ಪುತ್ತೂರು: ಪುತ್ತೂರು ನಗರಸಭೆ 2ನೇ ಅವಧಿಯ ನೂತನ ಅಧ್ಯಕ್ಷರಾಗಿ ಲೀಲಾವತಿ ಅಣ್ಣು ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಬಾಲಚಂದ್ರ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆಗೆ ಮೀಸಲಾಗಿದ್ದ ಕಾರಣ ಪುತ್ತೂರು ವಾರ್ಡ್ ಸಂಖ್ಯೆ 13ರ ಸದಸ್ಯೆ ಶಶಿಕಲಾ ಸಿ.ಎಸ್ ಮತ್ತು ವಾರ್ಡ್ ಸಂಖ್ಯೆ ಚಿಕ್ಕಮುಡ್ನೂರು 1ರ ಲೀಲಾವತಿ ಅವರಿಗೆ ಮಾತ್ರ ಅವಕಾಶವಿತ್ತು. ಬಿಜೆಪಿ ಪಕ್ಷದಿಂದ ಲೀಲಾವತಿ ಅಣ್ಣು ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಲು ಸೂಚನೆಯಂತೆ ಅವರು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಪಿ.ಜಿ.ಜಗನ್ನಿವಾಸ ರಾವ್, ಬಾಲಚಂದ್ರ ಮತ್ತು ಸುಂದರ ಪೂಜಾರಿ ಅವರ ಹೆಸರು ಕೇಳಿ ಬಂದಿತ್ತಾದರೂ, ಪಕ್ಷದ ಸೂಚನೆಯಂತೆ ಬಾಲಚಂದ್ರ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ.
ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಮತ್ತು ತಹಸೀಲ್ದಾರ್ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಪುತ್ತೂರಿನ ಅಭಿವೃದ್ದಿಗೆ ಜೊತೆಯಾಗಿ ಕೆಲಸ ಮಾಡೋಣ- ಶಾಸಕ ಅಶೋಕ್ ರೈ
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ ಅವರಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶಾಲು ಹೊದಿಸಿ ಗೌರವಿಸಿದರು. ಪುತ್ತೂರಿನ ಅಭಿವೃದ್ದಿಗೆ ಜೊತೆಯಾಗಿ ಕೆಲಸ ಮಾಡೋಣ ಎಂದರು.