್‌ರವರುಗಳನ್ನು ಅಭಿನಂದಿಸಲಾಯಿತು.


ಜಿಲ್ಲಾ ಪ್ರತಿನಿಧಿಗಳಿಗೆ ಗೌರವ:
ಕ್ಲಬ್ ಸದಸ್ಯರಾಗಿದ್ದು ಜಿಲ್ಲಾ ಪ್ರತಿನಿಧಿಗಳಾಗಿ ವಿವಿಧ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವ ಗ್ರೇಸಿ ಗೊನ್ಸಾಲ್ವಿಸ್(ವಲಯ ಸೇನಾನಿ), ಸುರೇಂದ್ರ ಕಿಣಿ(ಚೇರ್ಮನ್-ಇಂಟರ್ ಡಿಸ್ಟ್ರಿಕ್ಟ್ ಫ್ಯಾಮಿಲಿ ಎಕ್ಸ್‌ಚೇಂಜ್), ಡಾ.ಶಶಿಧರ್ ಕಜೆ(ಚೇರ್ಮನ್-ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಸಿಪಿಆರ್), ಸ್ವಾತಿ ಮಲ್ಲಾರ(ಕಾನ್ಫರೆನ್ಸ್ ನವವೈಭವ-ವೈಸ್ ಚೇರ್ಮನ್), ಜಯಕುಮಾರ್ ರೈ(ವೈಸ್ ಚೇರ್ಮನ್-ಮೆಂಬರ್‌ಶಿಪ್ ಡೆವಲಪ್ಮೆಂಟ್), ಪ್ರಶಾಂತ್ ಶೆಣೈ(ಸ್ಪೋರ್ಟ್ಸ್), ಪ್ರಮೋದ್ ಮಲ್ಲಾರ(ವೈಸ್ ಚೇರ್ಮನ್-ರೋಟರಿ ಪ್ರೀಮಿಯರ್ ಲೀಗ್), ನಟೇಶ್ ಉಡುಪ(ವೈಸ್ ಚೇರ್ಮನ್-ಸಾಂಸ್ಕೃತಿಕ), ಡಾ.ಹರಿಕೃಷ್ಣ ಪಾಣಾಜೆ(ವೈಸ್ ಚೇರ್ಮನ್-ಥೀಮ್ ಪ್ರಮೋಶನ್), ಲಾರೆನ್ಸ್ ಗೊನ್ಸಾಲ್ವಿಸ್(ವೈಸ್ ಚೇರ್ಮನ್-ಸ್ಕಿಲ್ ಡೆವಲಪ್ಮೆಂಟ್), ಜೋನ್ ಕುಟಿನ್ಹಾ(ವೈಸ್ ಚೇರ್ಮನ್-ಚೈಲ್ಡ್ ಡೆವಲಪ್ಮೆಂಟ್), ಜಯಗುರು ಆಚಾರ್(ವೈಸ್ ಚೇರ್ಮನ್-ಆನಿಮಲ್ ಕೇರ್), ಉಮೇಶ್ಚಂದ್ರ(ವೈಸ್ ಚೇರ್ಮನ್-ಇಂಟರ್ ನ್ಯಾಷನಲ್ ಇವೆಂಟ್ಸ್), ಗುರುರಾಜ್ ಕೆ(ವೈಸ್ ಚೇರ್ಮನ್-ರೋಟರಿ ಫ್ರೆಂಡ್ಸ್‌ಶಿಪ್ ಎಕ್ಸ್‌ಚೇಂಜ್), ಜೆರೋಮಿಯಸ್ ಪಾಯಿಸ್(ವೈಸ್ ಚೇರ್ಮನ್-ಸ್ಕಾಲರ್‌ಶಿಪ್ ಸಬ್ ಕಮಿಟಿ)ರವರುಗಳನ್ನು ಅಭಿನಂದಿಸಲಾಯಿತು.


ಎಸೆಸ್ಸೆಲ್ಸಿ/ಪಿಯುಸಿ ಟಾಪರ‍್ಸ್ ಅಭಿನಂದನೆ:
ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಟಾಪರ್ಸ್ ಎನಿಸಿದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಕ್ಷತಾಗಂಗ(621 ಅಂಕ), ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರೀಯಾ(621 ಅಂಕ)ರವರಿಗೆ, ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ, ರಾಜ್ಯದಲ್ಲಿ ಐದನೇ ಸ್ಥಾನ ಗಳಿಸಿದ ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವರುಣ್ ಎಂ, ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ, ರಾಜ್ಯದಲ್ಲಿ ಏಳನೇ ಸ್ಥಾನ ಗಳಿಸಿದ ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಿರಾಂ ಭಟ್, ಕಲಾ ವಿಭಾಗದಲ್ಲಿ ತಾಲೂಕಿಗೆ ಪ್ರಥಮ, ರಾಜ್ಯದಲ್ಲಿ ಮೂರನೇ ಸ್ಥಾನ ಗಳಿಸಿದ ಪುರೋಹಿತ್ ಋಷಿಬೆನ್‌ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.


ಕ್ಲಬ್ ಪ್ರತಿಭೆಗಳಿಗೆ ಗೌರವ:
ಕ್ಲಬ್ ಸದಸ್ಯರ ಪ್ರತಿಭಾವಂತ ಮಕ್ಕಳಾದ ಪ್ರಶಾಂತ್ ಶೆಣೈ-ಅಕ್ಷತಾ ಶೆಣೈಯವರ ಪುತ್ರ ಪವನ್ ಶೆಣೈ(ಸಿ.ಬಿ.ಎಸ್.ಇ ಎಸೆಸ್ಸೆಲ್ಸಿ), ಲಕ್ಷ್ಮೀಕಾಂತ್ ಆಚಾರ್ಯ-ವೇದಾ ಲಕ್ಷ್ಮೀಕಾಂತ್ ಆಚಾರ್ಯರವರ ಪುತ್ರಿ ಆರುಂಧತಿ ಆಚಾರ್ಯ(ಸಿ.ಬಿ.ಎಸ್.ಇ ಎಸೆಸ್ಸೆಲ್ಸಿ), ಶಶಿಧರ್ ರೈ-ರೇಷ್ಮಾ ರೈಯವರ ಪುತ್ರ ತನ್ಮಯ್(ಸಿ.ಬಿ.ಎಸ್.ಇ ಎಸೆಸ್ಸೆಲ್ಸಿ), ರಾಮಚಂದ್ರ ಉಡುಪ-ಪ್ರಸನ್ನರವರ ಪುತ್ರಿ ಮಾನ್ಯ(ಎಸೆಸ್ಸೆಲ್ಸಿ), ಮಮತಾ ಉದಯ ಶೆಟ್ಟಿಯವರ ಪುತ್ರಿ ಪೂರ್ವಿ(ಎಸೆಸ್ಸೆಲ್ಸಿ), ಡೆನ್ನಿಸ್ ಮಸ್ಕರೇನ್ಹಸ್-ಟೆಲ್ಮಾ ಮಸ್ಕರೇನ್ಹಸ್‌ರವರ ಪುತ್ರ ಡಿಯೋನ ಮಸ್ಕರೇನ್ಹಸ್(ಎಸೆಸ್ಸೆಲ್ಸಿ), ಸುಧಾಕರ ಶೆಟ್ಟಿ-ಶಿಲ್ಪಾ ಶೆಟ್ಟಿರವರ ಪುತ್ರಿ ಸಮೃದ್ಧಿ(ಪಿಯುಸಿ), ಹರಿಣಿ-ಸತೀಶ್‌ರವರ ಪುತ್ರಿ ಸಂಜನಾ(ಪಿಯುಸಿ), ಅಬ್ದುಲ್ ರಹಿಮಾನ್-ರಝೀಯಾರವರ ಪುತ್ರಿ ಹಲೀಮಾ(ಪಿಯುಸಿ), ಸುಜಿತ್ ಕುಮಾರ್-ಸ್ಮಿತಾರವರ ಪುತ್ರ ಸಂಚಯ್(ಪಿಯುಸಿ), ಧರ್ಣಪ್ಪ ಗೌಡ-ನಿರ್ಮಲರವರ ಪುತ್ರ ಧನುಷ್(ಬಿ.ಇ), ಪ್ರಮೋದ್ ಮಲ್ಲಾರ-ಸ್ವಾತಿ ಮಲ್ಲಾರರವರ ಪುತ್ರಿ ಲಿಖಿತಾ ಮಲ್ಲಾರ(ಕಾನೂನು ಪದವಿ), ಮಣಿಪಾಲ್ ಕಸ್ತೂರ್ಬಾ ಮೆಡಿಕಲ್ ಕಾಲೇಜು ಇವರಿಂದ ಕೊಡಲ್ಪಡುವ ಯಂಗ್ ರಿಸರ್ಚ್ ಅವಾರ್ಡ್ ವಿಜೇತೆ ಮನೋಹರ್ ಕೊಳಕ್ಕಿಮಾರ್-ಪ್ರಫುಲ್ಲರವರ ಪುತ್ರಿ ಅಶ್ವಿಜಾ ಕೊಳಕ್ಕಿಮಾರ್, ರೇವಾ ವಿ.ವಿಯಿಂದ ಮಾಸ್ಟರ್ಸ್ ಪದವಿ ಪಡೆದ ಪದ್ಮನಾಭ ಶೆಟ್ಟಿ-ಶ್ಯಾಮಲಾ ಶೆಟ್ಟಿರವರ ಪುತ್ರಿ ಅಕ್ಷತಾ ಶೆಟ್ಟಿ, ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ನಾಯಕನಾಗಿ ಆಯ್ಕೆಯಾದ ಶ್ಯಾಮ್‌ಜಿತ್-ರಶ್ಮಿ ರೈಯವರ ಪುತ್ರ ಹರುಷ್ ರೈ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ನಾಯಕನಾಗಿ ಆಯ್ಕೆಯಾದ ಸುಧಾಕರ್ ಶೆಟ್ಟಿ-ಶಿಲ್ಪ ಶೆಟ್ಟಿರವರ ಪುತ್ರ ಸಾಕ್ಷಾತ್ ಶೆಟ್ಟಿರವರುಗಳನ್ನು ಅಭಿನಂದಿಸಲಾಯಿತು.


ಗುರುತಿಸುವಿಕೆ:
ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್‌ರವರ ಕಾಲೇಜು ಶುಲ್ಕ ರೂ.5500 ಹಾಗೂ ಪುಸ್ತಕಗಳನ್ನು ನೀಡಿದ ಕ್ಲಬ್‌ನ ಅಕ್ಷತಾ ಪ್ರಶಾಂತ್ ಶೆಣೈ, ಕೊಂಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ವಿಷಯದಲ್ಲಿ 95+ ಅಂಕಗಳನ್ನು ಗಳಿಸಿದ 22 ಮಮದಿ ವಿದ್ಯಾರ್ಥಿಗಳಿಗೆ ರೂ.80 ಸಾವಿರ ನಗದು ಬಹುಮಾನವನ್ನು ನೀಡಿದ ಕ್ಲಬ್ ಸದಸ್ಯ ಪ್ರಕಾಶ್ ಕೆ.ವಿ, ಎಸೆಸ್ಸೆಲ್ಸಿ ಹಾಗೂ ಪಿಯುಸಿ ಟಾಪರ‍್ಸ್‌ಗಳಿಗೆ ವಾಚ್ ಅನ್ನು ಬಹುಮಾನವಾಗಿ ನೀಡಿದ ಯೂಸುಫ್ ಹಾಜಿ, ಪದ ಪ್ರದಾನ ಕಾರ್ಯಕ್ರಮಕ್ಕೆ ಸಭಾಂಗಣವನ್ನು ನೀಡಿ ಸಹಕರಿಸಿದ ಕೊಟೇಚಾ ಹಾಲ್‌ನ ಮಾಲಕ ಶಶಾಂಕ್ ಕೊಟೇಚಾರವರುಗಳನ್ನು ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಹುಟ್ಟುಹಬ್ಬವನ್ನು, ವೈವಾಹಿಕ ಜೀವನದ ಸಂಭ್ರಮವನ್ನು ಆಚರಿಸಿದ ಹಾಗೂ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಸಹಕರಿಸಿದವರಿಗೆ ಹೂ ನೀಡಿ ಗೌರವಿಸಲಾಯಿತು.
ಪ್ರೇಮ್ ಕುಮಾರ್ ಪ್ರಾರ್ಥಿಸಿದರು. ಕ್ಲಬ್ ನಿರ್ಗಮಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ರಾಮಚಂದ್ರ ವಂದಿಸಿದರು. ಸುರೇಂದ್ರ ಕಿಣಿ, ಮನೋಹರ್ ಕೊಳಕ್ಕೆಮಾರ್, ಡಾ.ಪೊಡಿಯ, ಹರಿಣಿ ಸತೀಶ್‌ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ನಿರ್ಗಮಿತ ಕಾರ್ಯದರ್ಶಿ ಶ್ಯಾಮಲಾ ಪಿ.ಶೆಟ್ಟಿ ವರದಿ ಮಂಡಿಸಿದರು. ಕೃಷ್ಣಮೋಹನ್ ಪಿ.ಎಸ್, ಜಯಕುಮಾರ್ ರೈ ಎಂ.ಆರ್, ಉಮೇಶ್ಚಂದ್ರ ಬಿ., ಉಲ್ಲಾಸ್ ಪೈ, ಕೃಷ್ಣವೇಣಿ ರೈಯವರು ಅತಿಥಿಗಳ ಪರಿಚಯ ಮಾಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಧರ್ಣಪ್ಪ ಗೌಡ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಪ್ರಜ್ವಲ್ ರೈ ಸೊರಕೆ, ವೊಕೇಶನಲ್ ಸರ್ವಿಸ್ ನಿರ್ದೇಶಕಿ ಸ್ವಾತಿ ಮಲ್ಲಾರ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ನಟೇಶ್ ಉಡುಪ, ಯೂತ್ ಸರ್ವಿಸ್ ನಿರ್ದೇಶಕ ಗುರುರಾಜ್ ಕೆ., ಸಾರ್ಜಂಟ್ ಅಟ್ ಆರ್ಮ್ಸ್ ಜ್ಯೋ ಡಿ’ಸೋಜರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಧರ್ಣಪ್ಪ ಗೌಡ ಹಾಗೂ ಲೀನಾ ಪಾಯಿಸ್ ಕಾರ್ಯಕ್ರಮ ನಿರೂಪಿಸಿದರು.


ಕ್ಲಬ್ ಉತ್ತುಂಗಕ್ಕೇರಿಸಲು ಬದ್ಧ..
ಪ್ರತಿಷ್ಠಿತ ರೋಟರಿ ಸಂಸ್ಥೆಗೆ ಪರಿಚಯಿಸಿದ ರೋಟರಿ ಭೀಷ್ಮ ಕೆ.ಆರ್ ಶೆಣೈಯವರನ್ನು ಹೃದಯಾಂತರಾಳದಿಂದ ಸ್ಮರಿಸುತ್ತಿದ್ದು ಅವರ ಆಸೆಯಂತೆ ಇಂದು ನಾನು ಕ್ಲಬ್‌ಗೆ ಅಧ್ಯಕ್ಷನಾಗಿದ್ದೇನೆ. ಕ್ಲಬ್ ಸದಸ್ಯರ ಒಮ್ಮತದ ಆಭ್ಯರ್ಥಿಯಾಗಿ ಕ್ಲಬ್ ಅನ್ನು ಮುನ್ನೆಡೆಸಲು ಉತ್ಸುಕನಾಗಿದ್ದು ರೋಟರಿಯ ಧ್ಯೇಯಗಳನ್ನು ಜೊತೆಗೆ ಜಿಲ್ಲಾ ಪ್ರಾಜೆಕ್ಟ್‌ಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ. ಕ್ಲಬ್ ಸದಸ್ಯರ ಮನಪೂರ್ವಕ ಸಹಕಾರದಿಂದ ಕ್ಲಬ್ ಅನ್ನು ಉತ್ತುಂಗಕ್ಕೇರಿಸಲು ಬದ್ಧನಾಗಿದ್ದೇನೆ.
-ಮೊಹಮ್ಮದ್ ಸಾಹೇಬ್, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು

ಸನ್ಮಾನ..
ವೊಕೇಶನಲ್ ಸರ್ವಿಸ್‌ನಡಿಯಲ್ಲಿ ಪುತ್ತೂರು ಘಟಕದ ಹಿರಿಯ ಗೃಹರಕ್ಷಕ ಸೆಕ್ಷನ್ ಲೀಡರ್ ಆಗಿ 24 ವರ್ಷದ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಇತ್ತೀಚಿಗೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಗಳಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭದ್ರತಾ ಸಿಬ್ಬಂದಿ ಆಗಿರುವ ಜಗನ್ನಾಥ್ ಪಿ, ಮೆಸ್ಕಾಂ ವಿಭಾಗದಲ್ಲಿ 24*7 ಸೇವೆ ಸಲ್ಲಿಸುತ್ತಿರುವ ಮೆಕ್ಯಾನಿಕ್ ವಿಶ್ವನಾಥ, ಪವರ್‌ಮ್ಯಾನ್ ಪೂವಪ್ಪ ಗೌಡರವರನ್ನು ವೊಕೇಶನಲ್ ಸರ್ವಿಸ್‌ನಡಿಯಲ್ಲಿ ಸನ್ಮಾನಿಸಲಾಯಿತು.

ಸೇವಾ ಕೊಡುಗೆಗಳು..
ಕಮ್ಯೂನಿಟಿ ಸರ್ವಿಸ್‌ನಡಿಯಲ್ಲಿ ಪಾರ್ಶ್ವವಾಯು ಪೀಡಿತರಾದ ಸಾಜ ಗ್ರಾಮದ ಅಪ್ಪಯ್ಯ ನಾಯ್ಕರವರಿಗೆ ಅವರ ಪರವಾಗಿ ಅವರ ಪುತ್ರ ನಿರಂಜನ್ ನಾಯ್ಕರವರಿಗೆ ರೋಟರಿ ಸದಸ್ಯ ಜಯಕುಮಾರ್ ರೈ ಎಂ.ಆರ್(21ನೇ ಬಾರಿ)ರವರ ಪ್ರಾಯೋಜಕತ್ವದಲ್ಲಿ ವ್ಹೀಲ್‌ಚೇರ್, ನೂತನ ಕಾರ್ಯದರ್ಶಿ ರಾಮಚಂದ್ರರವರ ಪ್ರಾಯೋಜಕತ್ವದಲ್ಲಿ ಸಜಂಕಾಡಿ ಸರಕಾರಿ ಶಾಲೆಗೆ ವರ್ಲಿ ಪೇಂಯ್ಟಿಂಗ್ ವೆಚ್ಚದ ಚೆಕ್ ಅನ್ನು ಶಿಕ್ಷಕ ಜಯಕುಮಾರ್‌ರವರಿಗೆ, ಸದಸ್ಯ ನಟೇಶ್ ಉಡುಪರವರ ಪ್ರಾಯೋಜಕತ್ವದಲ್ಲಿ ಸಂಪ್ಯ ಸರಕಾರಿ ಶಾಲೆಗೆ ಎರಡು ಫ್ಯಾನ್‌ಗಳನ್ನು ಶಾಲೆಯ ಮುಖ್ಯ ಶಿಕ್ಷಕಿ ಮೋಹಿನಿರವರಿಗೆ ಸೇವಾ ಕೊಡುಗೆಯಾಗಿ ಹಸ್ತಾಂತರಿಸಲಾಯಿತು.

ಪದ ಪ್ರದಾನ..
ನೂತನ ಅಧ್ಯಕ್ಷರಾದ ಮೊಹಮ್ಮದ್ ಸಾಹೇಬ್, ಕಾರ್ಯದರ್ಶಿ ರಾಮಚಂದ್ರ, ಕೋಶಾಧಿಕಾರಿ ದಯಾನಂದ ಕೆ.ಎಸ್, ನಿ.ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ಉಪಾಧ್ಯಕ್ಷ ಉಮೇಶ್ಚಂದ್ರ ಬಿ, ಜೊತೆ ಕಾರ್ಯದರ್ಶಿ ಮೋಹನ್ ಮುತ್ಲಾಜೆ, ಸಾರ್ಜಂಟ್ ಎಟ್ ಆರ್ಮ್ಸ್ ಜ್ಯೋ ಡಿ’ಸೋಜ, ಕ್ಲಬ್ ಸರ್ವಿಸ್ ನಿರ್ದೇಶಕ ಧರ್ಣಪ್ಪ ಗೌಡ, ವೊಕೇಶನಲ್ ಸರ್ವಿಸ್ ನಿರ್ದೇಶಕಿ ಸ್ವಾತಿ ಮಲ್ಲಾರ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಪ್ರಜ್ವಲ್ ರೈ ಸೊರಕೆ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ನಟೇಶ್ ಉಡುಪ, ಯೂತ್ ಸರ್ವಿಸ್ ನಿರ್ದೇಶಕ ಗುರುರಾಜ್ ಕೆ, ಚೇರ್‌ಮ್ಯಾನ್‌ಗಳಾದ ಮೊಹಮದ್ ಸಾದಿಕ್(ಟಿ.ಆರ್.ಎಫ್), ಡಾ.ಪೊಡಿಯ(ಸಿಎಲ್‌ಸಿಸಿ), ಡಾ.ಶಶಿಧರ್ ಕಜೆ(ಪಲ್ಸ್ ಪೋಲಿಯೋ), ಶ್ಯಾಮಲಾ ಪಿ.ಶೆಟ್ಟಿ(ಟೀಚ್), ಪ್ರಮೋದ್ ಮಲ್ಲಾರ(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಪಿ.ಉಲ್ಲಾಸ್ ಪೈ(ವಿನ್ಸ್), ಮನೋಹರ್ ಕೆ(ಎಥಿಕ್ಸ್), ಸುರೇಂದ್ರ ಕಿಣಿ(ಪಬ್ಲಿಕ್ ರಿಲೇಷನ್), ಕೃಷ್ಣಮೋಹನ್ ಪಿ.ಎಸ್(ಕೆರಿಯರ್ ಗೈಡೆನ್ಸ್), ಸುನಿತ್ ಕುಮಾರ್(ಸ್ಪೋರ್ಟ್ಸ್), ಅಕ್ಷತಾ ಪಿ.ಶೆಣೈ(ವೆಬ್‌ಸೈಟ್), ಪ್ರಶಾಂತ್ ಶೆಣೈ(ಜಿಲ್ಲಾ ಪ್ರಾಜೆಕ್ಟ್ಸ್), ಮೊಹಮದ್ ಆರಿಫ್(ವಾಟರ್ & ಸ್ಯಾನಿಟೇಶನ್), ಜಯಗುರು ಆಚಾರ್(ರೋಟರ‍್ಯಾಕ್ಟ್), ಜೋನ್ ಕುಟಿನ್ಹಾ(ಇಂಟರ‍್ಯಾಕ್ಟ್), ಡಾ.ಹರಿಕೃಷ್ಣ ಪಾಣಾಜೆ(ಬುಲೆಟಿನ್ ಎಡಿಟರ್), ಗುರುರಾಜ್ ಕೆ(ಬುಲೆಟಿನ್-ಸಬ್ ಎಡಿಟರ್), ಪದ್ಮನಾಭ ಶೆಟ್ಟಿ(ಸಾಮಾಜಿಕ ಜಾಲತಾಣ), ಕೃಷ್ಣವೇಣಿ ರೈ(ಸಾಂಸ್ಕೃತಿಕ)ರವರುಗಳಿಗೆ ಪದ ಪ್ರದಾನ ಅಧಿಕಾರಿ ಎಂ.ಲಕ್ಷ್ಮೀನಾರಾಯಣರವರು ಪದ ಪ್ರದಾನವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here