ಪುತ್ತೂರು: ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಜು.4ರಂದು ಪೋಷಕರ ಸಭೆಯು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ವಹಿಸಿದ್ದರು. ಶಾಲೆಯ ಶೈಕ್ಷಣಿಕ ವಿಚಾರಗಳ ಬಗ್ಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಗುಡ್ಡಪ್ಪ ಗೌಡ ಬಲ್ಯ ಅವರು ಮಾತನಾಡಿ ಬೆಳೆಯುತ್ತಿರುವ ಎವಿಜಿ ಶಾಲೆಯಲ್ಲಿ ಈ ವರ್ಷ ಶಾಲಾ ಕೊಠಡಿ, ಆಟದ ಮೈದಾನ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಶೌಚಾಲಯ, ಕಂಪ್ಯೂಟರ್ ಹಾಗೂ ಲೈಬ್ರರಿ ಕೊಠಡಿಗಳು ನಿರ್ಮಾಣವಾಗಿದ್ದು ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಎರಡು ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಶಾಲೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಶಿಕ್ಷಕ ವೃಂದ ಎಷ್ಟು ಮುಖ್ಯವೋ, ಪೋಷಕ ವೃಂದವು ಅಷ್ಟೇ ಪ್ರಾಮುಖ್ಯ, ಇವೆಲ್ಲವೂ ಶಾಲೆಯ ಬೆಳವಣಿಗೆಯ ಆಧಾರ ಸ್ತಂಭಗಳು ಎಂದರು. ಇದೇ ಸಂದೃರ್ಭ ಪೋಷಕರ ಪ್ರಶ್ನೆಗಳಿಗೆ ಸಂಸ್ಥೆಯ ಸಂಚಾಲಕ ಎ.ವಿ ನಾರಾಯಣ ಅವರು ಉತ್ತರಿಸಿ ಎಲ್ಲರ ಪಾಲ್ಗೊಳ್ಳುವಿಕೆಯನ್ನು ಕೇಳಿಕೊಂಡರು. ಶಿಕ್ಷಕಿ ಯಶುಭ ರೈ ಅವರು ಪಠ್ಯ ಹಾಗೂ ಪಠ್ಯೇತರ ವಿಷಯದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಪೋಷಕರು ಚರ್ಚೆಯಲ್ಲಿ ಪಾಲ್ಗೊಂಡು ಶಾಲೆ ಹಾಗೂ ತಮ್ಮ ಮಕ್ಕಳ ಅಭಿವೃದ್ಧಿಗೆ ಸಹಕರಿಸಬೇಕಾಗಿ ತಿಳಿಸಿದರು. ಸಭೆಯಲ್ಲಿ ಬೋಧಕ, ಬೋಧಕೇತರ ವೃಂದದವರು, ಆಡಳಿತ ಮಂಡಳಿಯವರು, ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು. ಶಾಲಾ ಶಿಕ್ಷಕಿ ಹರ್ಷಿತ ಅವರು ಪ್ರಾರ್ಥಿಸಿದರು. ಶಾಲಾ ಶಿಕ್ಷಕಿ ಯಶುಭ ರೈ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.ಶಾಲಾ ಉಪಾಧ್ಯಕ್ಷ ಉಮೇಶ್ ಗೌಡ ಮಲುವೇಲು ವಂದಿಸಿದರು.