*ಜೀವ ಉಳಿಸುವ ಪಾತ್ರದಲ್ಲಿ ಬಿಜೆಪಿ ನಿರಂತರ – ದಯಾನಂದ ಶೆಟ್ಟಿ
*ಮೋದಿ, ಉಪಾಧ್ಯಾಯ, ಗಾಂಧಿ ರಾಷ್ಟ್ರಕ್ಕೆ ಉತ್ತಮ ಸಂದೇಶ ಕೊಟ್ಟವರು – ಸಂಜೀವ ಮಠಂದೂರು
ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚಣೆಯ ಮತ್ತು ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ಯುವ ಮೋರ್ಚಾದಿಂದ ರಕ್ತದಾನ ಶಿಬಿರವು ಸೆ.19ರಂದು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನಲ್ಲಿ ನಡೆಯಿತು.
ಜೀವ ಉಳಿಸುವ ಪಾತ್ರದಲ್ಲಿ ಬಿಜೆಪಿ ನಿರಂತರ:
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು ಮಾತನಾಡಿ ರಕ್ತದಾನ ಶ್ರೇಷ್ಠದಾನ. ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಬಿಜೆಪಿಯ ಕಾರ್ಯಕರ್ತರ ಪಾತ್ರ ಬಹಳ ಅಮೂಲ್ಯವಾಗಿದೆ. ನರೇಂದ್ರ ಮೋದಿಯವರ ಜನ್ಮದಿನಾಚರಣೆಯಲ್ಲಿ ಈ ಕಾರ್ಯವನ್ನು ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದೆ ಎಂದರು.
ಮೋದಿ, ಉಪಾಧ್ಯಾಯ, ಗಾಂಧಿ ರಾಷ್ಟ್ರಕ್ಕೆ ಉತ್ತಮ ಸಂದೇಶ ಕೊಟ್ಟವರು:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನರೇಂದ್ರ ಮೋದಿ, ಭಾರತೀಯ ಜನಸಂಘದ ಸ್ಥಾಪಕರಲ್ಲೊಬ್ಬರಾದ ದೀನ್‌ದಯಾಳ್ ಉಪಾಧ್ಯಾಯ, ಮಹಾತ್ಮಗಾಂಧೀಜಿಯವರು ರಾಷ್ಟ್ರಕ್ಕಾಗಿ ಉತ್ತಮ ಸಂದೇಶ ಕೊಟ್ಟಿರುವವರು. ಈ ಮೂವರು ಮಹಾನುಭಾವರ ಹೆಸರಿನಲ್ಲಿ ಬಿಜೆಪಿ 15 ದಿವಸ ನಿರಂತರವಾಗಿ ಸೇವಾ ಪಾಕ್ಷಿಕ ಆಚರಣೆಯನ್ನು ಮಾಡುತ್ತಾ ಬಿಜೆಪಿ ಕಾರ್ಯಕರ್ತರು ದೇಶದಲ್ಲಿ ಶೋಷಿತ ಪೀಡಿತ, ಅಮಾಯಕ, ಅಸಾಯಕ, ದಲಿತ ಜನಾಂಗದ ಏಳಿಗೆಗಾಗಿ ಪ್ರತಿ ದಿನದ ಸಮಯವನ್ನು ಮೀಸಲಿಡಬೇಕಾಗಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ಯುವ ಮೋರ್ಚಾ ರಕ್ತದಾನ ಶಿಬಿರ ಹಮ್ಮಿಕೊಂಡಿದೆ ಎಂದರು.
ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಅನಿಲ್ ತೆಂಕಿಲ, ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸೇವಾ ಪಾಕ್ಷಿಕದ ಜಿಲ್ಲಾ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಭಟ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಪುತ್ತೂರು ಗ್ರಾಮಾಂತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಶಿಶಿರ್ ಪೆರುವೋಡಿ, ಪ್ರಧಾನ ಕಾರ್ಯದರ್ಶಿಗಳಾದ ಆದೀಶ್ ಶೆಟ್ಟಿ, ಅಜಿತ್ ಮಾಣಿಲ, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ನಿತೀಶ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿಗಳಾದ ದಯಾರಾಜ್, ಚಿಂತನ್, ಹಿಂದುಳಿದ ಮೋರ್ಚಾದ ವಿಕ್ರಮ್ ಪರ್ಲಡ್ಕ, ಬಿಜೆಇ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಯತೀಂದ್ರ ಕೊಚ್ಚಿ, ರತನ್ ರೈ, ಪುನೀತ್ ಮಾಡತ್ತಾರು, ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ಕಾರ್ಯಾಲಯ ಕಾರ್ಯದರ್ಶಿ ಗೋವರ್ಧನ, ನಾಗೇಶ್ ಟಿ.ಎಸ್, ಜಯಶ್ರೀ ಎಸ್ ಶೆಟ್ಟಿ, ಗೌರಿ ಬನ್ನೂರು, ಕಿರಣ್‌ಶಂಕರ್ ಮಲ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಆರಂಭದಲ್ಲಿ ಯುವಮೋರ್ಚಾ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಅಜಿತ್ ಮಾಣಿಲ ಮತ್ತು ಉಪಾಧ್ಯಕ್ಷ ವಿನೋದ್‌ರಾಜ್‌ರವರು ರಕ್ತದಾನ ಮಾಡಿದರು.