ನನಗೆ ಪಕ್ಷ ಸಂಘಟನೆಯಲ್ಲಿ ಇಚ್ಚೆ ಹೊರತು ರಾಜಕೀಯ, ಅಧಿಕಾರದಲ್ಲಿಲ್ಲ- ಕಟೀಲ್

0

ಪುತ್ತೂರು:ಪಕ್ಷ ನನಗೆ ಎಲ್ಲಾ ಅಧಿಕಾರ ನೀಡಿದೆ. ಇನ್ನು ಉಳಿದ ದಿನಗಳಲ್ಲಿ ಪಕ್ಷವನ್ನು ಅತ್ಯುತ್ತಮವಾಗಿ ಸಂಘಟನೆ ಮಾಡುವುದಾಗಿದೆ.ಆ ಕೆಲಸದಲ್ಲಿ ನನಗೆ ಇಚ್ಚೆ ಇದೆ ಹೊರತು ಯಾವುದೇ ರಾಜಕೀಯ, ಅಧಿಕಾರದಲ್ಲಿ ಇಲ್ಲ ಎಂದು ಮಾಜಿ ಸಂಸದ,ಕರ್ನಾಟಕ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ನಾನೊಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ. ನಮ್ಮ ಅಪೇಕ್ಷೆ ಇರುವುದು ‘ಪರಮ ವೈಭವಂ ನೇತುಮೇತತ್ ಸ್ವರಾಷ್ಟ್ರಂ’ ಮತ್ತು ಪಕ್ಷವು ಸರ್ವವ್ಯಾಪ್ತಿ, ಸರ್ವಸ್ಪರ್ಶಿ.ಹಾಗಾಗಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ.ಪಕ್ಷ ನನಗೆ ಅತ್ಯುನ್ನತವಾದ ಜವಾಬ್ದಾರಿ ಕೊಟ್ಟಿದೆ.ಸಾಮಾನ್ಯ ಹಳ್ಳಿಯಿಂದ ಹೋದ ನಾನು ಮೂರು ಬಾರಿ ಲೋಕಸಭಾ ಸದಸ್ಯನಾಗಿದ್ದೇನೆ. ಪಕ್ಷದ ಆಸೆಯಿಂದ ಬಂದ ನನಗೆ ಪಕ್ಷ ರಾಜ್ಯದ ಅಧ್ಯಕ್ಷನ ಹುದ್ದೆ ನೀಡಿದೆ.ಹಾಗಾಗಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ.ಇನ್ನು ಉಳಿದ ದಿನಗಳಲ್ಲಿ ಪಕ್ಷವನ್ನು ಅತ್ಯುತ್ತಮವಾಗಿ ಸಂಘಟನೆ ಮಾಡುವ ಕೆಲಸದಲ್ಲಿ ಇಚ್ಚೆ ಇದೆ ಹೊರತು ಯಾವುದೇ ರಾಜಕೀಯ, ಅಽಕಾರದಲ್ಲಿ ಇಲ್ಲ ಎಂದು,ಪುತ್ತೂರಿನಲ್ಲಿ ಪತ್ರಕರ್ತರ ಪ್ರಶ್ನೆಗೆ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದರು.


ಈ ಹಿಂದೆ ಮೂರು ಬಾರಿ ದ.ಕ.ಸಂಸದರಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ದೊರೆಯಲಿದೆ.ಅವರ ಹೆಸರು ಕೋರ್ ಕಮಿಟಿಯಿಂದ ಶಿಫಾರಸ್ಸುಗೊಂಡು ಕೇಂದ್ರ ಸಮಿತಿಗೆ ರವಾನೆಯಾಗಿತ್ತು ಎಂದು ಹೇಳಲಾಗಿದ್ದರೂ ಪಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು.ಕಿಶೋರ್ ಬೊಟ್ಯಾಡಿಯವರ ಪರ ಪ್ರಚಾರಕ್ಕೆ ಬಂದಿದ್ದ ನಳಿನ್ ಕುಮಾರ್ ಕಟೀಲ್ ಅವರು, ನನಗೆ ಪಕ್ಷ ಸಂಘಟನೆಯಲ್ಲಿ ಇಚ್ಚೆಯಿದೆ ಹೊರತು ರಾಜಕೀಯ,ಅಽಕಾರದಲ್ಲಿ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here