ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನಲ್ಲಿ ನವದಿನಗಳ ಅಲ್ಫೋನ್ಸಾ ಮಹೋತ್ಸವಕ್ಕೆ ಜು.19ರಂದು ಚಾಲನೆ ನೀಡಲಾಯಿತು.
ವಂದನಿಯ ಫಾ|ಎಬಿನ್ ಕುರಿಯನ್, ವಂದನಿಯ ಫಾ.ಶಾಜಿ ಮ್ಯಾಥ್ಯು, ವಂದನಿಯ ಫಾ. ಜೇಮ್ಸ್‌ರವರ ನೇತೃತ್ವದಲ್ಲಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಜಾತಿ, ಧರ್ಮ ಬೇಧವಿಲ್ಲದೆ ಇಷ್ಟಾರ್ಥ ಸಿದ್ಧಿಗಾಗಿ ಈ ನವದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಭಕ್ತರು ಹರಕೆಯನ್ನಿಟ್ಟು ಪ್ರಾರ್ಥಿಸುವುದು ಇಲ್ಲಿನ ವಿಶೇಷ. ಜು.21ರಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮಾರ್ ಲಾರೆನ್ಸ್ ಮುಕ್ಕುಯಿ, ಜು.26ರಂದು ಪುತ್ತೂರು ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಗೀ ವರ್ಗೀಸ್ ಮಾರ್ ಮಕ್ಕಾರಿಯೋಸ್ ಅವರು ಪೂಜಾ ವಿಧಿಗಳಿಗೆ ನೇತೃತ್ವ ನೀಡಲಿದ್ದಾರೆ. ಹಬ್ಬದ ದಿನಗಳಲ್ಲಿ ವಿವಿಧ ಕ್ರೈಸ್ತ ಪಂಗಡಗಳ ಪ್ರಾರ್ಥನೆ ನಡೆಯಲಿದೆ ಎಂದು ಫಾ.ಶಾಜಿ ಮ್ಯಾಥ್ಯು ಅವರು ತಿಳಿಸಿದ್ದಾರೆ.