





ಪುತ್ತೂರು: ವಿಶ್ವದ ಅತಿ ದೊಡ್ಡ ಅಂತರಾಷ್ಟ್ರೀಯ ಸಂಘಟನೆ ಲಯನ್ಸ್ ಕ್ಲಬ್. ಇದರಲ್ಲಿ ಸದಸ್ಯರಾಗಿ ನಾವು ಸೇರಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಅನಾಹುತಗಳು ಆದರೂ ಪರಿಹಾರ ಕಾರ್ಯದ ಸೇವೆ ನಡೆಯುವಾಗ ನಮ್ಮದೂ ಒಂದಿನಿತು ಪಾಲು ಅದರಲ್ಲಿರುತ್ತದೆ. ನಾವು ಲಯನ್ಸ್ ಸಂಸ್ಥೆಗೆ ನೀಡುವ ದೇಣಿಗೆ ಅಲ್ಲಿ ಬಳಕೆಯಾಗುತ್ತದೆ ಎಂದು ಲಯನ್ಸ್ ಪೂರ್ವ ಜಿಲ್ಲಾ ಗವರ್ನರ್ ಡಾ. ಗೀತ್ ಪ್ರಕಾಶ್ ಹೇಳಿದರು.
ಅಸ್ಮೀ ಕಂಪಟ್ಸ್ನ ಸಭಾಂಗಣದಲ್ಲಿ ನಡೆದ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ಪುತ್ತೂರು ಪಾಣಾಜೆ, ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಮತ್ತು ಪುತ್ತೂರ್ದ ಮುತ್ತು ಲಿಯೋ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮತನಾಡಿದರು. ನಾವು ನಿತ್ಯ ಮಾಡುವ ಸಮಾಜ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಮಾಡಲು ಇದು ಸಹಕಾರಿ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಜಂಟೀ ಪಿಆರ್ಓ ಕಾವು ಹೇಮನಾಥ್ ಶೆಟ್ಟಿ ಮಾತನಾಡಿ, ವಿಶ್ವದ 14 ಲಕ್ಷ ಲಯನ್ಗಳಲ್ಲಿ ನಾವೂ ಒಬ್ಬರಾಗಿ ಅಂತರಾಷ್ಟ್ರೀಯ ಸಂಸ್ಥೆಯ ಸದಸ್ಯರಾಗಿ ನಾವಿದ್ದೇವೆ ಎಂಬುದು ನಮಗೆ ಹೆಮ್ಮೆ. ನಾವು ವಿವಿಧ ಕ್ಷೇತ್ರಗಳ ಸಾಧಕರು ಒಂದೇ ಸಂಸ್ಥೆಯ ಮೂಲಕ ಸೇರಿ ಸಮಾಜವನ್ನು ಧನಾತ್ಮಕವಾಗಿ ಪರಿವರ್ತನೆ ಮಾಡಲು ಇದೊಂದು ಅವಕಾಶ. ಈ ಸಂಸ್ಥೆಯ ಮೂಲಕ ಅದೆಷ್ಟೋ ಅಸಹಾಯಕರಿಗೆ ಸಹಕಾರವಾಗುತ್ತದೆ. ಇನ್ನಷ್ಟು ಜನರಲ್ಲಿ ಸದಸ್ಯರನ್ನಾಗಿ ಸೇರಿಸಿ ಧನಾತ್ಮಕ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಎಂದು ಹೇಳಿದರು.
ಪದಪ್ರದಾನ, ಪ್ರಮಾನವಚನ ಸ್ವೀಕಾರ:
ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಅಧ್ಯಕ್ಷರಾಗಿ ವೇದಾವತಿ ರಾಜೇಶ್ ಎ., ಕಾರ್ಯದರ್ಶಿಯಾಗಿ ಭಾಗ್ಯೇಶ್ ರೈ, ಕೋಶಾಧಿಕಾರಿಯಾಗಿ ವತ್ಸಲಾ ಪದ್ಮನಾಭ ಶೆಟ್ಟಿ, ಉಪಾಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿ, ಮಂಜುನಾಥ ಎಂ, ಚಂದ್ರಶೇಖರ ಪಿ., ಸದಸ್ಯತನ ಚೇರ್ಮೇನ್ ಆಗಿ ಕೇಶವ ಪೂಜಾರಿ ಬೆದ್ರಾಳ, ಎಲ್ಸಿಐಎಫ್ ಚೇರ್ಮನ್ ಆಗಿ ರವೀಂದ್ರ ಪೈ ಎನ್., ಟೇಮರ್ ಆಗಿ ರಂಜಿನಿ ಶೆಟ್ಟಿ, ಟೈಲ್ ಟ್ವಿಸ್ಟರ್ ಆಗಿ ಮೊಹಮ್ಮದ್ ಹನೀಫ್, ನಿರ್ದೇಕರಾಗಿ ಲ್ಯಾನ್ಸಿ ಮಸ್ಕರೇನಸ್, ವಿಕ್ರಮ್ ಶೆಟ್ಟಿ, ಅಬೂಬಕ್ಕರ್ ಮುಲಾರ್ , ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ಅಧ್ಯಕ್ಷರಾಗಿ ದಯಾನಂದ ರೈ ಕೋರ್ಮಂಡ, ಕಾರ್ಯದರ್ಶಿಯಾಗಿ ನವೀನ್ ರೈ ಚೆಲ್ಯಡ್ಕ, ಕೋಶಾಧಿಕಾರಿಯಾಗಿ ಜಲೀಲ್ ಬೈತ್ತಡ್ಕ, ಉಪಾಧ್ಯಕ್ಷರಾಗಿ ಶ್ರೀಪ್ರಸಾದ್ ಪಾಣಾಜೆ, ಯೂಸುಫ್ ಗೌಸಿಯಾ, ಎಲ್ಸಿಐಎಫ್ ಚೇರ್ಮೇನ್ ಆಗಿ ಮೊಹಮ್ಮದ್ ಕುಕ್ಕುವಳ್ಳಿ, ಸದಸ್ಯತನ ಚೇರ್ಮೇನ್ ಆಗಿ ಪುಷ್ಪರಾಜ್ ಕೋಟೆ, ಸರ್ವೀಸ್ ಚೇರ್ಮೇನ್ ಆಗಿ ಪ್ರಕಾಶ್ ರೈ ಬೈಲಾಡಿ, ಟೇಮರ್ ಆಗಿ ಮನಮೋಹನ ಆರಂಭ್ಯ, ಟೇಲ್ ಟ್ವಿಸ್ಟರ್ ನವೀನ ಮಣಿಯಾಣಿ, ನಿರ್ದೇಶಕರಾಗಿ ಇಕ್ಬಾಲ್ ಕೋಲ್ಪೆ, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾದ ಅಧ್ಯಕ್ಷರಾಗಿ ಉದ್ಯಮಿ ಲಕ್ಷ್ಮೀನಾರಾಯಣ ಪ್ರಭು, ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಕೋಶಾಧಿಕಾರಿಯಾಗಿ ನೋಟರಿ ನ್ಯಾಯವಾದಿ ಸುಂದರ ಗೌಡ, ಉಪಾಧ್ಯಕ್ಷರಾಗಿ ಪದ್ಮಪ್ಪ ಗೌಡ ರಾಮಕುಂಜ, ಡಾ.ಹರಿದಾಸ್ ಭಟ್ ಆಲಂಕಾರು, ವಿಜಯಕುಮಾರ್ ರೈ, ನಿಕಟಪೂರ್ವ ಅಧ್ಯಕ್ಷ, ಎಲ್ಸಿಐ ಚೇರ್ಮನ್ ಆಗಿ ಪ್ರಶಾಂತ್ ರೈ ಮನವಳಿಕೆ, ಸರ್ವೀಸ್ ಎಕ್ಸಿವಿಟೀಸ್ ಚೇರ್ಮನ್ ಆಗಿ ಜಯಂತ್ ಪೂಜಾರಿ, ಮೆಂಬರ್ಶಿಪ್ ಚೇರ್ಮನ್ ಆಗಿ ಲಿಂಗಪ್ಪ ಪೂಜಾರಿ, ಟೈಲ್ ಟ್ವಿಸ್ಟರ್ ಆಗಿ ಇಂದುಶೇಖರ ಶೆಟ್ಟಿ, ಲಯನ್ಸ್ ಟೇಮರ್ ಆಗಿ ಸುಧಾಕರ ರೈ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಾಣಿ ಸುಂದರ ಶೆಟ್ಟಿ, ಪ್ರತಾಪ್ಚಂದ್ರ ರೈ ಕುದ್ಮಾರುಗುತ್ತು, ಚಂದ್ರಶೇಖರ ರೈ, ಮೋಹನದಾಸ ರೈ, ಶ್ರೀಪತಿ ರಾವ್, ಸುಭಾಷ್ ಶೆಟ್ಟಿ ಅರ್ವಾರ, ಪುತ್ತೂರ್ದ ಮುತ್ತು ಲಿಯೋ ಕ್ಲಬ್ ಅಧ್ಯಕ್ಷರಾಗಿ ಲ್ಯಾನ್ಸನ್ ಪ್ರೀತ್ ಮಸ್ಕರೇನಸ್, ಕಾರ್ಯದರ್ಶಿಯಾಗಿ ಶ್ರೀಶ ನಾಯಕ್, ಕೋಶಾಧಿಕಾರಿಯಾಗಿ ಡಾ ವಜೀದಾ ಬಾನು ಇವರು ಪ್ರಮಾಣವಚನ ಸ್ವೀಕರಿಸಿದರು.
ನೂತನ ಸದಸ್ಯ ಸೇರ್ಪಡೆ:
ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ಗೆ ಕ್ಯಾಂಪ್ಕೋ ಸಂಸ್ಥೆಯ ಇಂಜಿನಿಯರ್ ಪದ್ಮಪ್ರಸಾದ್ ಜೈನ್, ಪ್ರಗತಿ ಆಸ್ಪತ್ರೆಯ ಪಿಆರ್ಓ ಸಂತೋಷ್ ಕುಮಾರ್ ರೈ, ನಿವೃತ್ತ ಶಿಕ್ಷಕಿ ಮೀನಾಕ್ಷಿ ರಾಮಚಂದ್ರ ಮತ್ತು ಗುತ್ತಿಗೆದಾರ ರಾಧಾಕೃಷ್ಣ ನೂತನ ಸದಸ್ಯರಾಗಿ ಸೇರ್ಪಡೆಗೊಂಡು ಪ್ರಮಾಣವಚನ ಸ್ವೀಕರಿಸಿದರು.
ಲಯನ್ಸ್ ಕ್ಲಬ್ನ ಪ್ರಾಂತೀಯ ರಾಯಭಾರಿ ಲ್ಯಾನ್ಸಿ ಮಸ್ಕರೇನಸ್, ವಲಯಾಧ್ಯಕ್ಷ ಸುದೇಶ್ ಭಂಡಾರಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಅಧ್ಯಕ್ಷ ಎನ್ ರವೀಂದ್ರ ಪೈ, ಕಾರ್ಯದರ್ಶಿ ಮೋಹನ್ ನಾಯಕ್ ಎಸ್., ಮೊಹಮ್ಮದ್ ಹನೀಫ್ ಎಸ್., ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆಯ ಕಾರ್ಯದರ್ಶಿ ದಯಾನಂದ ರೈ, ಕೋಶಾಧಿಕಾರಿ ಪ್ರಕಾಶ್ ರೈ ಬಿ., ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬದ ಅಧ್ಯಕ್ಷ ಪ್ರಶಾಂತ್ ರೈ ಎಂ., ಕಾರ್ಯದರ್ಶಿ ಶ್ರೀಪತಿ ರಾವ್ ಎಚ್., ಕೋಶಾಧಿಕಾರಿ ಸುಭಾಸ್ ಶೆಟ್ಟಿ ಆರ್ವಾರ ವೇದಿಕೆಯಲ್ಲಿ ಉಪಸ್ಥಿತರಿರದ್ದರು.
ರವಿಪ್ರಸಾದ್ ಶೆಟ್ಟಿ ಪ್ರಾರ್ಥಿಸಿದರು, ದಯಾನಂದ ರೈ ಕೋರ್ಮಂಡ ನೀತಿ ಸಂಹಿತೆ ವಾಚಿಸಿದರು. ರಂಜಿನಿ ಶೆಟ್ಟಿ ನೂತನ ಸದಸ್ಯರ ಪರಿಚಯ ಮಾಡಿದರು. ಸುಮತಿ ಎಸ್, ಪ್ರಶಾಂತ್ ರೈ, ಪುಷ್ಪರಾಜ್ ರೈ ಕೋಟೆ, ಪದಾಧಿಕಾರಿಗಳ ಪರಿಚಯ ಮಾಡಿದರು. ಚಂದ್ರಶೇಖರ ಪಿ. ಪದಪ್ರಧಾನ ಅಧಿಕಾರಿಯವರ ಪರಿಚಯ ಮಾಡಿದರು. ನೂತನ ಕಾರ್ಯದರ್ಶಿ ಭಾಗ್ಯೇಶ್ ರೈ ವಂದಿಸಿದರು. ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.










