ಪುತ್ತೂರು: ಅಡೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ವಿಶೇಷ ಸಭೆ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಎ. ಗೋಪಾಲ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ನಡೆಯತು.
ಸಭೆಯಲ್ಲಿ ಕೌಂಡಿಕಾನ ಯಾತ್ರೆಯು 2025ನೇ ವರ್ಷ ಜನವರಿಯಲ್ಲಿ ನಡೆಯಲಿದ್ದು, ನೂತನಾವಾಗಿ ನಿರ್ಮಾಣವಾಗುತ್ತಿರುವ ಮಹಾವಿಷ್ಣು ಗುಡಿ, ಗಣಪತಿ ಗುಡಿ, ಹಾಗೂ ರಕ್ತೇಶ್ವರಿ ಸಾನಿಧ್ಯ, ಮತ್ತು ಗೋಪುರ ಹಾಗೂ ರಾಜಾಂಗಣದಲ್ಲಿ ಆಗಬೇಕಾದ ಅವಶ್ಯ ನಿರ್ಮಾಣಗಳು ಮತ್ತು ವಿದ್ಯುದೀಕರಣ ಕೆಲಸಗಳ ಕುರಿತಾಗಿ ,ಉತ್ತಮ ಗುಣಮಟ್ಟದ ಮರದ ಸಾಮಾಗ್ರಿಗಳನ್ನು ಅಳವಡಿಸಲಾಗಿದ್ದು, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯೊಂದಿಗೆ ನಿದಾನವಾಗಿ ಸಾಗುತ್ತಿರುವ ಕೆಲಸ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಬೆಳ್ಳಿಪ್ಪಾಡಿ ಸದಾಶಿವ ರೈ, ಬಾಲಕೃಷ್ಣ ಮೂಡಿತ್ತಾಯ, ಪ್ರಕಾಶ್ ರಾವ್ ಅಡೂರು, ಅಶೋಕ್ ನಾಯ್ಕ್ ಪಾಂಡಿ ತಲೆಮನೆ, ರವಿನಾರಾಯಣ ಮಿತ್ತೊಟ್ಟಿ, ರಮೇಶ ಮಣಿಯಾಣಿ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಂಡೆಬೆಟ್ಟಿ ಪ್ರಭಾಕರ ನಾಯ್ಕ್, ಪವಿತ್ರಾಣಿ ರಾಧಾಕೃಷ್ಣ ಬಾರಿತ್ತಾಯ, ಗಿರೀಶ್ ರಾವ್ ಗಂಧದಕಾಡು, ರಾಮಚಂದ್ರ ಅತ್ತನಾಡಿ ಅನಿಸಿಕೆ ವ್ಯಕ್ತಪಡಿಸಿದರು.ಕೃಷ್ಣಪ್ಪ ಮಾಸ್ತರ್ ಆಡೂರು, ಅಕ್ಕಪ್ಪಾಡಿ ಕೃಷಗಣ ಮಣಿಯಾಣಿ, ರಾಮ ನಾಯ್ಕ್ ಅಡೂರು, ರಾಮಂಞ ಅಡೂರು, ರವಿಶಂಕರ ನಾಯಕ್ಕ ಚಂದ್ರಬೇಲು, ಸಲಹೆ ನೀಡಿದರು.
ಸಮಿತಿಯ ಕಾರ್ಯದರ್ಶಿ ಪೆರಿಯಡ್ಕ ಚಂದ್ರಶೇಖರ ರಾವ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಕಾಂತಡ್ಕ ಗಂಗಾಧರ ರಾವ್ ವಂದಿಸಿದರು.