ಶೀನ ಮೂಲೆತ್ತಮಜಲು, ಜನಾರ್ದನ ಬಂಗೇರ, ಅಬೂಬಕ್ಕರ್ ಎನ್.ಎ
ಪುತ್ತೂರು: ಉಚ್ಚ ನ್ಯಾಯಾಲಯ ಬೆಂಗಳೂರು ಇದರ ನಿರ್ದೇಶನದಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಇವರಿಂದ ಪುತ್ತೂರು ಕಾನೂನು ಸೇವೆಗಳ ಸಮಿತಿಗೆ ಅರೆಕಾಲಿಕ ಸ್ವಯಂ ಸೇವಕರಾಗಿ ಶೀನ ಮೂಲೆತ್ತ ಮಜಲು, ಜನಾರ್ದನ ಬಂಗೇರ, ಯನ್ ಎ ಅಬುಬಕ್ಕರ್ ನೇಮಕ ಗೊಂಡಿದ್ದಾರೆ .
ಯಂ.ಶೀನ ಮೂಲೆತ್ತ ಮಜಲು ಇವರು ಕಡಬ ತಾಲೂಕಿನ ಆಲಂಕಾರು ನಿವಾಸಿಯಾಗಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ .ಪುತ್ತೂರಿನ ಸ್ವರ ಮಾಧುರ್ಯ ಸಂಗೀತ ಬಳಗದ ಸಕ್ರಿಯ ಸದಸ್ಯರಾಗಿದ್ದು ವಿವಿಧ ದಲಿತ ಸಂಘಟನೆ , ಸಮಾಜಮುಖಿ ಕಾರ್ಯಗಳಲ್ಲಿ ತನ್ನನು ತಾನು ತೊಡಗಿಸಿ ಕೊಂಡಿದ್ದಾರೆ. ಜನಾರ್ದನ ಬಂಗೇರ ರವರು ಕಡಬ ತಾಲೂಕು ಆಲಂಕಾರು ನಿವಾಸಿಯಾಗಿದ್ದು ಉದ್ಯಮಿಯಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ವಾಗಿದ್ದರೆ. ಯನ್ ಎ ಅಬೂಬಕ್ಕರ್ರವರು ನೆಕ್ಕರೆ ನಿವಾಸಿಯಾಗಿದ್ದು ದ ಕ ಜಿ.ಪ ಹಿ ಪ್ರ ಶಾಲೆ ಆಲಂಕಾರು ಇದರ ಮಾಜಿ ಎಸ್ಡಿಎಂಸಿ ಅಧ್ಯಕ್ಷರಾಗಿ ಹಾಗೂ ಮಾಜಿ ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾಗಿ ಅನುಭವ ಹೊಂದಿದ್ದಾರೆ.