ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6ನೇ ಸ್ಥಾನದಲ್ಲಿ ಗುರುತಿಸಲಾಗಿದೆ

0

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕರ ದಿನಾಚರಣೆಯಲ್ಲಿ ಚಿದಾನಂದ ಬೈಲಾಡಿ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘವು ಸದಸ್ಯರ ಸಹಕಾರದೊಂದಿಗೆ 22 ವರ್ಷಗಳ ಸುದೀರ್ಘ ನಡೆಯಲ್ಲಿ ಸಾಕಷ್ಟು ಸದಸ್ಯರ ಸಹಕಾರದೊಂದಿಗೆ ಸಂಸ್ಥೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಮಾಜವು ನಮ್ಮನ್ನು ಗುರುತಿಸುವ ಕೆಲಸ ಆಗಿದೆ. ಇದರ ಜೊತೆಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಹಾಸಭೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಮ್ಮ ಸಂಘವನ್ನು 6ನೇ ಸ್ಥಾನ ಗುರುತಿಸಿದಲ್ಲದೆ ಪ್ರಥಮ ಬಾರಿಗೆ ಚಿನ್ನದ ಪದಕವನ್ನು ಪುರಸ್ಕರಿಸಲಾಗಿದೆ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದರು.


ಅವರು ಪುತ್ತೂರು ಎಪಿಎಂಸಿ ರಸ್ತೆಯಲ್ಲಿನ ಮಣಾಯಿ ಆರ್ಚ್‌ನಲ್ಲಿ ಸ್ವಂತ ಕಟ್ಟಡದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಅವರು ಸೆ.2ರಂದು ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದರು. 2002ರ ಸೆ.2ಕ್ಕೆ ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಕುರುಂಜಿ ವೆಂಕಟ್ರಮಣ ಗೌಡರ ಮಾರ್ಗದರ್ಶನದಲ್ಲಿ ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ಪ್ರಥಮ ಬಾರಿಗೆ ಮಹಾಲಿಂಗೇಶ್ವರ ದೇವಸ್ಥಾನದ ಕಟ್ಟಡದಲ್ಲಿ ನಮ್ಮ ಸಹಕಾರಿ ಸಂಘ ಆರಂಭಗೊಂಡಿತ್ತು. ಸುಮಾರು 20 ಸಮಾನ ಮನಸ್ಕರ ತಂಡ ನಿರಂತರ ಹೋರಾಟ ಮಾಡಿಕೊಂಡು ಮೋಹನ್ ಗೌಡ ಇಡ್ಯಡ್ಕ ಅವರ ನೇತೃತ್ವದಲ್ಲಿ ದಿ.ಜಗನ್ನಾಥ ಬೊಮ್ಮೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಪ್ರಾರಂಭಗೊಂಡ ಸಮಯ ನಿಧಾನಗತಿಯಲ್ಲಿ ಹೋದ ಸಂಘ 2009ರ ತನಕ ಯಾವುದೇ ಶಾಖೆ ತೆರೆಯದೆ 5 ವರ್ಷ ಯಾವುದೇ ಡಿವಿಡೆಂಡ್ ಕೊಡದೆ 2009ರಲ್ಲಿ ಕಡಬದಲ್ಲಿ ಪ್ರಥಮ ಶಾಖೆ ತೆರೆದ ಬಳಿಕ ಸಂಘದ ಬೆಳವಣಿಗೆಗೆ ವೇಗ ಸಿಕ್ಕಿತು. ಬಳಿಕ ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ ಹೀಗೆ ನಿರಂತರವಾಗಿ 2024ರ ತನಕ 10 ಶಾಖೆಗಳನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದು ಇಡಿ ಸಮಾಜ ಇವತ್ತು ಗುರುತಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಗಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಹಾಸಭೆಯಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ನಮ್ಮ ಸಂಘವನ್ನು 6ನೇ ಸ್ಥಾನ ಗುರುತಿಸುವ ಕೆಲಸ ಆಗಿದೆ. ಪ್ರಥಮ ಬಾರಿಗೆ ಚಿನ್ನದ ಪದಕವನ್ನು ಪಡೆಯಲು ಕೂಡಾ ನಾವು ಸಫಲರಾಗಿದ್ದೇವೆ ಎಂದರು. ಇವತ್ತು ಸಂಘ ಹಿಂದೆ ಏನೆಲ್ಲ ಮಾಡಿದೆ ಎಂಬುದನ್ನು ನೆನಪಿಸುವ ಕಾರ್ಯವನ್ನು ಸ್ಥಾಪಕರ ದಿನಾಚರಣೆಯ ಮೂಲಕ ಮಾಡುತ್ತಿದ್ದೇವೆ. ಪ್ರತಿ ವರ್ಷ ನಮ್ಮ ಆರಂಭದ ಕಚೇರಿಯಾದ ಮಹಾಲಿಂಗೇಶ್ವರ ದೇವಸ್ಥಾನದ ಕಟ್ಟಡದಲ್ಲಿ ಸ್ಥಾಪನಾ ದಿನವನ್ನು ಆಚರಿಸಿ, ಕೇಂದ್ರ ಕಚೆರಿ ಸಹಿತ ಎಲ್ಲಾ ಶಾಖೆಗಳಲ್ಲೂ ಬೆಳಿಗ್ಗೆ ಗಂಟೆ 9.30ಕ್ಕೆ ಸರಿಯಾಗಿ ಏಕಕಾಲದಲ್ಲಿ ಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.


ಇನ್ನೂ ಹಲವು ಶಾಖೆಗಳನ್ನು ತೆರೆಯುವ ಗುರಿ:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ ಒಕ್ಕಲಿಗ ಗೌಡ ಸೇವಾ ಸಂಘ ಪ್ರಾರಂಭ ಆಗುವಾಗ ಕಚೇರಿ ಇರಲಿಲ್ಲ. ಆಗ ಬಾಡಿಗೆ ನೆಲೆಯಲ್ಲಿ ಇದ್ದರೂ ಮುಂದೆ ಯೋಚನೆ ಮಾಡಿದಾಗ ಡಿ.ವಿ.ಸದಾನಂದ ಗೌಡರು ನಮಗೆ ಸೊಸೈಟಿ ಮಾಡಲು ಮಾರ್ಗದರ್ಶನ ನೀಡಿದರು. ಹಾಗಾಗಿ 2002ರಲ್ಲಿ ಸೊಸೈಟಿಯನ್ನು ಆರಂಭಿಸಿದ್ದೆವು. ಆ ಸಂದರ್ಭ ಅಧ್ಯಕ್ಷರಾಗಿದ್ದ ಜಗನ್ನಾಥ ಬೊಮ್ಮೆಟಿ ಅವರು ಚಾಲೆಂಜ್ ಹಾಕಿದ್ದರಿಂದ ಸಂಘ ಯಶಸ್ವಿಯಾಗಿದೆ. ಹಲವು ಪ್ರಶಸ್ತಿಯನ್ನು ಪಡೆದಿದೆ. ಈಗಾಗಲೇ 10 ಶಾಖೆಯನ್ನು ಸಂಘ ಹುಟ್ಟುಹಾಕಿದೆ. ಮುಂದೆ ತಾಲೂಕಿನಿಂದ ಹೊರಗಡೆಯು ಶಾಖೆಗಳನ್ನು ತೆರೆಯುವ ಗುರಿ ಹೊಂದಿದ್ದೇವೆ ಎಂದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ ಮಳವೇಲು, ರಾಮಕೃಷ್ಣ ಗೌಡ ಕರ್ಮಲ, ನಾರಾಯಣ ಗೌಡ ಪಾದೆ, ಸಂಘದ ಲೆಕ್ಕಪರಿಶೋದನಾಧಿಕಾರಿ ಶ್ರೀಧರ್ ಗೌಡ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ತೆಂಕಿಲ, ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಸಮುದಾಯ ಭವನದ ಉಸ್ತುವಾರಿ ದಯಾನಂದ ಕೆ.ಎಸ್, ಒಕ್ಕಲಿಗ ಮಹಿಳಾ ಗೌಡ ಸಂಘದ ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ಸಲಹಾ ಸಮಿತಿ ಸದಸ್ಯೆ ಗೌರಿ ಬನ್ನೂರು, ಬಾಬು ಗೌಡ ಭಂಡಾರದ ಮನೆ, ಸುರೇಶ್ ಗೌಡ, ಸೋಮಪ್ಪ ಗೌಡ ಬಡಾವು, ಸೀತಾರಾಮ ಪೆರಿಯತ್ತೋಡಿ, ಪ್ರೇಮಾನಂದ ಬಿ ಉಪಸ್ಥಿತರಿದ್ದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಸ್ವಾಗತಿಸಿ, ಪುತ್ತೂರು ಎಪಿಎಂಸಿ ಶಾಖಾ ಪ್ರಬಂಧಕಿ ತೇಜಸ್ವಿನಿ ವಂದಿಸಿದರು. ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಹಾಲಿಂಗೇಶ್ವರ ದೇವಸ್ಥಾನ ಸಭಾಭವನ ಕಟ್ಟಡದಲ್ಲಿ 2002ರಲ್ಲಿ ಆರಂಭಗೊಂಡ ಶಾಖೆಯ ಕಚೇರಿಯಲ್ಲಿ ಬೆಳಿಗ್ಗೆ ಪ್ರಥಮವಾಗಿ ದೀಪ ಬೆಳಗಿಸಲಾಯಿತು. ಈ ಸಂದರ್ಭ ಅಲ್ಲಿನ ಪ್ರಭಾರ ಶಾಖಾ ಪ್ರಭಂದಕಿ ನಿಶ್ಚಿತಾ ಯು.ಡಿ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ಕಾವ್ಯ ಎ.ಎಸ್, ರಕ್ಷಿತ್ ಜಿ.ಎನ್, ಯಶ್ಚಿತ್, ಪಿಗ್ಮಿ ಸಂಗ್ರಹಕರಾದ ಮೋಹನ್ ಗೌಡ, ಕುಸುಮಾಧರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಾಲ ವಸೂಲಾತಿಯಲ್ಲಿ ವಿಶೇಷ ಮಾನದಂಡ ಸಿಕ್ಕಿದೆ
ಪ್ರಸ್ತುತ ಸ್ಥಿತಿಯಲ್ಲಿ ಸಂಘವು ಸುಮಾರು ರೂ.103 ಕೋಟಿ ಡೆಪೋಸಿಟ್, ರೂ. 99 ಕೋಟಿ ಸಾಲವನ್ನು, ರೂ. 542 ಕೋಟಿ ವ್ಯವಹಾರ ಮಾಡಿಕೊಂಡು ಸುಮಾರು ರೂ. 1.50 ಕೋಟಿಗೂ ಮಿಕ್ಕಿ ಲಾಭವನ್ನು ಪಡೆದುಕೊಂಡು ವಿಶೇಷವಾಗಿ ಸಾಲ ವಸೂಲಾತಿಯಲ್ಲಿ ಸಾಧನೆ ಮಾಡಿದ್ದೇವೆ. ಸಹಕಾರಿ ಸಂಘಗಳಲ್ಲಿ ಮುಖ್ಯವಾಗಿರುವ ಸಮಸ್ಯೆ ಸಾಲ ವಸೂಲಾತಿ. ಅದರೆ ಸಹಕಾರಿ ಸಂಘ ವರ್ಷದಿಂದ ವರ್ಷಕ್ಕೆ ವಸೂಲಾತಿ ಹೆಚ್ಚಾಗಿದೆ. ಈ ವರ್ಷ ಶೇ.99.12 ಸಾಲ ವಸೂಲಾತಿಯಲ್ಲಿ ದಾಖಲೆಯ ಫಲಿತಾಂಶ ಮಾಡಿದ್ದೇವೆ.
ಚಿದಾನಂದ ಬೈಲಾಡಿ ಅಧ್ಯಕ್ಷರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ

LEAVE A REPLY

Please enter your comment!
Please enter your name here