ಕುಂಬ್ರದ ಮೆಲ್ವಿನ್ ಮೊಂತೆರೋರಿಗೆ ನಂದಿನಿ ಅತ್ಯುತ್ತಮ ಡೀಲರ್ ನಲ್ಲಿ ಪ್ರಥಮ ಸ್ಥಾನ- ಗೌರವ ಪ್ರದಾನ

0

ಪುತ್ತೂರು: ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ನಂದಿನಿ ಅಧಿಕೃತ ಡೀಲರ್ ಆಗಿರುವ ಕುಂಬ್ರದ ವರ್ತಕರ ಸಂಘದ ಮಾಜಿ ಅಧ್ಯಕ್ಷ, ಮೊಂತೆರೋ ಸ್ವೀಟ್ಸ್ ಮಾಲಕ ಮೆಲ್ವಿನ್ ಮೊಂತೆರೋರಿಗೆ ತಾಲೂಕು ಮಟ್ಟದ ಗ್ರಾಮೀಣ ಪ್ರದೇಶದ ಅತ್ಯುತ್ತಮ ಡೀಲರ್ ಎಂದು ಗುರುತಿಸಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಪ್ರಥಮ ಸ್ಥಾನವನ್ನು ನೀಡಿ ಗೌರವಿಸಲಾಗಿದೆ.

ಪುತ್ತೂರು ದರ್ಶನ್ ಕಲಾಮಂದಿರದಲ್ಲಿ ಆ.2 ರಂದು ನಡೆದ ನಂದಿನಿ ಡೀಲರ್‌ಗಳ ಸಭೆಯಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಉಪ ವ್ಯವಸ್ಥಾಪಕರು ಡಾ.ಸತೀಶ್ ರಾವ್, ಜಾನೆಟ್ ರೋಸರಿಯೊ, ರವಿರಾಜ ಉಡುಪ,ಸದಾಶಿವ ಪಿ, ಸಚಿನ್ ಸಿ ಮತ್ತು ಒಕ್ಕೂಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here