ಕಡಬ: ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಜೈಗೋಪಾಲ ಗರೋಡಿಯ ರಾಷ್ಟೊತ್ಪನ್ನ ವಿದ್ಯಾಕೇಂದ್ರ ರಾಮಮೂರ್ತಿ ನಗರ ಬೆಂಗಳೂರು ಇಲ್ಲಿ ನಡೆದ ಪ್ರಾಂತೀಯ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬದ 10ನೇ ತರಗತಿಯ ವಿದ್ಯಾರ್ಥಿ ನಿಶ್ವಿತ್.ಪಿ. (ಕಿಶೋರ ವರ್ಗದ -75 ಕೆಜಿ ) ವಿಭಾಗದಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಮುಂದೆ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಬಾಲ ವರ್ಗ ಬಾಲಕಿಯರ-30 ಕೆಜಿ ವಿಭಾಗ ಕರಾಟೆ ಸ್ಪರ್ಧೆಯಲ್ಲಿ ಕೀರ್ತಿ ಜೆ.ರೈ ಎಂಟನೇ ತರಗತಿ ಭಾಗವಹಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಕರಾಟೆ ಶಿಕ್ಷಕರಾದ ಯಾದವ ಬೀರಂತಡ್ಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ಆರಿಗ ತರಬೇತಿ ನೀಡಿರುತ್ತಾರೆ.