ಆ.18 ಸುದ್ದಿ ಅರಿವು ಕೃಷಿ ಸೇವಾ ಕೇಂದ್ರದಿಂದ ಫುಡ್ ಮೇಕಿಂಗ್ ಕಾರ್ಯಾಗಾರ

0

ಪುತ್ತೂರು: ಗೃಹಿಣಿಯರ ಉತ್ತಮವಾದ ಕೆಲಸಗಳಲ್ಲಿ ಫುಡ್ ಮೇಕಿಂಗ್ ಕೂಡ ಒಂದು. ಈ ಫುಡ್ ಮೇಕಿಂಗ್ ವಿಧಾನವನ್ನು ಇನ್ನಷ್ಟು ಸ್ಮಾರ್ಟ್‌ಗೊಳಿಸಲು ಸುವರ್ಣಾವಕಾಶ ಲಭ್ಯವಿದೆ.


ಸುದ್ದಿ ಅರಿವು ಕೃಷಿ ಸೇವಾ ಕೇಂದ್ರದ ವತಿಯಿಂದ ಆ.18ರಂದು ಬೆಳಿಗ್ಗೆ 10:30ರಿಂದ ಎಪಿಎಂಸಿ ರಸ್ತೆಯಲ್ಲಿರುವ ಅರಿವು ಕೃಷಿ ಸೇವಾ ಕೇಂದ್ರದಲ್ಲಿ ಫುಡ್ ಮೇಕಿಂಗ್ ಕಾರ್ಯಾಗಾರ ನಡೆಯಲಿದೆ.

ಕ್ಯಾಂಪ್ಕೋದ ನಿವೃತ್ತ ಎಂ.ಡಿ. ಹಾಗೂ ಆಹಾರೋದ್ಯಮ ಕ್ಷೇತ್ರದಲ್ಲಿ 36 ವರ್ಷಗಳ ಅನುಭವ ಹೊಂದಿರುವ ಹೆಚ್.ಎಂ.ಕೃಷ್ಣಕುಮಾರ್‌ರವರಿಂದ ಆಹಾರ ವಸ್ತುಗಳನ್ನು ನಿಭಾಯಿಸುವ ವಿಧಾನ, ಸಂಸ್ಕರಣೆ ಮತ್ತು ಸಂರಕ್ಷಣೆ, ಅಡುಗೆ ಮನೆಯ ಉತ್ತಮ ನಿರ್ವಹಣೆ, ಶುಚಿತ್ವ, ಆರೋಗ್ಯಕರ ಕುಟುಂಬಕ್ಕಾಗಿ ಆಹಾರ ಮತ್ತು ಪೌಷ್ಟಿಕತೆ ಬಗ್ಗೆ ಆಹಾರ ತಜ್ಞರಿಂದ ವಿಸ್ತೃತ ಮಾಹಿತಿ ಮತ್ತು ಸಂವಹನ, ಚಾಕೋಲೇಟ್ ತಯಾರಿ, ಬೇಕರಿ ತಿನಿಸುಗಳ ತಯಾರಿ, ಕೊಕ್ಕೋ, ಹಲಸು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಬಗ್ಗೆ ಕಾರ್ಯಾಗಾರ ನಡೆಯಲಿದೆ ಸೀಟು ಕಾದಿರಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 8050293990 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕ್ಯಾಂಪ್ಕೋದ ನಿವೃತ್ತ ಎಂ.ಡಿ. ಹೆಚ್.ಎಂ.ಕೃಷ್ಣಕುಮಾರ್‌ರವರಿಂದ ಮಾಹಿತಿ
ಆಹಾರ ವಸ್ತುಗಳ ನಿಭಾಯಿಸುವಿಕೆ, ಸಂಸ್ಕರಣೆ, ಸಂರಕ್ಷಣೆ, ಅಡುಗೆ ಮನೆಯ ನಿರ್ವಹಣೆ, ಶುಚಿತ್ವ, ಪೌಷ್ಟಿಕತೆ, ಚಾಕೋಲೇಟ್ ಬೇಕರಿ ತಿನಿಸುಗಳ ತಯಾರಿ, ಕೊಕ್ಕೋ, ಹಲಸು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಕಾರ್ಯಾಗಾರ

LEAVE A REPLY

Please enter your comment!
Please enter your name here