ಪುತ್ತೂರು: ಶ್ರೀ ಸತ್ಯ ಸಾಯಿ ಅನ್ನಪೂರ್ಣಾ ಟ್ರಸ್ಟ್ ಮುದ್ದೇನಹಳ್ಳಿ ಇದರ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ 45ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ಆಯ್ದ ಸರಕಾರಿ ಶಾಲೆಗಳಿಗೆ ನೀಡುವ ‘ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ’ಗೆ ಇರ್ದೆ ಉಪ್ಪಳಿಗೆಯ ಸರಕಾರಿ ಪ್ರೌಢಶಾಲೆ ಆಯ್ಕೆಯಾಗಿದೆ.
ಶಾಲಾ ಕೊಠಡಿಗಳು, ಆವರಣ, ಮೈದಾನ, ಶೌಚಾಲಯ, ಕಚೇರಿ, ಸ್ಮಾರ್ಟ್ ಕ್ಲಾಸ್, ಸ್ವಚ್ಚತೆ, ಪ್ರವೇಶಧ್ವಾ ರ, ಅಕ್ಷರದಾಸೋಹ ಕೊಠಡಿ, ಶಾಲಾ ಹೂತೋಟ, ಕೈ ತೋಟ, ಶಾಲಾ ಆವರಣ, ಸುತ್ತ ಮುತ್ತಲಿನ ಪರಿಸರ ಸ್ವಚ್ಚತೆ, ಶಿಸ್ತು ಮತ್ತು ನೈರ್ಮಲ್ಯ ಬಹಳಷ್ಟು ಸುಂದರವಾಗಿ ನಿರ್ಮಾಣಗೊಳಿಸಲಾಗಿದ್ದು ಶ್ರೀ ಸತ್ಯ ಸಾಯಿ ಅನ್ನಪೂರ್ಣಾ ಟ್ರಸ್ಟ್ ಮುದ್ದೇನಹಳ್ಳಿಯ ತಂಡ ಶಾಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ಪ್ರಶಸ್ತಿ ಘೋಷಣೆ ಮಾಡಿರುತ್ತಾರೆ. ಜೊತೆಗೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಕಳೆದ 9 ವರ್ಷಗಳಿಂದ ಸತತವಾಗಿ ಶೇ.100 ಫಲಿತಾಂಶ ಪಡೆದಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಉತ್ತಮವಾದ 100 ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿಯ ಜೊತೆಗೆ ಪ್ರತಿ ಶಾಲೆಗೂ ತಲಾ ರೂ.10,೦೦೦ ನಗದು ಪುರಸ್ಕಾರವನ್ನು ಪಡೆಯಲಿದೆ. ಜು.27ರಂದು ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಣೆಯಾಗಲಿದೆ ಎಂದು ಮುಖ್ಯ ಗುರು ಅನ್ನಮ್ಮ ಪಿ ಎಸ್ ತಿಳಿಸಿದ್ದಾರೆ.