





ಪುತ್ತೂರು: ನಗರಸಭೆ 8ನೇ ವಾರ್ಡ್ ಕೇಪುಳು, ಸಿದ್ಯಾಳ, ಶಾಂತಿನಗರದಲ್ಲಿ ಸುಮಾರು ರೂ.18 ಲಕ್ಷ ವೆಚ್ಚದ ರಸ್ತೆ ಕಾಂಕ್ರಿಟೀಕರಣಕ್ಕೆ ಜು.8ರಂದು ಬೆಳಿಗ್ಗೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು.


ಕಾಂಕ್ರೀಟ್ ರಸ್ತೆ ಉದ್ಘಾಟನೆ ಮತ್ತು ಅಲ್ಲೇ ಮುಂದುವರಿದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ವಾರ್ಡ್‌ನಲ್ಲಿ ಸುಮಾರು ರೂ.1.25 ಕೋಟಿಗೂ ಅಧಿಕ ಅನುದಾನವನ್ನು ತರಿಸಿ ಅನೇಕ ಕಾಮಗಾರಿ ಕೈಗೆತ್ತಿಕೊಂಡಿರುವ ನಗರಸಭಾ ಸದಸ್ಯ ಸುಂದರ ಪೂಜಾರಿ ಅವರು ಮಾದರಿ ಸದಸ್ಯರಾಗಿ ಮೂಡಿ ಬಂದಿದ್ದಾರೆ ಎಂದರು.






ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಲೀಲಾವತಿ, ಸಂತೋಷ್ ಬೊಳುವಾರು, ಗೌರಿ ಬನ್ನೂರು, ಪ್ರೇಮಲತಾ ನಂದಿಲ, ಬಿಜೆಪಿ ವಾರ್ಡ್ ಅಧ್ತಕ್ಷ ಜಯಾನದ, ಪುರುಷೋತ್ತಮ, ತಿರುಮಲೇಶ್ವರ ಭಟ್, ವಾಲ್ಟರ್, ಅಶೋಕ್ ಹಾರಾಡಿ, ಗುತ್ತಿಗೆದಾರ ಆಸೀಫ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.









