ಪೆರಾಬೆ ಗ್ರಾ.ಪಂ.ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

0

ಪೆರಾಬೆ: ಪೆರಾಬೆ ಗ್ರಾಮ ಪಂಚಾಯತ್‌ನಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.


ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.,ಧ್ವಜಾರೋಹಣ ನೆರವೇರಿಸಿದರು. ಬಳಿಕ ಗ್ರಾ.ಪಂ.ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿದ್ದ ಸ್ಥಳೀಯ ವೈದ್ಯ ಡಾ.ಆಕಾಶ್ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪೆರಾಬೆ ಗ್ರಾ.ಪಂ.ವ್ಯಾಪ್ತಿಯ ಹಿರಿಯ ನಾಗರಿಕ, ಸಮಾಜ ಸೇವಕ ಸೀತಾರಾಮ ರೈ ಕೇವಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸದಸ್ಯೆ ಮಮತ ಸನ್ಮಾನಿತರನ್ನು ಪರಿಚಯಿಸಿದರು.


ಗ್ರಾ.ಪಂ.ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಚಂದ್ರಶೇಖರ ರೈ ಅಗತ್ತಾಡಿ, ಮೋಹನ್‌ದಾಸ್ ರೈ ಪರಾರಿ, ಸದಾನಂದ ಕುಂಟ್ಯಾನ, ಬಿ.ಕೆ.ಕುಮಾರ, ಪಿ.ಜಿ.ರಾಜು, ಕೃಷ್ಣ ವೈ, ಸುಶೀಲ, ಫಯಾಝ್ ಸಿ.ಎಂ., ಮೋಹಿನಿ, ಮಮತ, ಕಾವೇರಿ, ಲೀಲಾವತಿ ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ.ಸಿಬ್ಬಂದಿ ಉಮೇಶ್ ಕೆ.ಸ್ವಾಗತಿಸಿ, ಪಿಡಿಒ ಶಾಲಿನಿ ಕೆ.ಬಿ.ವಂದಿಸಿದರು. ಸಿಬ್ಬಂದಿ ಪದ್ಮಾವತಿ ಕೆ.ನಿರೂಪಿಸಿದರು.

LEAVE A REPLY

Please enter your comment!
Please enter your name here