ಬೆಟ್ಟಂಪಾಡಿ ಗ್ರಾಮ ಸಭೆ

0

ಗ್ರಾಮ ಸಭೆಗೆ ಪ್ರಮುಖ ಇಲಾಖಾಧಿಕಾರಿಗಳ ಗೈರು- ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಬರೆಯಲು ನಿರ್ಣಯ 

ನಿಡ್ಪಳ್ಳಿ; ಗ್ರಾಮ ಸಭೆಗೆ ಮೂರು ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಅಕ್ರೋಶಗೊಂಡ ಗ್ರಾಮಸ್ಥರು ಮೇಲಾಧಿಕಾರಿಗಳಿಗೆ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ ಘಟನೆ ಬೆಟ್ಟಂಪಾಡಿ ಗ್ರಾಮ ಸಭೆಯಲ್ಲಿ ನಡೆಯಿತು.ಬೆಟ್ಟಂಪಾಡಿ ಗ್ರಾಮ ಸಭೆ ಅಧ್ಯಕ್ಷೆ ವಿದ್ಯಾಶ್ರೀ ಯವರ ಅಧ್ಯಕ್ಷತೆಯಲ್ಲಿ ಜು.30 ರಂದು ಸಮುದಾಯ ಭವನದಲ್ಲಿ ನಡೆಯಿತು.

 ಇಲಾಖಾಧಿಕಾರಿಗಳ ಮಾಹಿತಿ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಪೋಲೀಸ್ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಗಮನಿಸಿದ ಗ್ರಾಮಸ್ಥರು ಜನರಿಗೆ ಬಹಳ ಪ್ರಾಮುಖ್ಯತೆ ಇರುವ ಇಲಾಖೆ ಅಧಿಕಾರಿಗಳು ಸಭೆಗೆ ಬಾರದಿದ್ದರೆ ಗ್ರಾಮ ಸಭೆ ಯಾಕೆ ಮಾಡಬೇಕು ಎಂದು ಅಕ್ರೋಶ ವ್ಯಕ್ತಪಡಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಬರೆಯಲು ನಿರ್ಣಯಿಸಲಾಯಿತು.ಕೀಲಂಪಾಡಿ ಗೋಳಿಪದವು ರಸ್ತೆ ತೀರಾ ಹದಗೆಟ್ಟಿದ್ದು ಕಾಂಕ್ರೀಟಿಕರಣ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ರೆಂಜ ಚೂರಿಪದವು ಹೋಗುವ ರಸ್ತೆಯ ಕೋನಡ್ಕ ಅಂಗನವಾಡಿ ಬಳಿ ಅವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಹಾಕಿದ ಕಾರಣ ವಾಹನ ಚಾಲಕರಿಗೆ ಸಮಸ್ಯೆಯಾಗಿದ್ದು ಅದನ್ನು ತೆರವು ಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.ಪೇರಲ್ತಡ್ಕ ಮಸೀದಿ ಬಳಿ ಇರುವ ಅಪಾಯಕಾರಿ ಮರವನ್ನು ತೆರವು ಗೊಳಿಸುವಂತೆ ಗ್ರಾಮಸ್ಥರು ಪ್ರಸ್ತಾಪಿಸಿದಾಗ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಅರ್.ಟಿ.ಸಿ ಗೆ ಅಧಾರ್ ಲಿಂಕ್ ಮಾಡಲು ಸರಕಾರ ಅದೇಶಿಸಿದ್ದು ಸರ್ವರ್ ಸಮಸ್ಯೆಯಿಂದ ಬೇಗ ಲಿಂಕ್ ಅಗುತ್ತಿಲ್ಲ. ಆದುದರಿಂದ ಈಗ ನೀಡಿದ ಅವಧಿಯನ್ನು ಮುಂದುವರಿಸುವ ಬಗ್ಗೆ ಸರಕಾರಕ್ಕೆ ಬರೆಯಲು ಗ್ರಾಮಸ್ಥರು ಹೇಳಿದಾಗ ಹಾಗೆಯೇ ನಿರ್ಣಯಿಸಲಾಯಿತು.ಮನೆ ನಿವೇಶನಕ್ಕೆ ಅರ್ಜಿ ಹಾಕಿದ ಬೆಟ್ಟಂಪಾಡಿ ಗ್ರಾಮದ ಜನರಿಗೆ ಬೆಟ್ಟಂಪಾಡಿ ಗ್ರಾಮದಲ್ಲಿಯೇ ಜಾಗ ಕಾದಿರಿಸಲು ಕ್ರಮ ಕೈಗೊಳ್ಳಲು ಒತ್ತಾಯ.ಡೆಮ್ಮಂಗರ ಪ್ರದೇಶದಲ್ಲಿ ಇಂಟರ್ನೆಟ್ ಸಮಸ್ಯೆಯ ಕುರಿತು ಚರ್ಚಿಸಿ ಆದಷ್ಟು ಬೇಗ ಕಾಮಗಾರಿ ನಡೆಸುವ ಬಗ್ಗೆ ಚರ್ಚಿಸಲಾಯಿತು.

 ಉಪ್ಪಳಿಗೆ ಪರಿಸರದಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಮಳೆ ನೀರು ಹೋಗುತ್ತಿದ್ದು ಇದರಿಂದ ಶಾಲೆಗೆ ಹೋಗುವ ದಾರಿಯಲ್ಲಿ  ಮಕ್ಕಳಿಗೆ ಹೋಗಲು ಕಷ್ಟವಾಗಿದೆ.ಆದುದರಿಂದ ಮಕ್ಕಳಿಗೆ ಬೇಕಾಗಿ ರಸ್ತೆ ದುರಸ್ತಿ ಬಗ್ಗೆ ಚರ್ಚಿಸಿ ಪಿಡಬ್ಲ್ಯುಡಿ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು. ಜಲಜೀವನ್ ಯೋಜನೆಯ ನೀರಿನ ಪೈಪ್ ಲೈನ್ ವ್ಯವಸ್ಥೆ ಕೀಲಂಪಾಡಿಯಲ್ಲಿ  ಅನುಷ್ಠಾನ ಆಗದಿರುವ ಬಗ್ಗೆ  ಸಭೆಯಲ್ಲಿ ಚರ್ಚೆ ನಡೆದು ಮುಂದೆ ಬಹುಗ್ರಾಮ ಕುಡಿಯುವ ಯೋಜನೆಯನ್ನು ಕೀಲಂಪಾಡಿಗೆ ಅನುಷ್ಠಾನ ಗೊಳಿಸುವ ಬಗ್ಗೆ ಚರ್ಚಿಸಲಾಯಿತು.

 ಬಾಳೆಗುಳಿ ಪ್ರದೇಶದಲ್ಲಿ ನೀರಿನ ಸಮಸ್ಯೆಯ ಕುರಿತು ಚರ್ಚಿಸಲಾಯಿತು. ಅದನ್ನು ಪರಿಶೀಲಿಸಿ ಸರಿಪಡಿಸುವ ಕುರಿತು ತೀರ್ಮಾನಿಸಲಾಯಿತು.ಇರ್ದೆ ದೂಮಡ್ಕ ರಸ್ತೆಯ ಪಂಜೊಟ್ಟು ಪರಿಸರದಲ್ಲಿ ರಸ್ತೆ ಕಿರಿದಾಗಿದ್ದು ಅಗಲಗೊಳಿಸಿ ದುರಸ್ತಿಗೊಳಿಸುವುದು.ರಸ್ತೆಯ ಬದಿ ಇರುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.ಚರ್ಚೆ ನಡೆದು ಸಂಬಂಧಿಸಿದ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು. ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.

 ಬೆಟ್ಟಂಪಾಡಿ ಮೆಸ್ಕಾಂ ಕಿರಿಯ ಇಂಜಿನಿಯರ್ ಪುತ್ತು.ಜೆ, ಇರ್ದೆ ಉಪ್ಪಳಿಗೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಾಲಿನಿ.ಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೆಲ್ವೀಚಾರಕಿ ಸುಜಾತ.ಎಸ್, ಪ್ರಜ್ಞಾ.ಬಿ, ಗ್ರಾಮ ಅಡಳಿತ ಅಧಿಕಾರಿ ಮಂಜುನಾಥ. ಬಿ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಸುವರ್ಣ ಅರ್.ಬಿ, ಪಾಣಾಜೆ ಪಶುವೈದ್ಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಂ.ಪ್ರಕಾಶ್, ಬಿ.ಸಿ.ಯಂ ಇಲಾಖೆಯ ಚಂದ ಪಟೇಲ, ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯಾಧಿಕಾರಿ ಯಶೋಧರ ತಮ್ಮ ಇಲಾಖೆಯ ಮಾಹಿತಿ ನೀಡಿದರು.

ಪಂಚಾಯತ್ ಉಪಾಧ್ಯಕ್ಷ ಮಹೇಶ್.ಕೆ, ಸದಸ್ಯರಾದ ಸುಮಲತಾ, ಲಲಿತಾ ಚಿದಾನಂದ, ಮೊಯಿದು ಕುಂಞ, ಮಹಾಲಿಂಗ ನಾಯ್ಕ, ರಮ್ಯ.ಕೆ, ಲಲಿತಾ, ವಿನೋದ್ ಕುಮಾರ್ ರೈ, ಗಂಗಾಧರ ಗೌಡ, ಪ್ರಕಾಶ್ ರೈ, ಉಮಾವತಿ, ಗೋಪಾಲ, ನವೀನ್ ಕುಮಾರ್ ರೈ, ಬೇಬಿ ಜಯರಾಂ, ಚಂದ್ರಶೇಖರ ರೈ, ಪವಿತ್ರ.ಡಿ ಉಪಸ್ಥಿತರಿದ್ದರು.ಪಿಡಿಒ ಸೌಮ್ಯ ಸ್ವಾಗತಿಸಿ ವಂದಿಸಿದರು.ಸಿಬ್ಬಂದಿಗಳಾದ ಸಂದೀಪ್, ಕವಿತಾ, ಸವಿತಾ, ಚಂದ್ರಾವತಿ ಸಹಕರಿಸಿದರು.

LEAVE A REPLY

Please enter your comment!
Please enter your name here