ಅ.6: ಪಡುಮಲೆ ಎರುಕೊಟ್ಯ ವೀರ ಪುರುಷ ಶ್ರೀ ಕೋಟಿ ಚೆನ್ನಯರ ಜನ್ಮಸ್ಥಳ ಮತ್ತು ಮೂಲಸ್ಥಾನದಲ್ಲಿ ದೀಪೋತ್ಸವ

0

ಬಡಗನ್ನೂರು: ಪಡುಮಲೆ ಶ್ರೀ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ವತಿಯಿಂದ ಪಡುಮಲೆ ಎರುಕೊಟ್ಯ ವೀರಪುರುಷ ಶ್ರೀ ಕೋಟಿ ಚೆನ್ನಯರ ಜನ್ಮಸ್ಥಳ ಮತ್ತು ಮೂಲಸ್ಥಾನದಲ್ಲಿ ಮಹಾ ಮಾತೆ ಸಾಕ್ಷಿಯಾತ್ ದೇವಿ ಸ್ವರೂಪಿಯಾದ ಶ್ರೀ ದೇಯಿಬೈದೇತಿ ನವರಾತ್ರಿ ಲಲಿತಾ ಪಂಚಮಿ ದಿನದಂದು ವಿಶೇಷ ದೀಪೋತ್ಸವ ಹಾಗೂ ನವರಾತ್ರಿ ಪೂಜಾ ಕಾರ್ಯಕ್ರಮ ಜಗದ್ಗುರು ಡಾ! ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವಾರ್ಯ ಮಹಾಸ್ವಾಮೀಜಿ, ಶ್ರೀ ದಿಗಂಬರ ಜೈನ ಮಠ ,ಜೈನಕಾಸಿ ಸ್ವಸ್ತಿಶ್ರೀ ಭಟ್ಟಾರಕ ನಗರ, ಮೂಡಬಿದಿರೆ ದಿವ್ಯ ಸಾನಿಧ್ಯದಿಂದ ಅ.6ರಂದು ಸಂಜೆ ಗಂ 6ರಿಂದ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಳದಲ್ಲಿ ನಡೆಯಲಿದೆ.


ಬಳಿಕ ನಾಗ ಬಿರ್ಮೆರ ಗುಡಿ, ನಾಗ ದೇವರು ಹಾಗೂ ರಕ್ತೇಶ್ವರಿ ಕಟ್ಟೆ ಸುತ್ತಲೂ ದೀಪ ಪ್ರಜ್ವಲನೆ ನಡೆದು ಬಳಿಕ ನಾಗ ಬಿರ್ಮೆರಿಗೆ, ನಾಗ ದೇವರು ರಕ್ತೇಶ್ವರಿ ಹಾಗೂ ಮಾತೆ ದೇಯಿ ಬೈದೇತಿ ಸಾನಿಧ್ಯದಲ್ಲಿ  ವಿಶೇಷ ಪೂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿ ಸ್ವರೂಪಿಯಾದ ಶ್ರೀ ದೇಯಿಬೈದೇತಿ ಕೃಪೆಗೆ ಪಾತ್ರರಾಗುವಂತೆ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here