ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

365.50 ಕೋಟಿ ರೂ. ವ್ಯವಹಾರ, 1.52 ಕೋಟಿ ರೂ ಲಾಭ: ಶೇ. 14 ಡಿವಿಡೆಂಡ್: ತಾರಾನಾಥ ಕಾಯರ್ಗ


ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 365.50 ಕೋಟಿ ರೂ. ವ್ಯವಹಾರ ಮಾಡಿ 1.52 ಕೋಟಿ ರೂ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಹೇಳಿದರು. ಸೆ. 15 ರಂದು ಜರಗಿದ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಸದಸ್ಯರ ಸಹಕಾರದಿಂದಾಗಿ ಸಂಘವು ಸತತವಾಗಿ 22ನೇ ಬಾರಿಗೆ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ, ಶೇಕಡಾ 99.22 ಸಾಲ ವಸೂಲಾತಿ ಸಾಧನೆ ಮಾಡಲಾಗಿದೆ. ವರದಿ ವರ್ಷದಲ್ಲಿ 3,451 ಸದಸ್ಯರಿದ್ದು, ರೂ 5.52 ಕೋಟಿ ಪಾಲು ಬಂಡವಾಳ ಮತ್ತು ರೂ. 36.39 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಸದಸ್ಯರಿಗೆ ರೂ 55.41 ಕೋಟಿ ಸಾಲ ವಿತರಿಸಿ, ವರ್ಷಾಂತ್ಯಕ್ಕೆ ರೂ 52.34 ಕೋಟಿ ಹೊರಬಾಕಿ ಇರುತ್ತದೆ. ಎಂದು ಅವರು ಹೇಳಿದರು


ಮಾಸ್ ಸಂಸ್ಥೆಯ ಸಹಕಾರದಲ್ಲಿ ಪ್ರತಿ ದಿನ ಅಡಿಕೆ ಖರೀದಿ :
ಪ್ರತಿ ದಿನ ಮಾಸ್ ಸಂಸ್ಥೆಯ ಮೂಲಕ ಸಂಘದಲ್ಲಿ ಅಡಿಕೆ ಖರೀದಿ ವ್ಯವಹಾರ ಮಾಡಲಾಗುತ್ತಿದ್ದು, 2023-24ನೇ ಸಾಲಿನಲ್ಲಿ ರೈತರ ಸಹಕಾರದೊಂದಿಗೆ 4.60 ಕೋಟಿ ರೂ ವ್ಯವಹಾರ ಮಾಡಲಾಗಿದೆ ಎಂದು ಅಧ್ಯಕ್ಷ ತಾರಾನಾಥ ಕಾಯರ್ಗ ತಿಳಿಸಿದರು.

ಸನ್ಮಾನ
ನಾಟಿ ವೈದ್ಯರಾದ, ಸಹಕಾರಿ ಧುರೀಣ ವಾಸುದೇವ ಇಡ್ಯಾಡಿ ಮತ್ತು ರಾಜ್ಯ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಸವಣೂರು ಗ್ರಾಮ ಪಂಚಾಯತ್ ಗ್ರಂಧಾಲಯದ ಮೇಲ್ವಿಚಾರಕಿ ಶಾರದಾ ಮಾಲೆತ್ತಾರುರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

42 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
ಸಂಘದ ವತಿಯಿಂದ 42 ಮಂದಿ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ವಿದ್ಯಾರ್ಥಿಗಳಿಗೆ ನಗದು ನೀಡಿ ಗೌರವಿಸಲಾಯಿತು.

ಸಂತೋಷ ತಂದಿದೆ- ಸೀತಾರಾಮ ರೈ :
ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈರವರು ಮಾತನಾಡಿ ಸಂಘಕ್ಕೆ 1.52 ಕೋಟಿ ರೂ. ಲಾಭ ಬಂದಿರುವುದು ತುಂಬಾ ಸಂತೋಷ ತಂದಿದೆ, ಸಂಘದ ಸಿಬ್ಬಂಧಿಗಳ ನೇಮಕಾತಿ ಮಾಡುವ ಪೂರ್ಣ ಅಧಿಕಾರ ಸಹಕಾರ ಸಂಘಕ್ಕೆ ಇರುವುದರಿಂದ ನಮ್ಮ ಸಂಘದಲ್ಲೂ ಇದನ್ನು ಮಾಡಬಹುದು ಎಂದು ಸಲಹೆ ನೀಡಿದರು. ಮಾಸ್ ಸಂಸ್ಥೆಯ ಮೂಲಕ ಸವಣೂರಿನಲ್ಲಿ ಅತೀ ಹೆಚ್ಚು ಅಡಿಕೆ ಖರೀದಿಗೆ ಪೂರ್ಣ ಸಹಕಾರವನ್ನು ನೀಡುತ್ತಿರುವ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಗುರುತಿಸಿ, ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಮತ್ತು ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್‌ರವರನ್ನು ಸೆ. 21 ರಂದು ನಡೆಯುವ ಮಾಸ್ ಸಂಸ್ಥೆಯ ಮಹಾಸಭೆಯಲ್ಲಿ ಸನ್ಮಾನಿಸಲಾಗುವುದು ಎಂದು ಸೀತಾರಾಮ ರೈಯವರು ಹೇಳಿದರು.

ಸಂಘವು ಸಮಾಜದಲ್ಲಿ ಗುರುತಿಸಿದೆ-ರಾಕೇಶ್ ರೈ:
ಸುಳ್ಯ ಅಕ್ರಮ-ಸಕ್ರಮ ಸಮಿತಿಯ ಮಾಜಿ ಸದಸ್ಯ ರಾಕೇಶ್ ರೈ ಕೆಡಂಜಿರವರು ಮಾತನಾಡಿ, ಸಂಘವು ಸಮಾಜದಲ್ಲಿ ಉತ್ತಮ ಸೇವೆ ನೀಡುವ ಮೂಲಕ ಗುರುತಿಸಲ್ಪಟ್ಟಿದೆ, ಇಲ್ಲಿನ ಸಿಬ್ಬಂದಿಗಳ ಉತ್ತಮ ಸೇವಾ ಕಾರ್‍ಯ ಮತ್ತು ಆಡಳಿತ ಮಂಡಳಿಯ ದಕ್ಷ ಕಾರ್‍ಯನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಾಲ ಮನ್ನಾ ಹಣ ಬಂದಿಲ್ಲ- ಸೀತಾರಾಮ ಗೌಡ
ಸಾಲಮನ್ನಾದ ಹಣದ ಹಣ ಇನ್ನೂ ಕೆಲವು ಮಂದಿಗೆ ಬಂದಿಲ್ಲಿ ಎಂಬ ಸೀತಾರಾಮ ಗೌಡ ಮುಂಡಾಳರವರ ಪ್ರಶ್ನೆಗೆ ಉತ್ತರಿಸಿದ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗರವರು ಮಾತನಾಡಿ ರಾಜ್ಯ ಸರಕಾರ ಈ ಹಿಂದೆ ಜಾರಿಗೆ ತಂದ ಒಂದು ಲಕ್ಷ ರೂ ಸಾಲ ಮನ್ನಾದಲ್ಲಿ ಸವಣೂರು ಪ್ರಾಥಮಿಕ ಸಂಘದ 39 ಮಂದಿ ಸದಸ್ಯರುಗಳಿಗೆ ಹಣ ಬರಲು ಬಾಕಿ ಇದ್ದು, ಈ ಬಗ್ಗೆ ಶಾಸಕರಿಗೆ, ಸಹಕಾರ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದೇವೆ, ಮುಂದೆಯೂ ಪ್ರಯತ್ನವನ್ನು ಮಾಡುತ್ತೇವೆ ಎಂದರು.
ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಸಮರ್ಪಕ ರೀತಿಯಲ್ಲಿ ಜಾರಿಗೆ ತರುವಂತೆ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ ಸಲಹೆಯನ್ನು ನೀಡಿದರು.


ಸಂಘದಲ್ಲಿ ತೆಂಗು, ಕೊಕ್ಕು ಖರೀದಿ ಕೇಂದ್ರ ಬೇಕು- ಸಚಿನ್ ಕುಮಾರ್
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆಂಗು ಮತ್ತು ಕೊಕ್ಕೋ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡುವಂತೆ ಹಾಫ್‌ಕಾಮ್ಸ್ ನಿರ್ದೇಶಕ ಸಚಿನ್ ಕುಮಾರ್ ಜೈನ್ ಸಲಹೆಯನ್ನು ನೀಡಿದರು, ಈ ಉತ್ತರಿಸಿದ ಅಧ್ಯಕ್ಷ ತಾರಾನಾಥ ಕಾಯರ್ಗರವರು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದರು.
ಶವ ಸಂಸ್ಕಾರ ಪೆಟ್ಟಿಗೆಯನ್ನು ಬೆಳಂದೂರು ಶಾಖೆಯಲ್ಲಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಕೃಷ್ಖ ರೈ ಪುಣ್ಚಪ್ಪಾಡಿ, ನ್ಯಾಯವಾದಿ ಶೀನಪ್ಪ ಗೌಡ ಬೈತಡ್ಕ, ಗಿರಿಶಂಕರ್ ಸುಲಾಯ ದೇವಸ್ಯ, ಅನ್ನಪೂರ್ಣಪ್ರಸಾದ್ ರೈ, ವಾಸುದೇವ ಇಡ್ಯಾಡಿ, ಕೆ.ಟಿ.ಭಟ್‌ರವರುಗಳು ವಿವಿಧ ಸಲಹೆ ಸೂಚನೆಯನ್ನು ನೀಡಿದರು.


ಸಂಘದ ನಿರ್ದೇಶಕರಾದ ಗಣೇಶ್ ನಿಡ್ವಣ್ಣಾಯ ಯನ್ ಕುಮಾರಮಂಗಲ, ಚೆನ್ನಪ್ಪ ಗೌಡ ನೂಜಿ, ಅಶ್ವಿನ್ ಎಲ್.ಶೆಟ್ಟಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಂ.ಎಸ್ ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮಿ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ ಬನಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ಸುಪರ್ ವೈಸರ್ ವಸಂತ ಎಸ್‌ರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪಿ.ಡಿ.ಗಂಗಾಧರ್ ರೈ ದೇವಸ್ಯ, ಎನ್.ಸುಂದರ ರೈ, ಸುಬ್ಬಣ್ಣ ರೈ ಖಂಡಿಗ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಬೆನಸ ರಬ್ಬರ್ ಸೊಸೈಟಿ ಅಧ್ಯಕ್ಷ ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಕಾರ್‍ಯದರ್ಶಿ ಅಚ್ಚುತ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ನ್ಯಾಯವಾದಿ ಬೈತಡ್ಕ ಶೀನಪ್ಪ ಗೌಡ, ಸಂಘದ ಕಾನೂನು ಸಲಹೆಗಾರರಾದ ಮಹೇಶ್ ಕೆ.ಸವಣೂರು, ನ್ಯಾಯವಾದಿ ಅವಿನಾಶ್ ಬೈತಡ್ಕ, ಸವಣೂರು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ, ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಂಬಿಲ, ಸದಸ್ಯರಾದ ತೀರ್ಥರಾಮ್ ಕೆಡೆಂಜಿ, ಅಬ್ದುಲ್ ರಜಾಕ್ ಕೆನರಾ, ರಫೀಕ್ ಮಾಂತೂರು, ಸತೀಶ್ ಅಂಗಡಿಮೂಲೆ, ರಾಜೀವಿ ವಿ. ಶೆಟ್ಟಿ ಕೆಡೆಂಜಿ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಬೆಳಂದೂರು ಗ್ರಾ.ಪಂ, ಸದಸ್ಯರಾದ ತೇಜಾಕ್ಷಿ ಕೊಡಂಗೆ, ಮೋಹನ್ ಅಗಳಿ, ಮಾಜಿ ಸದಸ್ಯ ಸಂಪತ್ ಕುಮಾರ್ ರೈ ಪಾತಾಜೆ, ಯಶವಂತ ಕಳುವಾಜೆ, ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಶಿವಪ್ರಸಾದ್ ಶೆಟ್ಟಿ ಕಿನಾತ, ಶಿವರಾಮ ಗೌಡ ಮೆದು, ನಾಗೇಶ್ ಕೆಡೆಂಜಿ, ವೆಂಕಟೇಶ್ ಭಟ್ ಕೊಯಕುಡೆ, ಮೋಹನ್ ರೈ ಕೆರೆಕೋಡಿ, ಬೆಳಿಯಪ್ಪ ಗೌಡ ಚೌಕಿಮಠ, ಸಹಕಾರ ಸಂಘದ ಮಾಜಿ ನಿರ್ದೇಶಕರುಗಳಾದ ನಿರ್ಮಲ ಕೇಶವ ಗೌಡ ಅಮೈ, ತನಿಯಪ್ಪ ನಾಯ್ಕ್ ಕಾರ್ಲಾಡಿ, ಸೋಮನಾಥ ಕನ್ಯಾಮಂಗಲ, ಮಾಜಿ ಉಪಕಾರ್‍ಯನಿರ್ವಾಣಾಧಿಕಾರಿ ಕುಸುಮ ಪಿ.ಶೆಟ್ಟಿ ಕೆರೆಕೋಡಿ, ಬೆಳಂದೂರು ಶಾಖೆಯ ಮಾಜಿ ವ್ಯವಸ್ಥಾಪಕರಾದ ಬೇಬಿ ಜೆ.ರೈ, ಈಶ್ವರ ಗೌಡ ಕಾಯರ್ಗ,ಕುಶಾಲಪ್ಪ ಗೌಡ ಇಡ್ಯಾಡಿ, ಪ್ರಮೋದ್ ಕುಮಾರ್ ರೈ ನೂಜಾಜೆ, ರಾಮಕೃಷ್ಣ ಪ್ರಭು, ಮೇದಪ್ಪ ಗೌಡ ಕೊವೆತ್ತೋಡಿ, ಹರೀಶ್ ಕೆರೆನಾರು, ರಾಮ್ ಭಟ್ ಕುಕ್ಕುಜೆ ಸಹಿತ ಸಾವಿರಾರು ಮಂದಿ ಸದಸ್ಯರು ಉಪಸ್ಥಿತರಿದ್ದರು.


ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ ಎ, ಲೇಖಲತಾ, ಮನೋಜ್, ಪೂವಪ್ಪ, ಗಣೇಶ್, ಪ್ರಕಾಶ್ ಮೊಯ್ಲಿ, ಪವಿತ್ರಾ ಕೆ, ಕಾರ್ತಿಕ್, ದಯಾನಂದ ಮೆದು, ಪ್ರಕಾಶ್ ಮಾಲೆತ್ತಾರು, ಜಗದೀಶ್, ಪ್ರಕಾಶ್ ಎ, ಮಾಸ್ ಸಂಸ್ಥೆಯ ಮೇನೇಜರ್ ಯತೀಶ್, ಪಿಗ್ಮಿ ಸಂಗ್ರಹಕರಾದ ಸದಾನಂದ ಆಳ್ವ ಕಲಾಯಿ, ವಿಶ್ವನಾಥ ಗೌಡ ಸಹಕರಿಸಿದರು
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ಸಂಘದ ಉಪ ಕಾರ್‍ಯನಿರ್ವಾಹಣಾಧಿಕಾರಿ ಜಲಜಾ ಎಚ್ ರೈರವರು ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು. ಜಲಜಾ ಎಚ್ ರೈ, ಪ್ರೇಮ, ಪವಿತ್ರ ಹಾಗೂ ಲೇಖಲತಾರವರು ಪ್ರಾರ್ಥನೆಗೈದರು.

ಅಚ್ಚುಕಟ್ಟಾದ ವ್ಯವಸ್ಥೆ:
ಬೆಳಿಗ್ಗೆ 9.45 ಕ್ಕೆ ಆರಂಭಗೊಂಡ ಮಹಾಸಭೆಯು ಮಧ್ಯಾಹ್ನ 12.15 ಕ್ಕೆ ಮುಕ್ತಾಯಗೊಂಡಿತು. ಬೆಳಿಗ್ಗೆ ಉಪಾಹಾರದಲ್ಲಿ ಸೆಟ್ ದೋಸೆ, ಕ್ಷೀರ, ಚಾ ಮತ್ತು ಕಾಫಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮತ್ತು ಸದಸ್ಯರುಗಳಿಗೆ ಸ್ಥಳದಲ್ಲಿ ಡಿವಿಡೆಂಡ್ ಹಣವನ್ನು ನೀಡುವ ವ್ಯವಸ್ಥೆ ಮಾಡಿದ್ದು ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದರು.


ಸಂತಾಪ: ನಿಧನ ಹೊಂದಿದ ಸಂಘದ ಸದಸ್ಯರಿಗೆ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಸಂತಾಪ ಸೂಚಿಸಲಾಯಿತು.

ಶೇಕಡಾ 99.22 ಸಾಲ ವಸೂಲಾತಿ ಸಾಧನೆ
ಸಂಘವು 22ನೇ ಬಾರಿಗೆ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ, ಶೇಕಡಾ 99.22 ಸಾಲ ವಸೂಲಾತಿ ಸಾಧನೆ ಮಾಡಲಾಗಿದೆ. ವರದಿ ವರ್ಷದಲ್ಲಿ 3,451 ಸದಸ್ಯರಿದ್ದು, ರೂ 5.52 ಕೋಟಿ ಪಾಲು ಬಂಡವಾಳ ಮತ್ತು ರೂ. 36.39 ಕೋಟಿ ಠೇವಣಿ ಸಂಗ್ರಹಿಸಲಾಗಿದೆ
ತಾರಾನಾಥ ಕಾಯರ್ಗ, ಅಧ್ಯಕ್ಷರು

ಅಭಾರಿಯಾಗಿದ್ದೇವೆ
ಸಂಘದ ಅಭಿವೃದ್ಧಿಯ ದೃಷ್ಟಿಯಲ್ಲಿ ಸಹಕಾರವನ್ನು ನೀಡುತ್ತಿರುವ ಸಂಘದ ವ್ಯಾಪ್ತಿಯ ಎಲ್ಲಾ ಸದಸ್ಯರುಗಳಿಗೆ ಸಂಘವು ಅಭಾರಿಯಾಗಿದೆ ಮತ್ತು ಸಂಘದ ಹಿತದೃಷ್ಟಿಯಿಂದ ಎಲ್ಲರ ಸಹಕಾರ ಪ್ರೋತ್ಸಾಹ ಸದಾ ಅಗತ್ಯ.
ಚೇತನ್ ಕುಮಾರ್ ಕೋಡಿಬೈಲು, ಉಪಾಧ್ಯಕ್ಷರು

ಸಂಘದಲ್ಲಿ ಹವಾಮಾನ ಆಧಾರಿತ ಬೆಳೆವಿಮೆಗೆ ಭಾರಿ ಬೆಂಬಲ:
24-25 ನೇ ಸಾಲಿನಲ್ಲಿ 1690 ಮಂದಿ ರೈತ ಸದಸ್ಯರು 52.11 ಲಕ್ಷ ರೂಪಾಯಿ ಬೆಲೆ ವಿಮಾಗೆ ಪ್ರೀಮಿಯಂ ಪಾವತಿಸಿದ್ದಾರೆ.
ಚಂದ್ರಶೇಖರ್ ಪಿ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ

LEAVE A REPLY

Please enter your comment!
Please enter your name here