ಬಡಗನ್ನೂರು: ನೇಪಾಳದಲ್ಲಿ ನಡೆದ ಇಂಡೋ- ನೇಪಾಳ ಇಂಟರ್ನ್ಯಾಷನಲ್ ಮೆನ್ ಆ್ಯಂಡ್ ವುಮೆನ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ 2024 ಪಂದ್ಯಾಕೂಟದಲ್ಲಿ ಶಶಾಂಕ್ ರೈ ಪಟ್ಟೆ ಭಾರತ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಇವರು ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಸದಾನಂದ ರೈ ಹಾಗೂ ಸವಿತಾ ರೈ ದಂಪತಿಗಳ ಪುತ್ರ. ವಾಲಿಬಾಲ್ ತರಬೇತುದಾರ ಚರಣ್ ಸಾಯಿ ಇವರ ಗರಡಿಯಲ್ಲಿ ತರಬೇತಿ ಪಡೆದ ಪ್ರತಿಭೆ. ಪ್ರಸ್ತುತ ಮಂಗಳೂರಿನ ಎಸ್ ಎನ್ ಎಸ್ ಕಾಲೇಜು ಬಜ್ಪೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.