ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದ.ಕ. ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಗ್ರಾಮೀಣ ಮತ್ತು ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ಹಾಗೂ ಸ್ಥಳೀಯ ಇಲಾಖೆ ಮತ್ತು ಸಂಘ ಸಂಸ್ಥೆಗಳ ನೆರವಿನೊಂದಿಗೆ ಅಲಿಂಕೋ ಸಂಸ್ಥೆ ಬೆಂಗಳೂರು ಇವರ ಸಹಕಾರ ಮತ್ತು ಸಂಯುಕ್ತ ಆಶ್ರಯದಲ್ಲಿ ಅಗತ್ಯ ಸಾಧನ ಸಲಕರಣೆಗೆ ಮೌಲ್ಯಮಾಪನ ಶಿಬಿರ ಏರ್ಪಡಿಸಲಾಗಿದೆ. ಪುತ್ತೂರು ಮತ್ತು ಕಡಬ ತಾಲೂಕಿನ ವಿಕಲಚೇತನರಿಗೆ ಮೌಲ್ಯಮಾಪನ ಶಿಬಿರ ಜು.24ರಂದು ಬೆಳಿಗ್ಗೆ ಪುತ್ತೂರು ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಲಿದೆ. ಅರ್ಹ ವಿಕಲಚೇತನರು ಆಧಾರ್ ಕಾರ್ಡ್, ರೇಷನ್ ಕಾರ್ಡ್(ಬಿಪಿಎಲ್ ಕಾರ್ಡ್), ವಿಕಲಾಂಗತೆ ಪ್ರಮಾಣಪತ್ರ(ಯುಡಿಐಡಿ), 2 ಫೋಟೋ ಹಾಗೂ ಆದಾಯ ಪ್ರಮಾಣಪತ್ರಗಳೊಂದಿಗೆ ಹಾಜರಾಗಬಹುದು.