ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ರಜತ ಸ್ಮರಣೆಯ ಕಟ್ಟಡ ಉದ್ಘಾಟನೆ

0

ಇತಿಹಾಸದ ಪುಟದಲ್ಲಿ ಬರೆದಿಡುವ ಕೆಲಸವಿದು: ಅಶೋಕ್ ಕುಮಾರ್ ರೈ

ಪುತ್ತೂರು:ಸಂಘಟನೆಗಳಲ್ಲಿ ಪ್ರಮುಖ ಪಾತ್ರವಹಿಸಿ ಕೆಲಸ ಮಾಡುವವರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ. ಮಹಾದೇವಿ ಯುವಕ ಮಂಡಲದ ಸದಸ್ಯರು ಇತಿಹಾಸ ಪುಟದಲ್ಲಿ ಬರೆದಿಡುವಂತಹ ಕೆಲಸ ಮಾಡಿದ್ದಾರೆ. ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿರಲಿ. ಸಂಘಟನೆ ಒಳ್ಳೆಯ ರೀತಿಯಲ್ಲಿ ಬೆಳೆಯಲಿ. ಸಮಾಜದಲ್ಲಿರುವವರ ಬಡವರ ಕಣ್ಣೀರೊರೆಸುವ ಕೆಲಸ ಮಾಡಿ.ದುಡ್ಡಿನಿಂದ ಮಾತ್ರವಲ್ಲ ಸಂಘಟನೆಯಿಂದಲೂ ಸಹಕಾರ ಮಾಡಬಹುದು ಎಂದು ಪುತ್ತೂರು‌ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ಹೇಳಿದರು.

ಚಿತ್ರ: ಮಹಾದೇವಿ ಕಬಕ

ಅವರು ಸೆ.29ರಂದು ಕಬಕ ಶ್ರೀ ಮಹಾದೇವಿ ಯುವಕ ಮಂಡಲ(ರಿ.) ಕಬಕ ಇದರ ಬೆಳ್ಳಿಹಬ್ಬದ ಕಟ್ಟಡವನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿರುವವರಿಗೆ ಸಹಕಾರ ನೀಡುವ ಕೆಲಸ ನಿರಂತರವಾಗಿ ಮಾಡಬೇಕು.ವಿದ್ಯೆ, ಸಂಸ್ಕಾರ, ಕೆಲಸ ನೀಡಿದಾಗ ಸಮಾಜದ ಬದಲಾವಣೆ ಸಾಧ್ಯ. ಪ್ರತೀ ವರ್ಷ ಸಮಾಜದಲ್ಲಿರುವ ಒಂದೊಂದು ಬಡ ಕುಟುಂಬದ ಕಣ್ಣೀರೊರೆಸುವ ಕೆಲಸ ಮಾಡಬೇಕು. ಪ್ರತಿಯೊಂದಕ್ಕೂ ಸರಕಾರವನ್ನು ಕಾಯಬಾರದು. ನಿಮ್ಮ ಸಮಾಜ ಸೇವೆಯಲ್ಲಿ ನಾನು ನಿಮ್ಮೊಂದಿಗಿದ್ದೇನೆ. ಸರಕಾರದಿಂದ ನಿಮಗೆ‌ ಸಿಗುವ ಸವಲತ್ತುಗಳನ್ನು ತೆಗಿಸಿಕೊಡುವ ಕೆಲಸ ಮಾಡುತ್ತೇನೆ. ನಿಮ್ಮ ಸಮಾಜ ಸೇವೆ ಹರಿಯುವ ನೀರಾಗಿ ನಿರಂತರ ಹರಿಯಲಿ ಎಂದರು.

ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ‌ ಅಧ್ಯಕ್ಷರಾದ ಮುರಳೀಕೃಷ್ಣ ಹಸಂತಡ್ಕರವರು ಮಾತನಾಡಿ ಇದೊಂದು ಜಿಲ್ಲೆಗೆ ಮಾದರಿ ಸಂಘಟನೆಯಾಗಿದೆ.
ಸಂಘಟನೆ ಹುಟ್ಟು ಸುಲಭ ಆದರೆ ಬೆಳವಣಿಗೆ ಬಲು‌ಕಷ್ಟ. ಹೆಸರು ಪಡೆದಿರುವ ಸಂಘಟನೆ ಇದಾಗಿದೆ. ಸಾಧನೆ, ಕೆಲಸದ ಮೂಲಕ ಹೆಸರುವಾಸಿಯಾಗಿರುವ ನಂಬಿಕೆಯ ಸಂಘಟನೆ ಇದಾಗಿದೆ. ಒಂದೇ ಮನಸ್ಸಿನ ಯುವಕರು ಸೇರಿಕೊಂಡು ಕಟ್ಟಿದ ಪರಿಪೂರ್ಣ ಸಂಘಟನೆ ಇದಾಗಿದೆ. ಕ್ರೀಡೆಯಲ್ಲಿ, ಸಾಮಾಜಿಕ ಸೇವೆ, ಧಾರ್ಮಿಕ ಕ್ಷೇತ್ರ, ಎಲ್ಲಾ ಕಡೆಯಲ್ಲ ಸಂಘದ ಮುಖೇನ ಕೆಲಸ ಕಾರ್ಯ ನಡೆಯುತ್ತಿದೆ. ಸಂಘಟನೆಯ ಯವಕರು ಸಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯರಾದವರು. ಇಪ್ಪತೈದು‌ ವರುಷದ ಹಿಂದಿನ ಸಂಕಲ್ಪ ಇಂದಿಲ್ಲಿ ಸಾಕಾರವಾಗಿದೆ. ಈಗ ನಿರ್ಮಾಣವಾಗಿರುವ ಎರಡು ಅಂತಸ್ಥಿನ ಕಟ್ಟಡ ಅವರ ಹಿರಿಮೆಯ ಗರಿ ಆಗಿದೆ‌.
ಇಲ್ಲಿನ ಯುವಕರ ಸಾಧನೆ ಮೆಚ್ಚುವಂತಹದ್ದು. ದೇಶದ ಬದಲಾವಣೆಯ ಜೊತೆಗೆ ನಾವೂ ಬದಲಾಗಬೇಕು. ಮುಂದಿನ ಪೀಳಿಗೆ ಉಳಿವಿಗೆ ಪರಿಸರ ಉಳಿಸುವ ಕೆಲಸ ಮಾಡೋಣ. ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದ ಬದಲಾವಣೆ ಸಾಧ್ಯ. ರಾಜ್ಯದಲ್ಲಿ ಮಾದರಿ ಯುವಕ ಮಂಡಲ ಇದಾಗಲಿ ಎಂದರು.

ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ನಿಕಟ ಪೂರ್ವ ಅಧ್ಯಕ್ಷರಾದ ಸಾಜಾ ರಾಧಾಕೃಷ್ಣ ಆಳ್ವರವರು ಮಾತನಾಡಿ ಹತ್ತೂರು‌ ಮೆಚ್ಚುವ ಕೆಲಸ ಯುವಕ ಮಂಡಲದ ಮೂಲಕ ನಡೆದಿದೆ ಎನ್ನಲು ಸಂತಸವಾಗುತ್ತಿದೆ. ಇದೊಂದು ಸಂಸ್ಕಾರ ನೀಡುವ ಕೇಂದ್ರವಾಗಲಿ. ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವ ಕೆಲಸ ಈ ಸಂಘಟನೆಯಿಂದ ನಡೆಯಲಿ. ಮಾದರಿ ಸಂಘಟನೆ ಇದಾಗಿದೆ. ಸಮಾಜದ ಕಟ್ಟಕಡೇಯ ವ್ಯಕ್ತಿಗೆ ಸಹಕಾರ ನೀಡುವ ಕೆಲಸ ನಿಮ್ಮಿಂದ ಆಗಲಿ. ಮತ್ತಷ್ಟು ಉನ್ನತ ಮಟ್ಟಕ್ಕೆ ಏರುವಂತಾಗಲಿ ಎಂದರು.

ಸ್ಥಾಪಕಾಧ್ಯಕ್ಷರಾದ ಸಂಜೀವ ಮೊಯಿಲಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿವಸ ಇದಾಗಿದೆ. ಸಮಾಜದಲ್ಲಿ ವಿದ್ಯೆಗೆ ಕೊರತೆಯಿಲ್ಲ.‌ ಹಣಕ್ಕೆ ಕೊರತೆಯಿಲ್ಲ‌. ಸಂಸ್ಕಾರದ ಕೊರತೆ ಎಲ್ಲರಲ್ಲೂ ಕಾಡುತ್ತಿದೆ. ನಶಿಸುತ್ತಿರುವ ಸಂಸ್ಕಾರವನ್ನು ಪುನರ್ ಸ್ಥಾಪಿಸುವ ಕೆಲಸ ಆಗಬೇಕಿದೆ. ನಮ್ಮ ಸಂಸ್ಕೃರಿಗೆ ಒತ್ತು ನೀಡಯವ ಕೆಲಸವಾಗಲಿ. ಹಿರಿಯರ ಆದರ್ಶದೊಂದಿಗೆ ಬಾಳೋಣ. ನಮ್ಮ ಸಂಸ್ಕಾರ ಸಂಸ್ಕೃರಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು.ನಮ್ಮಲ್ಲಿ ಸಾಮಾಜಿಕ ಸಾಮರಸ್ಯ ಮೂಡಬೇಕು. ನಮ್ಮಲ್ಲಿರುವ ಕೀಳರಿಮೆ ದೂರವಾಗಬೇಕು ಎಂದರು.

ಶ್ರೀ ಮಹಾದೇವಿ ಯುವಕ ಮಂಡಲದ ಅಧ್ಯಕ್ಷರಾದ ಯತೀಶ್ ಅಡ್ಯಾಲು, ಕಾರ್ಯದರ್ಶಿ ಯತೀಶ್ ಪದ್ನಡ್ಕ, ಶ್ರೀ ಮಹಾದೇವಿ ಮಹಿಳಾ ಮಂಡಲದ ಅಧ್ಯಕ್ಷರಾದ ಭಾರತಿ, ಕಾರ್ಯದರ್ಶಿ ರೇಷ್ಮಾ ನೆಕ್ಕರೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಯುವಕಮಂಡಲದ ಸ್ಥಾಪಕಾಧ್ಯಕ್ಷರಾದ ಸಂಜೀವ ಮೊಯಿಲಿರವರನ್ನು ಸನ್ಮಾನಿಸಲಾಯಿತು.

ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷರಾದ ವಿ. ಚಂದ್ರಶೇಖರ ನಾಯ್ಕ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಭೂಶಿತ ಅಡ್ಯಾಲು, ವೈಷ್ಣವಿ, ಸಿಂದೂ ಪ್ರಾರ್ಥಿಸಿದರು. ಶ್ರೀ ಮಹಾದೇವಿ ಯುವಕ ಮಂಡಲದ ಬೆಳ್ಳಿ ಹಬ್ಬ ಸಮಿತಿ ಕಾರ್ಯದರ್ಶಿ ಜಯರಾಮ ನೆಕ್ಕರೆ ವಂದಿಸಿದರು. ಯುವಕ ಮಂಡಲದ ಕೋಶಾಧಿಕಾರಿ ಸಂಜಯ್ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here