ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪರಿಷತ್‌ ಚುನಾವಣೆ

0

ಪುತ್ತೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿ ಇಲ್ಲಿನ ವಿದ್ಯಾರ್ಥಿ ಪರಿಷತ್‌ ಚುನಾವಣೆಯು EVM ಮತಯಂತ್ರದ ಮೂಲಕ ಪ್ರಜಾಸತ್ತಾತ್ಮಕ ರೀತಿ ಮತದಾನ ಪ್ರಕ್ರಿಯೆ ಜೂ.1ರಂದು ನಡೆಯಿತು. ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಚುನಾವಣೆ ನಡೆದು ಅಧ್ಯಕ್ಷರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಪೂಜಿತ್‌.ಕೆ.ಎಸ್.‌  ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಸಂಪತ್‌ ಕುಮಾರ್.ಸಿ.ಎಚ್.‌ ಚುನಾಯಿತರಾದರು. ಜಂಟಿ ಕಾರ್ಯದರ್ಶಿಯಾಗಿ ನಿಶ್ಮಿತಾ ಶೆಟ್ಟಿ ದ್ವಿತೀಯ ವಿಜ್ಞಾನ ವಿಭಾಗದಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿ ಮತದಾರರು ತಮ್ಮ ಹಕ್ಕನ್ನು EVM ಮತಯಂತ್ರ ಮೂಲಕ ಚಲಾಯಿಸಿದರು.

ವಿದ್ಯಾರ್ಥಿಗಳಿಗೆ ಮತದಾರರ ಸಾಕ್ಷರತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ EVM ಮತಯಂತ್ರ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಗಿದೆ ಎಂದು ಚುನಾವಣಾ ಅಧಿಕಾರಿ ರಜನಿ.ಬಿ ಅವರು ಹೇಳಿದರು. ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆ ಯಲ್ಲಿ ಸಂಪೂರ್ಣವಾಗಿ  ತೊಡಗಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವಂತೆ ಪ್ರಭಾರ ಪ್ರಾಚಾರ್ಯ ಫಾರೂಕ್.ಸಿ ಕರೆ ನೀಡಿದರು.ವಿದ್ಯಾರ್ಥಿಗಳಿಗೆ ಮತದಾನ ಮಾಡಲು ಗುರುತು ಚೀಟಿ ಅಳವಡಿಸಿದ್ದು ಆಧಾರ್‌ ಕಾರ್ಡ್‌ ದಾಖಲೆಯನ್ನು ಬಳಕೆ ಮಾಡಿ ಮತ ಚಲಾಯಿಸಿದರು .

ಮತದಾನ ಪ್ರಕ್ರಿಯೆಯಲ್ಲಿ ಕಾಲೇಜು ಉಪನ್ಯಾಸಕರಾದ ರಶ್ಮಿ.ಬಿ ಪ್ರಿಸೈಡಿಂಗ್‌ ಆಫಿಸರ್‌ , ಗಾಯತ್ರಿ.ಎಂ , ಜ್ಯೋತಿಕುಮಾರಿ.ಕೆ , ನವ್ಯಶ್ರೀ ರೈ, ಪವಿತ್ರ.ವೈ, ಪ್ರತಿಭಾ ರೈ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು. ಸೆಕ್ಟರ್‌ ಅಧಿಕಾರಿಯಾಗಿ ಕಮಲಾಕ್ಷ ಆನಡ್ಕ ಕಾರ್ಯನಿರ್ವಹಿಸಿದರು.

LEAVE A REPLY

Please enter your comment!
Please enter your name here