ಸವಣೂರು : ಹೋಟೆಲ್ ಕಾರ್ತಿಕೇಯ ಶುಭಾರಂಭ

0

ಹೋಟೆಲ್ ಕಾರ್ತಿಕೇಯ ಒಳ್ಳೆಯ ಹೆಸರನ್ನು ಪಡೆಯುವಂತಾಗಲಿ- ಸವಣೂರು ಸೀತಾರಾಮ ರೈ


ಪುತ್ತೂರು: ಸವಣೂರು ಕಾರ್ತಿಕೇಯ ಕಾಂಪ್ಲೆಕ್ಸ್ ನಲ್ಲಿ ಅ.30 ರಂದು ಉಮೇಶ್ ಬಂಬಿಲರವರ ಮಾಲಕತ್ವದಲ್ಲಿ ಹೋಟೆಲ್ ಕಾರ್ತಿಕೇಯ ಶುಭಾರಂಭಗೊಂಡಿದೆ.


ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ದೀಪ ಬೆಳಗಿಸಿ, ಕಾರ್ತಿಕೇಯ ಹೋಟೆಲ್‌ನ್ನು ಉದ್ಘಾಟಿಸಿ, ಮಾತನಾಡಿ ಸವಣೂರು ಶರವೇಗದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಊರ-ಪರವೂರ ಜನರಿಗೆ ಹೋಟೆಲ್ ಅಗತ್ಯವಾಗಿ ಬೇಕಾಗಿದ್ದು, ಅತ್ಯುತ್ತಮವಾದ ವ್ಯವಸ್ಥೆಯಿಂದ ಕೂಡಿದ ಹೋಟೆಲ್ ಕಾರ್ತಿಕೇಯ ಈ ಭಾಗದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಹೋಟೆಲ್ ಆಗಿ ಹೆಸರನ್ನು ಪಡೆಯಲಿ ಎಂದು ಶುಭಹಾರೈಸಿದರು.


ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಸಿ.ಎ, ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಸತೀಶ್ ಬಲ್ಯಾಯ, ಮೋಹನ್ ರೈ ಕೆರೆಕೋಡಿ, ಪ್ರೇಮಚಂದ್ರ ಮೆದು, ಸಚಿನ್ ಸವಣೂರು, ಕೀರ್ತನ್ ಕೋಡಿಬೈಲು, ಪುರುಷೋತ್ತಮ್ ಕಾಯರ್ ಮಾರು, ಜಯರಾಮ ಗೌಡ ಕಣಿಚಾರು ಸಹಿತ ಅನೇಕ ಮಂದಿ ಭಾಗವಹಿಸಿ, ಶುಭಹಾರೈಸಿದರು.


ಪುರಂದರ ಬಂಬಿಲ, ಧನಂಜಯ ಬಂಬಿಲ, ಚಿದಾನಂದ ಕಾರ್ತಿಕೇಯ ಬಂಬಿಲ, ಚಂದ್ರಶೇಖರ್ ಬಂಬಿಲ, ಕಾರ್ತಿಕೇಯ ಕಾಂಪ್ಲೆಕ್ಸ್ ಮಾಲಕಿ ಜಲಜಾಕ್ಷಿ, ಧರ್ಮವತಿ ಬಂಬಿಲ ಅತಿಥಿಗಳನ್ನು ಗೌರವಿಸಿದರು. ಹೋಟೆಲ್ ಕಾರ್ತಿಕೇಯ ಮಾಲಕ ಉಮೇಶ್ ಬಂಬಿಲ ಸ್ವಾಗತಿಸಿ, ಪ್ರವೀಣ್ ಚೆನ್ನಾವರ ವಂದಿಸಿದರು.

ಬಾಳೆ ಎಲೆಯಲ್ಲಿ ಸಸ್ಯಹಾರಿ-ಮಾಂಸಹಾರಿ, ಊಟ
ಸವಣೂರು ಕಾರ್ತಿಕೇಯ ಹೋಟೆಲ್‌ನಲ್ಲಿ ಬಾಳೆ ಎಲೆಯಲ್ಲಿ ಸಸ್ಯಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಇದ್ದು, ಬೆಳಿಗ್ಗೆ ಮತ್ತು ಸಂಜೆ ಉಪಹಾರ, ಫಾಸ್ಟ್‌ಪುಡ್ ಅಲ್ಲದೇ ಜ್ಯೂಸ್ ಐಟಂ, ಐಸ್‌ಕ್ರೀಮ್ ಮತ್ತು ಕ್ಯಾಟರಿಂಗ್ ವ್ಯವಸ್ಥೆ ಕೂಡ ನಮ್ಮಲ್ಲಿ ಇದ್ದು, ಗ್ರಾಹಕರ ಪ್ರೋತ್ಸಾಹವನ್ನು ಬಯಸುತ್ತೇವೆ
ಉಮೇಶ್ ಬಂಬಿಲ ಮಾಲಕರು
ಹೋಟೆಲ್ ಕಾರ್ತಿಕೇಯ ಸವಣೂರು

LEAVE A REPLY

Please enter your comment!
Please enter your name here