ಪುತ್ತೂರು: ಸುದ್ದಿ ಅರಿವು ಕೃಷಿ ಸೇವಾ ಕೇಂದ್ರದ ವತಿಯಿಂದ ಆ.18ರಂದು ಎಪಿಎಂಸಿ ರಸ್ತೆಯಲ್ಲಿರುವ ಅರಿವು ಕೃಷಿ ಸೇವಾ ಕೇಂದ್ರದಲ್ಲಿ ಫುಡ್ ಮೇಕಿಂಗ್ ಕಾರ್ಯಾಗಾರ ನಡೆಯಿತು.
ಕ್ಯಾಂಪ್ಕೋದ ನಿವೃತ್ತ ಎಂ.ಡಿ. ಹಾಗೂ ಆಹಾರೋದ್ಯಮ ಕ್ಷೇತ್ರದಲ್ಲಿ 36 ವರ್ಷಗಳ ಅನುಭವ ಹೊಂದಿರುವ ಹೆಚ್.ಎಂ.ಕೃಷ್ಣಕುಮಾರ್ ಆಹಾರ ವಸ್ತುಗಳನ್ನು ನಿಭಾಯಿಸುವ ವಿಧಾನ, ಸಂಸ್ಕರಣೆ ಮತ್ತು ಸಂರಕ್ಷಣೆ, ಅಡುಗೆ ಮನೆಯ ಉತ್ತಮ ನಿರ್ವಹಣೆ, ಶುಚಿತ್ವ, ಆರೋಗ್ಯಕರ ಕುಟುಂಬಕ್ಕಾಗಿ ಆಹಾರ ಮತ್ತು ಪೌಷ್ಟಿಕತೆ ಬಗ್ಗೆ ಆಹಾರ ತಜ್ಞರಿಂದ ವಿಸ್ತ್ರತ ಮಾಹಿತಿ ಮತ್ತು ಸಂವಹನ, ಚಾಕೋಲೇಟ್ ತಯಾರಿ, ಬೇಕರಿ ತಿನಿಸುಗಳ ತಯಾರಿ, ಕೊಕ್ಕೋ, ಹಲಸು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಬಳಿಕ ಹೆಚ್.ಎಂ.ಕೃಷ್ಣಕುಮಾರ್ ತಮ್ಮ ಮನೆಯಲ್ಲಿ ತಯಾರಿಸಿದ ಹಲಸು ಹಾಗೂ ಬಾದಾಮಿಯ ಚಾಕಲೇಟ್‌ಗಳನ್ನು ಹಂಚಿದರು.
ಸುದ್ದಿ ಸಮೂಹ ಸಂಸ್ಥೆಯ ಡಾ. ಯು.ಪಿ. ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಸರ್ವಮಂಗಳ ನೀರ್ಕಜೆ, ಜ್ಯೋತಿಲಕ್ಷ್ಮೀ ರಾಮಕುಂಜ, ರವಿಶಂಕರ್ ಭಟ್, ಶೋಭಾ ಶಿವಾನಂದ, ಸಿಂಚನಾ ಊರುಬೈಲು, ಸೃಜನ್ ಊರುಬೈಲು, ಅರಿವು ಕೃಷಿ ಕೇಂದ್ರದ ಹರಿಣಾಕ್ಷಿ, ಚೈತ್ರಾ ಮಧುಚಂದ್ರ ಎಲಿಯ, ಹೊನ್ನಪ್ಪ ಗೌಡ ಹಾಗೂ ಹಲವಾರು ಮಂದಿ ಉಪಸ್ಥಿತರಿದ್ದರು.