ಪ್ರತಿಭಾ ಕಾರಂಜಿ-ದರ್ಬೆತ್ತಡ್ಕ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳೊಂದಿಗೆ ತಾಲೂಕು ಮಟ್ಟಕ್ಕೆ

0

putturu: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಕುಂಬ್ರ ಇವರ ಜಂಟಿ ಆಶ್ರಯದಲ್ಲಿ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಇತ್ತೀಚೆಗೆ ಏಕತ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ದರ್ಬೆತ್ತಡ್ಕ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಹಿರಿಯ ವಿಭಾಗದಲ್ಲಿ 7ನೇ ತರಗತಿಯ ಪ್ರತೀಕ್ಷಾ ಆಶುಭಾಷಣದಲ್ಲಿ ಪ್ರಥಮ, ಸಂಸ್ಕ್ರತ ಧಾರ್ಮಿಕ ಪಠಣದಲ್ಲಿ ತೃತೀಯ, 6ನೇ ತರಗತಿಯ ತೇಜಸ್ ಎಲ್.ಕೆ ದೇಶಭಕ್ತಿ ಗೀತೆಯಲ್ಲಿ ಪ್ರಥಮ, ಭಕ್ತಿಗೀತೆಯಲ್ಲಿ ತೃತೀಯ, 6ನೇ ತರಗತಿಯ ಜಲಜಾಕ್ಷಿ ಕನ್ನಡ ಕಂಠಪಾಠದಲ್ಲಿ ದ್ವಿತೀಯ, 5ನೇ ತರಗತಿಯ ಎಸ್. ತೇಜಸ್ ನಾಯ್ಕ್ ಮಿಮಿಕ್ರಿಯಲ್ಲಿ ದ್ವಿತೀಯ, 5ನೇ ತರಗತಿಯ ಲಕ್ಷ್ಮೀಶ ಕ್ಲೇ ಮಾಡೆಲಿಂಗ್ ನಲ್ಲಿ ತೃತೀಯ ಬಹುಮಾನ ಪಡೆದಿರುತ್ತಾರೆ.

ಹಾಗೂ ಕಿರಿಯ ವಿಭಾಗದಲ್ಲಿ 4ನೇ ತರಗತಿಯ ತಸ್ವಿನ್ ಆರ್.ಎಚ್ ಭಕ್ತಿಗೀತೆಯಲ್ಲಿ ಪ್ರಥಮ, ಇಂಗ್ಲೀಷ್ ಕಂಠಪಾಠದಲ್ಲಿ ತೃತೀಯ, 4ನೇ ತರಗತಿಯ ಜಾಹ್ನವಿ ಡಿ.ಜಿ. ಛದ್ಮವೇಷದಲ್ಲಿ ಪ್ರಥಮ, 3ನೇ ತರಗತಿಯ ದಿಶಾ.ಡಿ ಅಭಿನಯ ಗೀತೆಯಲ್ಲಿ ತೃತೀಯ, 4ನೇ ತರಗತಿಯ ರಂಜಿತ್ ಕುಮಾರ್ ಕ್ಲೇ ಮಾಡೆಲಿಂಗ್ ನಲ್ಲಿ ತೃತೀಯ, 4ನೇ ತರಗತಿಯ ಮನ್ವಿ.ಕೆ ಕಥೆ ಹೇಳುವುದರಲ್ಲಿ ತೃತೀಯ ಬಹುಮಾನ ಗಳಿಸಿದ್ದು, ಪ್ರಥಮ ಬಹುಮಾನ ಪಡೆದ ಪ್ರತೀಕ್ಷಾ, ತೇಜಸ್.ಎಲ್.ಕೆ, ತಸ್ವಿನ್ ಆರ್.ಎಚ್ ಮತ್ತು ಜಾಹ್ನವಿ ಡಿ.ಜಿ. ಇವರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿರುತ್ತಾರೆ ಎಂದು ದರ್ಬೆತ್ತಡ್ಕ ಶಾಲಾ ಪ್ರಭಾರ ಮುಖೋಪಾಧ್ಯಾಯ ರಾಜು ಇವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here