ಕೊರಿಂಗಿಲ ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಜಾಬಿರ್ ಡೆಮ್ಮಂಗರ, ಪ್ರ.ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೊರಿಂಗಿಲ

0

ಪುತ್ತೂರು: ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ ಅಸೋಸಿಯೇಷನ್ (ಎಂಐಎಸ್‌ಎ) ಕೊರಿಂಗಿಲ ಇದರ ಅಧ್ಯಕ್ಷರಾಗಿ ಜಾಬೀರ್ ಡೆಮ್ಮಂಗರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೊರಿಂಗಿಲ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಶಫೀಕ್ ಕೆ.ಎಂ.ಕೆ, ಜೊತೆ ಕಾರ್ಯದರ್ಶಿಯಾಗಿ ಜುನೈದ್ ಕೀಲಂಪಾಡಿ, ಕೋಶಾಧಿಕಾರಿಯಾಗಿ ಬಾತಿಶಾ ಕೊರಿಂಗಿಲ ಆಯ್ಕೆಯಾದರು.
ಪತ್ರಿಕಾ ಪ್ರತಿನಿಧಿಯಾಗಿ ಅಮ್ಮಿ ಕೊರಿಂಗಿಲ, ಸಂಘಟನಾ ಕಾರ್ಯದರ್ಶಿಯಾಗಿ ಸಿರಾಜ್ ಅಂಕತ್ತಲ, ಸೌದಿ ಅರೇಬಿಯಾ ರಿಸೀವರ್ ಆಗಿ ಉದೈಫ್ ಕೊರಿಂಗಿಲ, ಕತಾರ್ ರಿಸೀವರ್ ಆಗಿ ಶಾಜು ಟಿ. ಎ, ದುಬೈ ರಿಸೀವರ್ ಆಗಿ ಅಸ್ಕರ್ ಅಲಿ ಕೊರಿಂಗಿಲ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಕರೀಂ ಇಂಮ್ದಾದಿ, ಹಮೀದ್ ಫೈಝಿ ಆಯ್ಕೆಯಾದರು.

25 ಮಂದಿ ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. ಸಿರಾಜ್ ಅಂಕತ್ತಲ ಅಧ್ಯಕ್ಷತೆ ವಹಿಸಿದ್ದರು. ಬಾತಿಷ ಕೊರಿಂಗಿಲ ಉದ್ಘಾಟಿಸಿದರು. ಹಮೀದ್ ಫೈಝಿ ದುವಾ ಮಾಡಿದರು. ಝಕರಿಯ ಕೊರಿಂಗಿಲ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here