ಉಪ್ಪಿನಂಗಡಿ: ನಿರೀಕ್ಷಿತ ಹೆಚ್ಚಳವಾಗದ ನದಿ ನೀರಿನ ಮಟ್ಟ

0

ಉಪ್ಪಿನಂಗಡಿ: ಮುಂಗಾರು ತೀವ್ರತೆಯನ್ನು ಪಡೆದು ಸೋಮವಾರದಂದು ದಿನವಿಡೀ ಮಳೆ ಸುರಿದಿದ್ದು, ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳೆರಡೂ ತುಂಬಿ ಹರಿಯುತ್ತಿವೆ.

ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟಕ್ಕಿಂತ 5 ಮೀ ಕೆಳಗೆ ನದಿಯ ನೀರಿನ ಮಟ್ಟ ದಾಖಲಾಗಿದೆ. ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದ್ದರೂ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದ ಕಾರಣಕ್ಕೆ ಉಪ್ಪಿನಂಗಡಿ ವರೆಗಿನ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ನಿರೀಕ್ಷಿತ ಹೆಚ್ಚಳ ಕಂಡು ಬರಲಿಲ್ಲ.

LEAVE A REPLY

Please enter your comment!
Please enter your name here