ಬೆಟ್ಟಂಪಾಡಿ: ಇಲ್ಲಿನ ನವೋದಯ ಪ್ರೌಢಶಾಲೆ ಬೆಟ್ಟಂಪಾಡಿಯಲ್ಲಿ ಶಾಲಾ ಆಡಳಿತ ಮಂಡಳಿಯ ಮುಂದಾಳತ್ವದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಕಕ್ಕೂರು ಶಾಲೆಯ ನಿವೃತ್ತ ಶಿಕ್ಷಕ, ಮುಂಡೂರು ವಿಷ್ಣು ಭಟ್ ಇವರು 50 ಗಿಡಗಳನ್ನು ಉಚಿತವಾಗಿ ನೀಡುವುದರ ಮೂಲಕ, ಒಂದು ತೆಂಗಿನ ಗಿಡ ನೆಟ್ಟು “ಕಲ್ಪವೃಕ್ಷ -100” ಯೋಜನೆಗೆ ಚಾಲನೆ ನೀಡಿ ಶುಭಹಾರೈಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ, ಶಾಲಾ ಸಂಚಾಲಕ ಡಾ. ಶ್ರೀಕೃಷ್ಣಭಟ್, ಕಾರ್ಯದರ್ಶಿ ಸಹಕಾರವನ ನಾರಾಯಣ ಭಟ್, ಶೌರ್ಯ ವಿಪತ್ತು ನಿರ್ವಹಣಾ ಘಟಕ ಇರ್ದೆ ಬೆಟ್ಟಂಪಾಡಿ ವಲಯದ ಅಧ್ಯಕ್ಷ ಸುಬ್ರಹ್ಮಣ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇರ್ದೆ ಬೆಟ್ಟಂಪಾಡಿ ವಲಯದ ಮೇಲ್ವಿಚಾರಕ ಸೋಹನ್ ಗೌಡ ಶುಭಹಾರೈಸಿದರು. ಈ ಯೋಜನೆಗೆ ವಾಟ್ಸಾಪ್ ಗುಂಪಿನ ಮೂಲಕವೇ ಧನಸಹಾಯ ನೀಡಿ ಸಹಕರಿಸಿದ ಮತ್ತು ಶಾಲಾ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ನವೋದಯ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಬಳಿಕ ನಡೆದ ಶ್ರಮದಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇರ್ದೆ ಬೆಟ್ಟಂಪಾಡಿ ವಲಯದ ಅಧ್ಯಕ್ಷರು, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಇರ್ದೆ ಬೆಟ್ಟಂಪಾಡಿ ವಲಯ, ಶಾಲಾ ಶಿಕ್ಷಕ – ರಕ್ಷಕ ವೃಂದದ ಅಧ್ಯಕ್ಷ ಗಣೇಶ್ ರೈ, ಉಪಾಧ್ಯಕ್ಷರಾದ ರಾಮಪ್ರಸಾದ್, ಪೋಷಕ ವೃಂದ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ಮತ್ತು ಶಾಲಾ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳ ಪರವಾಗಿ ಉಮೇಶ್ ರವರು ಶ್ರಮದಾನದಲ್ಲಿ ಪಾಲ್ಗೊಂಡರು. ಶಾಲಾ ಮುಖ್ಯಗುರು ಪುಷ್ಪಾವತಿ ಎಸ್. ಇವರು ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ನೆನಪಿಸಿ, ಶ್ಲಾಘಿಸಿದರು.
ಶಿಕ್ಷಕಿಸುಮಂಗಲಾ ಕೆ. ಸ್ವಾಗತಿಸಿದರು. ಸಹಶಿಕ್ಷಕಿಯರಾದ ಭುವನೇಶ್ವರಿ.ಎಂ, ಶೋಭಾ.ಬಿ, ಮತ್ತು ಗೌತಮಿ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರಿಂದ ಪ್ರಕೃತಿಯ ಪ್ರಾರ್ಥನೆ ನಡೆಯಿತು. ಯಸ್ತಿತಾ, ನಾರಾಯಣ ಬನ್ನಿಂತಾಯ, ಸಿಬಂದಿ ಪುರಂದರ ಹಾಗೂ ಅಡುಗೆ ಸಿಬಂದಿಗಳು ಸಹಕರಿಸಿದರು. ಶಿಕ್ಷಕ ರಾಧಾಕೃಷ್ಣ ಆರ್. ಕೋಡಿ ನಿರೂಪಿಸಿದರು. ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ವಂದಿಸಿದರು. ನವೋದಯ ವಿದ್ಯಾಸಮಿತಿಯ ಸದಸ್ಯ ಶ್ರೀಕೃಷ್ಣ ಭಟ್ ಬಟ್ಯಮೂಲೆ ಯೋಜನೆಯನ್ನು ಸಂಯೋಜಿಸಿದರು.