ದರ್ಬೆಯಲ್ಲಿ ಆ.24ರಂದು ಜಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಶುಭಾರಂಭ – ಇದು ವಿಶ್ವದ ಅತಿದೊಡ್ಡ ಐಟಿ ಎಜ್ಯುಕೇಶನ್ ನೆಟ್ವರ್ಕ್

0

ಪುತ್ತೂರು: ವಿಶ್ವದ ಅತಿದೊಡ್ಡ ಐಟಿ ಎಜ್ಯುಕೇಶನ್ ನೆಟ್ವರ್ಕ್ ಇದೀಗ ಪುತ್ತೂರಿನಲ್ಲಿ ಆರಂಭಗೊಳ್ಳುತ್ತಿದ್ದು ಜಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಹೆಸರಿನಲ್ಲಿ ಆ.24 ರಂದು ದರ್ಬೆ ಪ್ರೀತಿ ಆರ್ಕೇಡ್ ನಲ್ಲಿ ಶುಭಾರಂಭಗೊಳ್ಳಲಿದೆ.
22 ದೇಶಗಳಲ್ಲಿ 800+ ಗುಣಮಟ್ಟದ ತರಬೇತಿ ಕೇಂದ್ರಗಳೊಂದಿಗೆ ಐ.ಎಸ್.ಒ ಪ್ರಮಾಣೀಕೃತ ಶಿಕ್ಷಣ ಜಾಲವಾಗಿರುವ ಈ ಸಂಸ್ಥೆಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ.ಆಂಟನಿ ಪ್ರಕಾಶ್ ಮೊಂತೇರೊ, ಗೌರವ ಉಪಸ್ಥಿತಿಯಾಗಿ ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ|ವಿನಯಚಂದ್ರ, ಅಕ್ಷಯ ಕಾಲೇಜಿನ ಚೇರ್ಮನ್ ಜಯಂತ ನಡುಬೈಲುರವರು ಭಾಗವಹಿಸಲಿದ್ದಾರೆ ಎಂದು ಜಿ.ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಪುತ್ತೂರು ವಿಭಾಗದ ನಿರ್ದೇಶಕ ಸಂತೋಷ್ ಕ್ರಾಸ್ತಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here