ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟದ ಮಹಾಸಭೆ

0

ರೂ. 8.28 ಕೋಟಿ ನಿವ್ವಳ ಲಾಭ, ರೂ. 1108.89 ಕೋಟಿ ವಹಿವಾಟು, ಶೇ.12 ಡಿವಿಡೆಂಡ್

ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕುಲಶೇಖರ ಕೊರ್ಡೆಲ್ ಹಾಲ್‌ನಲ್ಲಿ ನಡೆಯಿತು. ಒಕ್ಕೂಟವು 2023-24ನೇ ಸಾಲಿನಲ್ಲಿ ಒಟ್ಟು ರೂ. 1108.89 ಕೋಟಿಯ ವಹಿವಾಟು ಮಾಡಿ ಹಿಂದಿನ ಸಾಲಿಗೆ ಹೋಲಿಕೆ ಮಾಡಿದಾಗ ಶೇ. 6.13ರಷ್ಟು ಪ್ರಗತಿ ಸಾಧಿಸಲಾಗಿದೆ. ವರದಿ ಸಾಲಿನಲ್ಲಿ ರೂ. 8.28 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ.25ರಷ್ಟು ಬೋನಸ್ಸನ್ನು ಸಂಘಗಳು ಒಕ್ಕೂಟಕ್ಕೆ ವರ್ಷದಲ್ಲಿ ನೀಡಿದ ಹಾಲಿನ ಪ್ರಮಾಣಕ್ಕನುಗುಣವಾಗಿ ನೀಡಲು ಮತ್ತು ಶೇ.12 ರಂತೆ ಡಿವಿಡೆಂಡ್ ನೀಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಹಕಾರ ಸಂಘಗಳಿಗೆ ಬಹುಮಾನ:
ಉತ್ತಮ ಸಂಘ:
ಅತ್ಯುತ್ತಮ ಸಾಧನೆ ಮಾಡಿದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬೆಳ್ತಂಗಡಿ ತಾಲೂಕಿನ ನೆರಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಒಕ್ಕೂಟದ ಅತ್ಯುತ್ತಮ ಸಂಘ, ದ.ಕ.ಜಿಲ್ಲೆಯ ಕಡಂದಲೆ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಉಡುಪಿ ಜಿಲ್ಲೆಯ ಹಾಳೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜಿಲ್ಲಾವಾರು ಉತ್ತಮ ಸಂಘ, ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಮತ್ತು ಉಡುಪಿ ಜಿಲ್ಲೆಯ ಆರೂರು ಮಹಿಳಾ ಸಹಕಾರ ಸಂಘಕ್ಕೆ ಒಕ್ಕೂಟದ ಉತ್ತಮ ಮಹಿಳಾ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾವಾರು ಉತ್ತಮ ಬಿಎಂಸಿ:
ಪುತ್ತೂರು ತಾಲೂಕಿನ ಹಿರೇಬಂಡಾಡಿ ಮತ್ತು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜಿಲ್ಲಾವಾರು ಉತ್ತಮ ಬಿಎಂಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಲೂಕುವಾರು ಉತ್ತಮ ಸಂಘಗಳು:
ಮಂಗಳೂರು ತಾಲೂಕಿನ ಅತಿಕಾರಿ ಬೆಟ್ಟು ಮತ್ತು ಇರುವೈಲು, ಬಂಟ್ವಾಳ ತಾಲೂಕಿನ ವಗ್ಗ ಮತ್ತು ಇಡ್ಕಿದು, ಪುತ್ತೂರು ತಾಲೂಕಿನ ಪಾಣಾಜೆ ಮತ್ತು ಮುಂಡೂರು, ಬೆಳ್ತಂಗಡಿ ತಾಲೂಕಿನ ಗುಂಡೂರಿ ಮತ್ತು ಪಡಂಗಡಿ, ಸುಳ್ಯ ತಾಲೂಕಿನ ಎಡಮಂಗಲ ಮತ್ತು ಯೇನೆಕಲ್ಲು, ಉಡುಪಿ ತಾಲೂಕಿನ ತೆಂಕ ಎರ್ಮಾಳು ಮತ್ತು ಇನ್ನಂಜೆ, ಕುಂದಾಪುರ ತಾಲೂಕಿನ ಸಿದ್ದಾಪುರ ಮತ್ತು ಹಾಲಾಡಿ, ಕಾರ್ಕಳ ತಾಲೂಕಿನ ಕಾಂತಾವರ ಮತ್ತು ಶಿವಪುರ ಸಂಘಗಳಿಗೆ ತಾಲೂಕುವಾರು ಉತ್ತಮ ಸಂಘ ಪ್ರಶಸ್ತಿ ನೀಡಲಾಯಿತು.

ಒಕ್ಕೂಟದ ಉತ್ತಮ ಹೈನುಗಾರರು:
ಕುಂದಾಪುರ ತಾಲೂಕಿನ ಮೇಕೋಡು ಹಾಲು ಉತ್ಪಾದಕರ ಸಂಘದ ಪ್ರಕಾಶ್ಚಂದ್ರ ಶೆಟ್ಟಿ, ಮಂಗಳೂರು ತಾಲೂಕಿನ ಪಡುಮರ್ನಾಡು ಹಾಲು ಉತ್ಪಾದಕರ ಸಂಘದ ಲಿಮಲ ಲಿನೆಟ್ ಗೋನ್ಸಾಲಿಸ್ ಹಾಗೂ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಹಾಲು ಉತ್ಪಾದಕರ ಸಹಕಾರ ಸಂಘದ ಸರಿತಾ ಐಡಾ ಫೆರ್ನಾಂಡಿಸ್‌ರವರಿಗೆ ಒಕ್ಕೂಟದ ಉತ್ತಮ ಹೈನುಗಾರ ಪ್ರಶಸ್ತಿ ನೀಡಲಾಯಿತು.

2023-24ನೇ ಸಾಲಿನಲ್ಲಿ SSLC ಹಾಗೂ PUC ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಹಸಿರು ಮೇವು, ಉತ್ತಮ ಹೈನುಗಾರರು, ಉತ್ತಮಗುಣ ಮಟ್ಟದ ಸಂಘಗಳು ಹಾಗೂ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರನ್ನು ಗೌರವಿಸಲಾಯಿತು.


ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ನಿರ್ದೇಶಕರುಗಳಾದ ರವಿರಾಜ ಹೆಗ್ಡೆ, ಕಾಪು ದಿವಾಕರ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್ ಕೆ, ನರಸಿಂಹ ಕಾಮತ್, ಬಿ. ಸುಧಾಕರ ರೈ, ಎಮ್. ಸುಧಾಕರ ಶೆಟ್ಟಿ, ಸುಭದ್ರಾ ರಾವ್, ಸವಿತ ಎನ್. ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್ ಹಾಗೂ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಉಪ ನಿರ್ದೇಶಕರು(ಪ.ಸಂ.) ಡಾ. ಅರುಣ್‌ಕುಮಾರ್ ಶೆಟ್ಟಿ, ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ. ಉಪಸ್ಥಿತರಿದ್ದರು. ಸದಸ್ಯ ಸಂಘಗಳ ಪ್ರತಿನಿಧಿಗಳಿಗೆ ಒಕ್ಕೂಟದ ಉಪಾಧ್ಯಕ್ಷ ಎಸ್. ಬಿ. ಜಯರಾಮ ರೈ ಬಳ್ಳಜ್ಜ ಸ್ವಾಗತಿಸಿ, ನಿರ್ದೇಶಕಿ ಸ್ಮಿತಾ ಆರ್. ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here