ಪುತ್ತೂರು: ಫೇಸ್ಬುಕ್ ನಲ್ಲಿ ಟ್ರೇಡಿಂಗ್ ಬಗ್ಗೆ ಬಂದ ಜಾಹೀರಾತು ನೋಡಿ, ಲಿಂಕ್ ಬಳಸಿ Accel Student Group C851 ಎಂಬ ವಾಟ್ಸಾಪ್ ಗ್ರೂಪ್ ಗೆ ಸೇರಿದ ವ್ಯಕ್ತಿಯೊಬ್ಬರು ಹೂಡಿಕೆ ಹೆಸರಿನಲ್ಲಿ ಹಣ ಕಳೆದುಕೊಂಡಿದ್ದು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ನಿವಾಸಿ ಜಾನ್ ಪ್ರವೀಣ್ ಮಾಡ್ತಾ(46) ವಾಟ್ಸಾಪ್ ನಲ್ಲಿ ಬಂದ ಮಾಹಿತಿಯನುಸರಿಸಿ ACVVL online APP ಇನ್‌ಸ್ಟಾಲ್ ಮಾಡಿ ಆ್ಯಪ್ ನಲ್ಲಿ ಸೂಚಿಸಲಾದ ವಿವಿಧ ಬ್ಯಾಂಕ್ ಖಾತೆಗಳಿಗೆ ತಮ್ಮ ಮತ್ತು ಪತ್ನಿಯ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ. ಒಂದು ಹಂತದಲ್ಲಿ .21,000 ರೂ. ಹಣ ಲಾಭಾಂಶವಾಗಿ ಬ್ಯಾಂಕ್ ಖಾತೆಗೆ ಜಮೆ ಆಗಿತ್ತು. ಜಾನ್ ಪ್ರವೀಣ್ ಮಾಡ್ತಾ ಹೂಡಿಕೆ ಮಾಡಿದ ಮೊತ್ತದ ಸಂಖ್ಯೆ ಆ್ಯಪ್ ನಲ್ಲಿ ನಮೂದಾಗಿದ್ದ ಕಾರಣ ಯಾವುದೇ ಸಂಶಯಕ್ಕೆ ಒಳಗಾಗದೆ ನಿರಂತರವಾಗಿ ಹಣ ಹೂಡಿಕೆ ಮಾಡಿದ್ದಾರೆ. ಹೂಡಿಕೆಯ ಮೊತ್ತ 22,35,000 ರೂ. ಗೆ ತಲುಪಿದಾಗ ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ಅ.ಕ್ರ: 26/2024 ಕಲಂ: 66 (C) 66 (D) IT Act ರಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.