





ಪುತ್ತೂರು:ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ ಮತ್ತು ಜೈ ತುಳುನಾಡ್ ಇವರ ಸಹಭಾಗಿತ್ವದಲ್ಲಿ ನಡೆದ ಬಲೆ ತುಳು ಲಿಪಿ ಕಲ್ಪುಗ ಕಾರ್ಯಗಾರದ ತುಳು ಲಿಪಿ ಪರೀಕ್ಷೆಯು ಆ.4ರಂದು ಮಜ್ಜಾರಡ್ಕದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಶ್ರೀ ವಿಷ್ಣು ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು.



ತುಳುಲಿಪಿ ಶಿಕ್ಷಕಿ ಚಿತ್ರಾಕ್ಷಿ ಮುಗೇರ ತೆಗ್ಗು ಪರೀಕ್ಷೆ ನಡೆಸಿದರು. ಸಂಘಟನೆಯ ಅಧ್ಯಕ್ಷರು ರಘುನಾಥ್ ಗೋಲ್ತಿಲ, ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸಂಪೂರ್ಣ ಸಹಕಾರ ನೀಡಿದರು. ಶ್ರೀ ವಿಷ್ಣು ಯುವಶಕ್ತಿ ಬಳಗದ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ ಮಯೂರ ಕಾರ್ಯಕ್ರಮ ಆಯೋಜನೆ ಮಾಡಿದರು.













