ಪುತ್ತೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ನೀಡಲಾಗುವ 2024-25ನೇ ದ.ಕ ಜಿಲ್ಲಾ ಪ್ರಶಸ್ತಿಯನ್ನು ನ.1ರಂದು ದ.ಕ.ಜಿಲ್ಲಾಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನಿಂದ ಸಾಹಿತ್ಯ ಕ್ಷೇತ್ರ ವಿಭಾಗದಲ್ಲಿ ಸುದ್ದಿ ಬಿಡುಗಡೆ ಅಂಕಣಕಾರ ಪ್ರೊ.ವಿ.ಬಿ ಅರ್ತಿಕಜೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಾರ್ತಾಭಾರತಿ ಪತ್ರಿಕೆಯ ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್., ಸಮಾಜ ಸೇವಾ ವಿಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿ ಬಣ) ದ.ಕ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ತಾ.ಪಂ ಮಾಜಿ ಅಧ್ಯಕ್ಷ, ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಂ. ಮಹಮ್ಮದ್ ಬಡಗನ್ನೂರು, ಮಹಾ ರಕ್ತದಾನಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಬಹುಮುಖ ಪ್ರತಿಭೆ ಜ್ಞಾನ ರೈ, ಕಲಾ ಕ್ಷೇತ್ರದಲ್ಲಿ ಸ್ಯಾಕ್ಸೋಫೋನ್ ವಾದಕ ಎಂ. ವೇಣುಗೋಪಾಲ ಪುತ್ತೂರು, ಕಲಾ ಕ್ಷೇತ್ರದಲ್ಲಿ ನಾಟಕ ಕಲಾವಿದ ಕೇಶವ ಮಚ್ಚಿಮಲೆ, ಮಾಧ್ಯಮ ವಿಭಾಗದಲ್ಲಿ ನಮ್ಮ ಕುಡ್ಲ ವಾಹಿನಿ ನ್ಯೂಸ್ ಹೆಡ್ ರಾಜೇಶ್ ರಾವ್, ಹೊಸದಿಗಂತ ಪತ್ರಿಕೆಯ ಪುತ್ತೂರು ವರದಿಗಾರ ಐ.ಬಿ.ಸಂದೀಪ್ ಕುಮಾರ್, ಕಲಾ ಕ್ಷೇತ್ರದಲ್ಲಿ ಯಕ್ಷಗಾನ ಕಲಾವಿದ ಬಿ.ಶೇಖರ ಭಂಡಾರಿ, ಕಡಬ ತಾಲೂಕಿನಿಂದ ಕಲಾ ಕ್ಷೇತ್ರದಲ್ಲಿ ಕಡಬ ಶ್ರೀನಿವಾಸ ರೈ, ಬಂಟ್ವಾಳ ತಾಲೂಕಿನಿಂದ ದೈವಾರಾಧನೆ ಕ್ಷೇತ್ರದಲ್ಲಿ ಶೇಖರ ಪರವ, ಶಿಕ್ಷಣ ಕ್ಷೇತ್ರದಲ್ಲಿ ಕೆ.ಎನ್.ಗಂಗಾಧರ ಆಳ್ವ, ಸಮಾಜ ಸೇವೆ ಕ್ಷೇತ್ರದಲ್ಲಿ ಮೊಹಮ್ಮದ್ ಯಾಸೀರ್ ಕಲ್ಲಡ್ಕ, ಕೃಷಿ ಕ್ಷೇತ್ರದಲ್ಲಿ ಶ್ರೀಮತಿ ಸರೋಜಿನಿ ಶೆಟ್ಟಿ, ಸಂಘ ಸಂಸ್ಥೆಗಳಿಂದ ಕ್ರೀಡಾಕೂಟ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಪಾಣಾಜೆ ಗ್ರಾಮದ ಆರ್ಲಪದವು ಶ್ರೀ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಜಿಲ್ಲೆಯ 56 ಸಾಧಕರು ಹಾಗೂ 20 ಸಂಸ್ಥೆಗಳಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡಿದರು.ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕೋಡಿಕಲ್, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.