ಆ.10ಕ್ಕೆ ಪುತ್ತೂರು ಬಂಟರ ಸಂಘದಿಂದ ಆಟಿಡೊಂಜಿ ಬಂಟೆರೆ ಸೇರಿಗೆ-ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ , ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ

0

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಮಹಿಳಾ, ಯುವ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಆಟಿಡೊಂಜಿ ಬಂಟೆರೆ ಸೇರಿಗೆ, ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಆ.10ರಂದು ಕೊಂಬೆಟ್ಟು ಎಂ.ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಧ್ಯಾಹ್ನ ಆರಂಭಗೊಂಡು ಸಂಜೆಯ ತನಕ ನಡೆಯಲಿದೆ.


ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಎ.ಹೇಮನಾಥ ಶೆಟ್ಟಿ ಕಾವು ಅವರು ಮಾತನಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ನಾಯಕತ್ವದಲ್ಲಿ ಪ್ರಮುಖ ಸ್ಥಾನದಲ್ಲಿರುವ ಬಂಟ ಸಮಾಜಕ್ಕೆ ಅದರದ್ದೆ ಆದ ಪರಂಪರೆಯಿದೆ. ಸಮಾಜಮುಖಿ ಕೆಲಸ ಕಾರ್ಯಗಳನ್ನು ಜೊತೆಯಾಗಿ ಮಾಡಿಕೊಂಡು ಹೋಗಲು ಈ ವರ್ಷ ಆಟಿಡೊಂಜಿ ಬಂಟೆರೆ ಸೇರಿಗೆ ಎಂಬ ಕಾರ್ಯಕ್ರಮ ಹಾಕಿಕೊಳ್ಳುವ ಮೂಲಕ ಈ ಸಮಾಜದ ವಿಶೇಷತೆ, ಆಚರಣೆ ಮುಂದೆ ಸಮಾಜದಿಂದ ಆಗುವ ಯೋಜನೆಗಳೇನು ಎಂಬುದನ್ನು ಪ್ರಸ್ತಾಪ ಮಾಡಲಿದ್ದೇವೆ. ಸಂಜೆ ಗಂಟೆ 5ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಇದರಲ್ಲಿ ಮುಖ್ಯವಾಗಿ ಮೂರು ಮಂದಿ ದೊಡ್ಡ ಸಾಧಕರನ್ನು ಸನ್ಮಾನಿಸಲಿದ್ದೇವೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಎಲ್ಲಾ ಸಮಾಜಕ್ಕೂ ಆರೋಗ್ಯ ಶೈಕ್ಷಣಿಕ ನೀಡುತ್ತಿರುವ ಎಮ್.ಆರ್.ಜಿ ಗ್ರೂಪ್ಸ್‌ನ ಅಧ್ಯಕ್ಷ ಕೆ.ಡಾ| ಕೆ.ಪ್ರಕಾಶ್ ಶೆಟ್ಟಿ, ಈಗಾಗಲೇ ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆ ಕುರಿತು ಮಾತನಾಡಿ ಗಮನ ಸೆಳೆದ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿದೇಶಕ್ಕೂ ಹೋದರೂ ಊರಿನ ಬಗ್ಗೆ ಹೆಚ್ಚು ಕಾಳಜಿಯುಳ್ಳ ಸಮಾಜ ಸೇವಕ ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ಅಬುದಾಬಿ ಇದರ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಬಳಿಕ 14 ಮಂದಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಸನ್ಮಾನ, ಪ್ರಶಸ್ತಿ ಪ್ರದಾನದ ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಚಿನ್ನದ ಪದಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಂಬಯಿ ಹೇರಂಭಾ ಗ್ರೂಫ್ ಆಫ್ ಕಂಪೆನಿಯ ಮಾಲಕ ಕನ್ಯಾನ ಸದಾಶಿವ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್ ಆಳ್ವ ಆಶಯ ಮಾತುಗಳನ್ನಾಡಲಿದ್ದಾರೆ. ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ವಿದ್ಯಾರ್ಥಿವೇತನ ವಿತರಣೆ ಮಾಡಲಿದ್ದಾರೆ ಎಂದವರು ಹೇಳಿದರು.


ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ:
ಮಧ್ಯಾಹ್ನ ಗಂಟೆ 2.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಆರಂಭದಲ್ಲಿ ಬಂಟರ ಸಂಘದ ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿಯವರು ಮಹಾದ್ವಾರ ಉದ್ಘಾಟಿಸಲಿದ್ದಾರೆ. ಶ್ರೀರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಧ್ವಜಾರೋಹಣ ಮಾಡಲಿದ್ದಾರೆ. ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿಯ ನಿಕಟಪೂರ್ವ ಸಂಚಾಲಕ ದಯಾನಂದ ರೈ ಮನವಳಿಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಚಾವಡಿ ಮಾತುಗಳನ್ನಾಡಲಿದ್ದಾರೆ. ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡ ಸಹಿತ ಪದಾಧಿಕಾರಿಗಳು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದ ಕಾವು ಹೇಮನಾಥ ಶೆಟ್ಟಿಯವರು ಮಧ್ಯಾಹ್ನ ಗಂಟೆ 3ಕ್ಕೆ ವಿಶ್ವ ಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರಲ್ ಪುತ್ತೂರು ಇದರ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ ರೈ ಮತ್ತು ವಿದುಷಿ ಸ್ವಸ್ತಿಕಾ ಆರ್ ಶೆಟ್ಟಿ ಯವರಿಂದ ನಾಟ್ಯ ಧಾರೆ. ಸಂಜೆ ಗಂಟೆ 4 ರಿಂದ 5ಗಂಟೆಯ ತನಕ ಯಕ್ಷ ಹಾಸ್ಯ ವೈಭವ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪ್ರಶಾಂತ್ ರೈ ಮುಂಡಾಳ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆಯವರ ಹಿಮ್ಮೇಳನದಲ್ಲಿ ಪ್ರಜ್ವಲ್ ಗುರುವಾಯನಕೆರೆ, ದಿನೇಶ್ ಶೆಟ್ಟಿ ಕಡಬ, ಸುಂದರ ರೈ ಮಂದಾರ, ದಿನೇಶ್ ಕೊಡಪದವು ಮತ್ತು ಕಡಬ ಶ್ರೀನಿವಾಸ ರೈ ಕಲಾವಿದರು ಯಕ್ಷ ಹಾಸ್ಯ ವೈಭವ ನಡೆಸಲಿದ್ದಾರೆ. ಆ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಸಹಭೋಜನವಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ತಾಲೂಕು ಸಮಿತಿ ನಿರ್ದೇಶಕ ದಂಬೆಕಾನ ಸದಾಶಿವ ರೈ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

14 ಮಂದಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ;
ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 14 ಮಂದಿ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕಡಮಜಲು ಸುಭಾಸ್ ರೈ ಅವರಿಂದ ಕೊಡಮಾಡುವ ಸಿರಿ ಕಡಮಜಲು ಕೃಷಿ ಪ್ರಶಸ್ತಿಯನ್ನು ರೈಲ್ ಬಾಲ್ ಪುಣ್ಚಪ್ಪಾಡಿ ಅರಿಯಡ್ಕ ಕೃಷ್ಣ ರೈಯವರಿಗೆ, ಎ. ಹೇಮನಾಥ ಶೆಟ್ಟಿ ಕಾವು ಇವರಿಂದ ಬನ್ನೂರು ಗುತ್ತು ತಾರಾ ಅಂತಪ್ಪ ಶೆಟ್ಟಿಕಾವು ಅವರಿಂದ ಕೊಡಮಾಡಲ್ಪಡುವ ಬಂಟರ ಶಿರೋಮಣಿ ಪ್ರಶಸ್ತಿಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಮತ್ತು ಪುತ್ತೂರು ತಾಲೂಕು ಸಮಿತಿಯಿಂದ ಕೊಡಮಾಡಲ್ಪಡುವ ಪುತ್ತೂರು ಬಂಟರ ಸಿರಿ ಪ್ರಶಸ್ತಿಯನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಮಲ್ಲಿಕಾ ಪ್ರಸಾದ ಅವರಿಗೆ, ಎನ್ ಚಂದ್ರಹಾಸ ಶೆಟ್ಟಿ ದಿ| ರೇಖಾ ಮುತ್ತಪ್ಪ ರೈ ಮತ್ತು ದಿ| ಜಯಂತ್ ರೈ ಸ್ಮರಣಾರ್ಥ ನೀಡುವ ಕ್ರೀಡಾ ಪ್ರಶಸ್ತಿಯನ್ನು ಸುನಿಲ್ ಕುಮಾರ್ ಶೆಟ್ಟಿಯವರಿಗೆ, ಕೆ.ಸೀತಾರಾಮ ರೈ ಸವಣೂರು ಅವರಿಂದ ಕೊಡಮಾಡಲ್ಪಡುವ ಸಾಧಕ ಸಹಕಾರಿ ರಶ್ಮಿ ಪ್ರಶಸ್ತಿಯನ್ನು ಎನ್.ಜಗನ್ನಾಥ ರೈ ಮಾದೋಡಿಯವರಿಗೆ, ಡಾ. ಬಿ.ಸಂಜೀವ ರೈ ಅವರು ಕೊಡಮಾಡಲ್ಪಡುವ ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಡಾ.ಎ.ಕೆ.ರೈ ಅವರಿಗೆ, ಮಿತ್ರಂಪಾಡಿ ಚೆನ್ನಪ್ಪ ರೈ ಸ್ಮರಣಾರ್ಥ ಜಯರಾಮ್ ರೈ ಮಿತ್ರಂಪಾಡಿ ಅಬುದಾಬಿ ಇವರಿಂದ ಕೊಡಮಾಡಲ್ಪಡುವ ಸಮಾಜ ಸೇವಾ ಮಿತ್ರ ಪ್ರಶಸ್ತಿಯನ್ನು ಕುದ್ಯಾಡಿ ಶೀನಪ್ಪ ರೈ ಕೊಡೆಂಕೀರಿಯವರಿಗೆ, ಮಿತ್ರಂಪಾಡಿ ಪುರಂದರ ರೈ ಅವರಿಂದ ಕೊಡಮಾಡಲ್ಪಡುವ ಪಂಚಮಿ ಉದ್ಯಮಿ ಸಿರಿ ಪ್ರಶಸ್ತಿಯನ್ನು ಸಂತೋಷ್ ಕುಮಾರ್ ರೈ ನಳೀಲು ಅವರಿಗೆ, ಅಗರಿ ಭಂಡಾರಿ ಸಹೋದರರು ಕೊಡಮಾಡಲ್ಪಡುವ ದೇಶ ಸೇವಾ ಅಗರಿ ಪ್ರಶಸ್ತಿಯನ್ನು ವಸಂತ ಕುಮಾರ್ ರೈ ಬಿ ಅವರಿಗೆ, ದೇರ್ಲ ಕರುಣಾಕರ ರೈ ಅವರಿಂದ ನೀಡುವ ಉತ್ತಮ ಶಿಕ್ಷಕ ಅಶ್ವಿನಿ ಪ್ರಶಸ್ತಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸೈನ್ಸ್ ಒಲಿಂಪಿಯಾಡ್ ಡಿಸ್ಟ್ರಿಕ್ ಬೆಸ್ಟ್ ಪ್ರಿನ್ಸಿಪಾಲ್ ಪುರಸ್ಕೃತ ಸತೀಶ್ ರೈ ಅವರಿಗೆ, ವಿಜಯಾ ಮಂಜುನಾಥ ಶೆಟ್ಟಿ ಅವರಿಂದ ಕೊಡಲ್ಪಡುವ ಅರಣ್ಯ ಮಿತ್ರ ಪ್ರಶಸ್ತಿಯನ್ನು ಡಾ. ಆಶಾ ಶಂಕರ ಭಂಡಾರಿ ಡಿಂಬ್ರಿಯವರಿಗೆ, ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರಿಂದ ಕೊಡಮಾಡಲ್ಪಡುವ ಪಿಯುವಿ ಪ್ರತಿಭಾನ್ವಿತ ವಿದ್ಯಾ ಅರಿಯಡ್ಕ ಪ್ರಶಸ್ತಿಯನ್ನು ಕು.ಧನುಜ ಅವರಿಗೆ, ಚನಿಲ ತಿಮ್ಮಪ್ಪ ಶೆಟ್ಟಿಯವರಿಂದ ಕೊಡಮಾಡಲ್ಪಡುವ ಎಸ್‌ಎಸ್‌ಎಲ್‌ಸಿ ಪ್ರತಿಭಾನ್ವಿತ ವಿದ್ಯಾ ಚನಿಲ ಪ್ರಶಸ್ತಿಯನ್ನು ಕು.ಸ್ವಸ್ತಿ ಶೆಟ್ಟಿಯವರಿಗೆ ಪ್ರದಾನಮಾಡಲಾಗುವುದು ಎಂದು ಕಾವು ಹೇಮನಾಥ ಶೆಟ್ಟಿಯವರು ಹೇಳಿದರು.

LEAVE A REPLY

Please enter your comment!
Please enter your name here