ಗಾಯಾಳುವಿಗೆ ವೈದ್ಯಕೀಯ ವಿನ್ಯಾಸ ಹಾಸ್ಪಿಟಲ್ ಬೆಡ್ ಹಸ್ತಾಂತರ

0

ಪುತ್ತೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕುಂಜೂರು ಪಂಜ ನಿವಾಸಿ ತಿಮ್ಮಪ್ಪ ನಾಯ್ಕ ಅವರ ಪುತ್ರ ಚೇತಕ್ ಅವರಿಗೆ ಇತ್ತೀಚೆಗೆ ನಿಧನರಾದ ನೆಹರುನಗರ ಗಣೇಶ್ ಭಾಗ್ ನಿವಾಸಿ ಜಯಂತಿ ಅವರ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಹಯೋಗದಿಂದ ಸುಮಾರು ರೂ.20ಸಾವಿರ ಮೌಲ್ಯದ ವೈದ್ಯಕೀಯ ವಿನ್ಯಾಸದ ಹಾಸ್ಪಿಟಲ್ ಬೆಡ್ ಅನ್ನು ಹಸ್ತಾಂತರಿಸಲಾಯಿತು.


ಚೇತಕ್ ಅವರು ಪ್ರಸ್ತುತ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ದಿ. ಜಯಂತಿ ಅವರ ಪುತ್ರ ಉಮೇಶ್, ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ರೈ ಕೆದಂಬಾಡಿ ಮಠ, ಹಾಗು ಹರೀಶ್ ಮರುವಾಳ ಮತ್ತು ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here