ನೆಲ್ಯಾಡಿ: ಛತ್ತೀಸ್ಘಡದ ರಾಯ್ಪುರದಲ್ಲಿ ಅ.16ರಿಂದ 20ರ ತನಕ ನಡೆದ ಆಲ್ ಇಂಡಿಯಾ ಫಾರೆಸ್ಟ್ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟರ್ ಹೇಮಂತ್ ಡಿ.ಪಿ.ಯವರು 45 ರಿಂದ 53 ವಯೋಮಾನದವರ ವಿಭಾಗದ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಇವರು 4*100 ರಿಲೇಯಲ್ಲಿ ಬೆಳ್ಳಿ, 100 ಮೀ.ಓಟ ಹಾಗೂ ಲಾಂಗ್ಜಂಪ್ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಸುಳ್ಯ ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಪುಟ್ಟಪ್ಪ-ತಾರಾಮಣಿ ದಂಪತಿಯ ಪುತ್ರರಾದ ಇವರು ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ವಾಸ್ತವ್ಯವಿದ್ದಾರೆ.