ಸರಕಾರಿ ಪ್ರಾಥಮಿಕ ಶಾಲೆಗಳಿಂದ ಸರಕಾರಿ ಪ್ರೌಢಶಾಲೆಗಳಿಂದ ಅಬ್ರಹಾಂ ಎಸ್.ಎ., ಜಗನ್ನಾಥ ಅರಿಯಡ್ಕ, ಆರೋಗ್ಯ ಇಲಾಖೆಯಲ್ಲಿ ಸುನಿಲ್ ವಿ. ಹಾಗೂ ಪದ್ಮಾವತಿ ಎಂ.ಆರ್ ಗೆಲುವು
ಪುತ್ತೂರು: ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ಬಾಕಿ ಉಳಿದ 3 ಇಲಾಖೆಗಳ 7 ಸ್ಥಾನಕ್ಕೆ ಅ.28ರಂದು ಚುನಾವಣೆ ನಡೆದಿದೆ. ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.
ಆರೋಗ್ಯ ಇಲಾಖೆಯ ಎರಡು ಸ್ಥಾನಗಳಿಗೆ ಸುನಿಲ್ ವಿ ಹಾಗೂ ಪದ್ಮಾವತಿ, ಸರಕಾರಿ ಪ್ರಾಥಮಿಕ ಶಾಲೆಗಳ ಮೂರು ಸ್ಥಾನಗಳಿಗೆ ಜೂಲಿಯಾನ್ ಮೊರಾಸ್ ತನುಜಾ ಮೋಹನ ಕಡವಾಡ್ಕರ್
ಮಹಮ್ಮದ್ ಅಶ್ರಫ್ ಕೆ., ಸರಕಾರಿ ಪ್ರೌಢಶಾಲೆಗಳ ಎರಡು ಸ್ಥಾನಗಳಿಗೆ ಅಬ್ರಹಾಂ ಎಸ್.ಎ., ಜಗನ್ನಾಥ ಅರಿಯಡ್ಕ ಚುನಾಯಿತರಾಗಿದ್ದಾರೆ.
3 ಇಲಾಖೆಗಳ 7 ಸ್ಥಾನಕ್ಕೆ 10 ಮಂದಿ ಕಣದಲ್ಲಿದ್ದರು:
ಪುತ್ತೂರಿನ 24 ಇಲಾಖೆಗಳ ಪೈಕಿ 21 ಇಲಾಖೆಗಳಿಂದ 25 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಸರಕಾರಿ ಪ್ರಾಥಮಿಕ ಶಾಲೆಗಳ 3 ಸ್ಥಾನ, ಸರಕಾರಿ ಪ್ರೌಢಶಾಲೆಗಳ 2 ಸ್ಥಾನ ಹಾಗೂ ಆರೋಗ್ಯ ಇಲಾಖೆಯ 2 ಸ್ಥಾನಗಳಿಗೆ ಸ್ಪರ್ದೆ ಏರ್ಪಟ್ಟಿತು.
ಸರಕಾರಿ ಪ್ರಾಥಮಿಕ ಶಾಲೆಗಳ 3 ಸ್ಥಾನಕ್ಕೆ ಜೂಲಿಯಾನ್ ಮೊರಾಸ್, ತನುಜಾ ಮೋಹನ ಕಡವಾಡ್ಕರ್, ಬಾಬು ಎಂ., ಮಹಮ್ಮದ್ ಅಶ್ರಫ್ ಕೆ. ಕಣದಲ್ಲಿದ್ದಾರೆ. ಸರಕಾರಿ ಪ್ರೌಢಶಾಲೆಗಳ 2 ಸ್ಥಾನಗಳಿಗೆ ಅಬ್ರಹಾಂ ಎಸ್.ಎ., ಕೆ.ಎಸ್ ವಿನೋದ್ ಕುಮಾರ್, ಜಗನ್ನಾಥ ಪಿ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 2 ಸ್ಥಾನಗಳಿಗೆ ಇಂದಿರಾ ಕೆ.ಎಸ್., ಪದ್ಮಾವತಿ ಎಂ.ಆರ್., ಸುನೀಲ್ ವಿ.ಕಣದಲ್ಲಿದ್ದರು.
ಮತದಾನ ಪ್ರಕ್ರಿಯೆಗಳು ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದಿತ್ತು. ಚುನಾವಣಾಧಿಕಾರಿಯಾಗಿ ನಿವೃತ್ತ ಉಪ ತಹಶಿಲ್ದಾರ್ ಸೂರಪ್ಪ ಗೌಡ, ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಶಿಕ್ಷಕ ಫ್ಯಾಟ್ರಿಕ್ ಲೋಬೋ ಕರ್ತವ್ಯ ನಿರ್ವಹಿಸಲಿದ್ದರು. ನಿವೃತ್ತ ಉಪ ತಹಶಿಲ್ದಾರ್ ರಾದ ರಾಮಣ್ಣ ನಾಯ್ಕ, ಶಶಿಕಲಾ, ಪಶು ಸಂಗೋಪನೆ ಇಲಾಖೆಯ ನಿವೃತ್ತ ಹೊನ್ನಪ್ಪ ಗೌಡ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ರಾಮಚಂದ್ರ ಭಟ್ ಮತದಾನ ಪ್ರಕ್ರಿಯೆಯಲ್ಲಿ ಸಹಕರಿಸಿದ್ದರು.