ನರಿಮೊಗರು: ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದಲ್ಲಿ ಆ.27ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಅಧ್ಯಕ್ಷ ಅವಿನಾಶ ಕೊಡಂಕಿರಿ ,ಪುರುಷೋತ್ತಮನಾದ ಭಗವಂತ ಶ್ರೀ ಕೃಷ್ಣನ ಆದರ್ಶ ಗುಣಗಳ ಅನುಸರಣೆಗಾಗಿ ಮಕ್ಕಳಿಗೆ ಕೃಷ್ಣ ವೇಷ ಹಾಕಿಸಿ ಬಾಲ್ಯದಲ್ಲೇ ಸಂಸ್ಕಾರ ನೀಡುವುದು ಅಭಿನಂದನೀಯ ಎಂದರು.
ಶಿಶು ಮಂದಿರದ ವಿದ್ಯಾರ್ಥಿಗಳ ಶ್ರೀ ಕೃಷ್ಣ -ರಾಧಾ ವೇಷ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.
ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಬಲ್ಯಾಯ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಸದಸ್ಯ ರಂಗಯ್ಯ ಬಲ್ಲಾಳ್, ಹಿರಿಯ ಪಾಕತಜ್ಞ ಮುರಳಿ ಕುಂಜೂರಾಯ ಬಹುಮಾನ ನೀಡಿದರು.ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
80ಕ್ಕೂ ಮಿಕ್ಕಿ ಪುಟಾಣಿಗಳು ವೇಷ ಧರಿಸಿದ್ದರು. ಶಿಶುಮಂದಿರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಗ್ಗ ಜಗ್ಗಾಟ, ಮೊಸರು ಕುಡಿಕೆ ಸ್ಪರ್ಧೆಗಳು ನಡೆಯಿತು.
ಮುಖ್ಯ ಗುರು ದಿವ್ಯಾ ಸ್ವಾಗತಿಸಿದರು. ಶಿಕ್ಷಕಿಯರಾದ ಪ್ರಜ್ಞಾ, ತೇಜಸ್ವಿನಿ, ಸ್ವಾತಿ, ಪವಿತ್ರಾ ನಿರ್ವಹಿಸಿದರು.