ಕಾಂಗ್ರೆಸ್ ವತಿಯಿಂದ ಆನಂದಾಶ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈರವರ ಹುಟ್ಟುಹಬ್ಬ ಆಚರಣೆ

0

ಪುತ್ತೂರು: ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ಸಿನ ಕಾರ್ಯದರ್ಶಿ ಅರ್ಷದ್ ದರ್ಬೆರವರ ನೇತೃತ್ವದಲ್ಲಿ ಪುತ್ತೂರು ಸಂಪ್ಯದಲ್ಲಿರುವ ಆನಂದಾಶ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಹುಟ್ಟುಹಬ್ಬ ಆಚರಿಸಲಾಯಿತು.

ಮುಖ್ಯ ಅತಿಥಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹುಟ್ಟುಹಬ್ಬವನ್ನು ಬೇರೆ ಬೇರೆ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದ್ದು ಆನಂದಾಶ್ರಮದಲ್ಲಿ ಕೂಡ ಇಲ್ಲಿನ ವೃದ್ಧರೊಂದಿಗೆ ಕೂಡಿಕೊಂಡು ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಕಾರ್ಯವೈಖರಿ, ಪುತ್ತೂರಿನ ಅಭಿವೃದ್ಧಿಯ ಚಿಂತನೆ, ಬಡಬಗ್ಗರ ಬಗ್ಗೆ ಇರುವ ಕಾಳಜಿ, ಪುತ್ತೂರಿನಲ್ಲಿ ಕಳೆದ ಒಂದುವರೆ ವರ್ಷಗಳ ಅವಧಿಯಲ್ಲಿ ಅವರು ನಿರ್ವಹಿಸಿದ ಕಾರ್ಯ ಎಲ್ಲವೂ ಮೆಚ್ಚುವಂತಹುದು ಎಂದರು.


ಶಾಸಕರು ಪುತ್ತೂರಿನಲ್ಲಿ ಪಕ್ಷತೀತವಾಗಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಹಿರಿಯರ ಬಗ್ಗೆ ಅಪಾರ ಗೌರವವುಳ್ಳ ವ್ಯಕ್ತಿಯಾಗಿದ್ದಾರೆ. ತನ್ನ ತಾಯಿಯನ್ನು ಹಾಗೂ ಎಲ್ಲಾ ಹಿರಿಯರನ್ನು ಯಾವ ರೀತಿ ಅವರು ಗೌರವಿಸುತ್ತಾರೆ ಎಂಬುದನ್ನು ಮನಗಂಡು ಅರ್ಷದ್ ದರ್ಬೆ ಹಾಗೂ ಅವರ ಸಂಗಡಿಗರು ಶಾಸಕರ ಹುಟ್ಟುಹಬ್ಬವನ್ನು ಇಲ್ಲಿನ ಆನಂದಾಶ್ರಮದಲ್ಲಿರುವ ವೃದ್ಧರೊಂದಿಗೆ ಆಚರಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವರವರು ಮಾತನಾಡಿ ಶಾಸಕ ಅಶೋಕ್ ಕುಮಾರ್ ರೈ ರವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಶಾಸಕ ಅಶೋಕ್ ಕುಮಾರ್ ರೈ ರವರಿಗೆ ಇನ್ನಷ್ಟು ಕೆಲಸ ಕಾರ್ಯಗಳನ್ನು ಮಾಡಲು ಭಗವಂತನು ಶಕ್ತಿ ನೀಡಲಿ ಅವರು ಯಶಸ್ಸಿನತ್ತ ಸಾಗಲಿ ಎಂದು ಹಾರೈಸಿದರು.

ಜಿಲ್ಲಾ ಪಂಚಾಯತಿನ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿರವರು ಮಾತನಾಡಿ ಜೀವನಪೂರ್ತಿ ಮಕ್ಕಳನ್ನು ಸಾಕಿ ಸಲಹುವ ತಂದೆ ತಾಯಿಯಂದಿರ ಸೇವೆ ಅವಿಸ್ಮರಣೀಯ. ಅಂತಹ ಮಕ್ಕಳು ದೊಡ್ಡದಾದಾಗ ತಾಯಿ, ತಂದೆಗಳ ಬಾಳಿನ ಆಸರೆ ಆಗಬೇಕು ಎಂದು ಹೇಳಿದರು. ಇಂದು ಅಶೋಕ್ ಕುಮಾರ್ ರೈ ಅವರ ಹುಟ್ಟುಹಬ್ಬವನ್ನು ಇಲ್ಲಿನ ಆನಂದಾಶ್ರಮದಲ್ಲಿ ಈ ರೀತಿಯಾಗಿ ಆಚರಿಸುವುದು ತಂದೆ ತಾಯಂದಿರಿಗೆ ನಾವು ಕೊಡುವ ಗೌರವವಾಗಿದೆ ಎಂದು ಹೇಳಿದರು.

ರೈ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟ್ ನಿಹಾಲ್ ಶೆಟ್ಟಿ ಅವರು ಮಾತನಾಡಿ ಅಶೋಕ್ ಕುಮಾರ್ ರೈ ಅವರ ಹುಟ್ಟುಹಬ್ಬವನ್ನು ಆನಂದಾಶ್ರಮದ ವೃದ್ಧರೊಂದಿಗೆ ಸೇರಿಕೊಂಡು ಆಚರಿಸಿ ಆಚರಿಸುತ್ತಿರುವುದು ಮಹತ್ವಪೂರ್ಣವಾಗಿದೆ. ತಂದೆ ತಾಯಿಯ ಮಹತ್ವವನ್ನು ನಮ್ಮ ಮುಂದಿನ ಯುವಜನಾಂಗಕ್ಕೆ ತಿಳಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದ ಅವರು ಮುಂದಿನ ದಿನದಲ್ಲಿ ಇಲ್ಲಿನ ಈ ಆನಂದಾಶ್ರಮದಲ್ಲಿ ಟ್ರಸ್ಟ್ ವತಿಯಿಂದ ಒಳ್ಳೆಯ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಚಿಸಲಾಗುವುದು ಎಂದು ಅವರು ಹೇಳಿದರು.


ಪುತ್ತೂರು ನಗರಯೋಜನ ಪ್ರಾಧಿಕಾರದ ಸದಸ್ಯ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ ಶಾಸಕ ಅಶೋಕ್ ಕುಮಾರ್ ರೈ ಅವರು ತನ್ನ ತಾಯಿಯನ್ನು ಹಾಗೂ ಹಿರಿಯರನ್ನು ಯಾವ ರೀತಿಯಲ್ಲಿ ಗೌರವಿಸುತ್ತಾರೋ ಅದು ನಮಗೆಲ್ಲ ಪ್ರೇರಣೆಯಾಗಿದೆ. ಇದು ಪ್ರತಿಯೊಬ್ಬರ ಜೀವನದಲ್ಲಿ ನಡೆಯಬೇಕು ಎಂದು ಅವರು ಹೇಳಿದರು.


ಆನಂದಾಶ್ರಮದ ಟ್ರಸ್ಟಿ ಸದಾಶಿವ ಪೈರವರು ಮಾತನಾಡಿ ಇಲ್ಲಿನ ಆನಂದ ಆಶ್ರಮಕ್ಕೆ ವರ್ಷಕ್ಕೆ ಒಮ್ಮೆಯಾದರೂ ಭೇಟಿ ನೀಡಿ ಇಲ್ಲಿನ ವೃದ್ಧರೊಂದಿಗೆ ಒಂದು ಹೊತ್ತು ಕಳೆಯುವ ಮೂಲಕ ಅವರಿಗೆ ಮನಶಾಂತಿ ಹಾಗೂ ಕೊರಗನ್ನು ನೀಗಿಸಲು ಸಾಧ್ಯವಾಗಲಿದೆ ಇಂಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಒಳ್ಳೆಯ ಸಂದೇಶವನ್ನು ನೀಡಿದ ಹರ್ಷಾದ್ ಮತ್ತು ತಂಡದವರಿಗೆ ಅಭಿನಂದನೆಗಳು ಎಂದವರು ಹೇಳಿದರು.


ಪುತ್ತೂರು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ ಮಾತನಾಡಿ ಇಲ್ಲಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಹುಟ್ಟುಹಬ್ಬವನ್ನು ನಾವೆಲ್ಲರೂ ಸೇರಿ ಒಂದು ವಿಶಿಷ್ಟ ರೀತಿಯಲ್ಲಿ ಇಲ್ಲಿನ ಆನಂದ ಆಶ್ರಮದಲ್ಲಿ ಆಚರಿಸುತಿದ್ದೇವೆ. ಅಶೋಕ್ ರೈ ಅವರು ಶಾಸಕರಾಗುವ ಮುಂಚೆ ಕೂಡ ಟ್ರಸ್ಟನ್ನು ಸ್ಥಾಪಿಸಿ ಆ ಮೂಲಕ ಬಡವರ ಶೋಷಿತರ ಸೇವೆ ಮಾಡುತ್ತಾ ಹಾಗೂ ಎಲ್ಲಾ ವರ್ಗದವರನ್ನು ಒಂದೇ ರೀತಿ ಕಾಣುತ್ತಾ ಬಂದವರಾಗಿದ್ದು ಶಾಸಕರಾದ ಬಳಿಕ ಹಲವಾರು ರೀತಿಯಲ್ಲಿ ಅಭಿವೃದ್ಧಿ ಮಾಡಿರುವುದನ್ನು ಪತ್ರಿಕೆಗಳ ಮೂಲಕ ನಾವಿಂದು ದಿನನಿತ್ಯ ಕಾಣುತ್ತಿದ್ದೇವೆ. ಅಶೋಕ್ ಕುಮಾರ್‌ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ ಅವರು ಇನ್ನಷ್ಟು ಸೇವೆ ಮಾಡಲು ಭಗವಂತನು ಆಯುರಾರೋಗ್ಯ ನೀಡಿ ಅನುಗ್ರಹಿಸಲಿ ಎಂದು ಹೇಳಿದರು.


ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿ ಹಾಜಿ ಅಬ್ದುಲ್ ರಹಿಮಾನ್ ಆಜಾದ್ ದರ್ಬೆ, ರಾಜ್ಯ ಎನ್‌ಎಸ್‌ಯುಐನ ಉಪಾಧ್ಯಕ್ಷ ಪಾರೂಖ್ ಬಾಯಬೆ, ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತಡ್ಕ, ಈಸ್ಟರ್ ಗ್ರೂಪ್‌ನ ಎಂ.ಡಿ. ಖಲಂದರ್, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಅನ್ವರ್ ಖಾಸಿಂ, ಪುತ್ತೂರು ಪುರಸಭಾ ಮಾಜಿ ಸದಸ್ಯ ಇಸಾಕ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು.

ಶಂಸುದ್ದೀನ್ ನೈತಾಡಿ, ಸಿಯಾನ್ ದರ್ಬೆ, ಆಶಿಕ್ ಅರೆಕ್ಕಿಲ ಮಾಡಾವು, ರಫೀಕ್ ಅರಿಕ್ಕಿಲ ಮಾಡಾವು, ಸುಹೇಲ್ ಸಂಟ್ಯಾರ್, ರಮೀಝ್ ಸಂಟ್ಯಾರ್, ಶಿಮಾಲ್ ಸಂಟ್ಯಾರ್, ನಿಶಾನ್ ಸಂಟ್ಯಾರ್, ಅಜ್ಮಲ್ ಕಲ್ಲಾರ್ಪೆ, ರಿಯಾಜ್ ಸಂಟ್ಯಾರ್, ಹಾಪಿಲ್ ಕೂರ್ನಡ್ಕ, ಅಶೀನಲ್ ಪಾಪೆತಡ್ಕ, ಶಾಫಿ ಸಂಟ್ಯಾರ್, ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ವಾಕ್ಸಿನ ಮಾಜಿ ಸದಸ್ಯರು ಗ್ರಾಮ ಪಂಚಾಯತಿನ ಮಾಜಿ ಉಪಾಧ್ಯಕ್ಷರು ಆದ ಹನೀಫ್ ಕೆಎಂ ಮಾಡಾವು ರವರು ವಂದಿಸಿದರು.

LEAVE A REPLY

Please enter your comment!
Please enter your name here