





ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಅಂಗವಾಗಿ ಸಮಿತಿಯಿಂದ ಶ್ರೀ ಮಠಕ್ಕೆ ಬೆಳ್ಳಿಯ ಹರಿವಾಣ ಸಮರ್ಪಣೆ ಮಾಡಲಾಯಿತು. ಮಠದ ಅರ್ಚಕ ರಾಘವೇಂದ್ರ ಉಡುಪ ಅವರ ಮೂಲಕ ಸಮಿತಿ ಪದಾಧಿಕಾರಿಗಳು ಬೆಳ್ಳಿಯ ಹರಿವಾಣವನ್ನು ಸಮರ್ಪಣೆ ಮಾಡಿದರು.








