ಪುಣಚ: ಆಜೇರು ಶಾಲಾ ಎಸ್‌ಡಿಎಂಸಿಗೆ ಆಯ್ಕೆ

0

ಅಧ್ಯಕ್ಷೆ: ಜಯಲಕ್ಷ್ಮೀ, ಉಪಾಧ್ಯಕ್ಷ: ವೆಂಕಟರಮಣ ಪುಣಚ

ಪುತ್ತೂರು: ಪುಣಚ ಗ್ರಾಮದ ಆಜೇರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ ಜಯಲಕ್ಷ್ಮೀ ಮತ್ತು ಉಪಾಧ್ಯಕ್ಷರಾಗಿ ವೆಂಕಟರಮಣ ಪುಣಚರವರುಗಳನ್ನು ಆಯ್ಕೆ ಮಾಡಲಾಗಿದೆ. ಪುಣಚ ಗ್ರಾಪಂ ಅಧ್ಯಕ್ಷೆ ಬೇಬಿಯವರ ಅಧ್ಯಕ್ಷತೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ತೀರ್ಥಾರಾಮ, ರೇಖಾ ಮಾಯಿಲಮೂಲೆ ಉಪಸ್ಥಿತರಿದ್ದರು. ಶಿಕ್ಷಕಿ ಗೀತಾ ಸ್ವಾಗತಿಸಿ, ಭವ್ಯ ವಂದಿಸಿದರು. ಮುಖ್ಯಶಿಕ್ಷಕ ಸುರೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here