ಬೆಟ್ಟಂಪಾಡಿ: ಪ್ರಿಯದರ್ಶಿನಿ ಅಬಾಕಸ್ ತರಬೇತಿ ಉದ್ಘಾಟನೆ

0

ಬೆಟ್ಟಂಪಾಡಿ: ಇಲ್ಲಿನ ವಿದ್ಯಾಗಿರಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ  ವಿದ್ಯಾರ್ಥಿಗಳಿಗಾಗಿ ಅಬಾಕಸ್ ತರಬೇತಿ ತರಗತಿ ಕಾರ್ಯಕ್ರಮವು ಜು.2ರಂದು ಉದ್ಘಾಟನೆಗೊಂಡಿತು. ಐಆರ್ ಸಿಎಂಡಿ ಎಜುಕೇಶನ್ ಸೆಂಟರ್ ಇದರ ಸಿಇಓ ಆಗಿರುವ ಪ್ರಫುಲ್ಲ ಗಣೇಶ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಿಮ್ಮೆಲ್ಲರಿಗೂ ಕಠಿಣವೆನಿಸುವ ಗಣಿತವನ್ನು ಸರಳೀಕರಿಸುವ ಸಾಧನ ಈ ಅಬಾಕಸ್. ಕಡಿಮೆ ಎಂದರೆ ಮೂರು ವರ್ಷಗಳ ಕಾಲ ಈ ತರಬೇತಿಯಲ್ಲಿ ನೀವು ತೊಡಗಿಸಿ ಕೊಂಡಾಗ ನಿಮ್ಮ ಮೆದುಳು ಅತ್ಯುತ್ತಮ ರೀತಿಯಲ್ಲಿ ಚುರುಕುಗೊಳ್ಳಬಹುದು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಸತೀಶ್ ರೈ ಕಟ್ಟಾವು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ ಈ ತರಗತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಿಮ್ಮ ಬೌದ್ಧಿಕ ಸಾಮರ್ಥ್ಯವನ್ನು ಚುರುಕುಗೊಳಿಸಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ಇವರು ಮಾತನಾಡುತ್ತಾ ನಮ್ಮ ಪೋಷಕರಿಗೂ ಈ ಅಬಾಕಸ್ ತರಗತಿಯ ಪರಿಚಯ ಅನಿವಾರ್ಯ. ಮುಂದಿನ ದಿನಗಳಲ್ಲಿ ಪೋಷಕರಿಗೂ ಇದರ ಮಾಹಿತಿ ನೀಡುವ ವ್ಯವಸ್ಥೆ ಮಾಡುವ ಪ್ರಯತ್ನ ನಾವು ಮಾಡುತ್ತೇವೆ ಎಂದು ಹೇಳಿದರು.

ಶಾಲಾ ಮುಖ್ಯಗುರು ರಾಜೇಶ್ ಎನ್. ಸ್ವಾಗತಿಸಿ, ಸಹ ಶಿಕ್ಷಕಿ ಭವ್ಯ ಕಾರ್ಯಕ್ರಮ ರೂಪಿಸಿದರು.

LEAVE A REPLY

Please enter your comment!
Please enter your name here